ಬೆಂಬಲಿಗರು

ಶುಕ್ರವಾರ, ಜುಲೈ 30, 2021

ಜಿ ಟಿ ನಾರಾಯಣ ರಾವ್

                      ಜಿ ಟಿ ನಾರಾಯಣ  ರಾವ್ 

 

                    





ನನ್ನ ಬಳಿ ನೀನೂ ಯಾಕೆ ಬರೆಯಬಾರದು ಎಂದು ಕೇಳಿದ ಒಬ್ಬರೇ ಒಬ್ಬ  ಸಹೃದಯಿ ಹಿರಿಯರಾದ ಶ್ರೀ ಜಿ ಟಿ ನಾರಾಯಣ ರಾಯರು .ಅತ್ರಿ ಪುಸ್ತಕ ಮನೆಗೆ ಹೋಗಿದ್ದಾಗ ಮಗ ಅಶೋಕ ವರ್ಧನ  ಚಾರಣಕ್ಕೆ ಹೋಗಿದ್ದ ಸಮಯ .ನನ್ನ ಪುಸ್ತಕಗಳ ಆಯ್ಕೆ ಅವರಿಗೆ ಸೋಜಿಗ ಉಂಟು ಮಾಡಿರ ಬೇಕು  . "ನೀವು ಯಾರು ?ಏನು ಮಾಡುತ್ತಿದ್ದೀರಿ ?ದಯವಿಟ್ಟು ಬರೆಯಿರಿ ,ನಾವೇ ಪ್ರಕಟಿಸುವಾ ."  ನನ್ನ ಕೈಬರಹ ಚೆನ್ನಾಗಿ ಇಲ್ಲದ ಕೀಳರಿಮೆಯಿಂದ  ನಾನು ಆ ಸಾಹಸಕ್ಕೆ ಹೋಗಿರಲಿಲ್ಲ .ಈಗ ಕಂಪ್ಯೂಟರ್  ಬರೆಯುವ ಕಾರಣ ಧೈರ್ಯ ಬಂದಿದೆ . 

  ಹಿಂದೊಮ್ಮೆ ಪುತ್ತೂರು ಕನ್ನಡ ಸಂಘದವರು ದಸರಾ ಸಂದರ್ಭದಲ್ಲಿ ಅವರ ಭಾಷಣ  ಏರ್ಪಡಿಸಿದ್ದರು . ವಿಷಯ  ಸಂಗೀತಾಸ್ವಾದನೆ ಇರ ಬೇಕು . ತಮ್ಮ ಮದುವೆಯ ದಿನ ವೆಂಕಟಪ್ಪ ಡೋಗ್ರ  ಅವರ ಸ್ಯಾಕ್ಸೋಫೋನ್ ವಾದನ ಆಲಿಸಿದ ತಾವು ಇತರ  ಎಲ್ಲಾ ನಡವಳಿಕೆ ಬದಿಗೊತ್ತ್ತಿ ತವಿಲ್ ಬಾರಿಸಿದೆ ಎಂದು ಹೇಳಿದ ನೆನಪು . ವಿಜ್ಞಾನ  ಮತ್ತು ಸಂಗೀತ ಅವರಿಗೆ ಹತ್ತಿರವಾದ ವಿಷಯಗಳು . ಅಧ್ಯಾಪನ ,ಸಾಹಿತ್ಯ ,ಸಹಕಾರಿ ಸಂಘ ,ಏನ್ ಸಿ ಸಿ ,ವಿಶ್ವ ಕೋಶ ಸಂಪಾದನೆ  ಎಲ್ಲಾ ರಂಗಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಸಿ ಕೊಂಡವರು . 

ಎಲ್ಲಂಕಿಂತಲೂ ಮಿಗಿಲಾಗಿ ನಾನು ಬಹಳ ಮೆಚ್ಚಿದ ಲೇಖಕ ಮಾಸ್ತಿ  ವೆಂಕಟೇಶ ಐಯ್ಯಂಗಾರ್ ಅವರ ಆತ್ಮ ಚರಿತ್ರೆ "ಭಾವ "ದ  ಸುಮಾರು ಆರುನೂರು ಪುಟಗಳನ್ನು ಇವರಿಂದ ಬರೆಸಿದರು . ಮಾಸ್ತಿ ವೀರ ನಾರಾಯಣ  ತಾನು ಕುಮಾರ ವ್ಯಾಸ ಅಲ್ಲ ಎಂದು ವಿನೀತರಾಗಿ ಜಿ ಟಿ ನಾ ತಮ್ಮ ಆತ್ಮ ಕತೆಯಲ್ಲಿ ಹೇಳಿಕೊಂಡಿದ್ದಾರೆ . 

ಅವರ  ಕೃತಿ ' ಮುಗಿಯದ ಪಯಣ ' ಕನ್ನಡದ ಉತ್ತಮ ಆತ್ಮಕತೆಗಳಲ್ಲಿ ಒಂದು. 2.12 .2006 ರಂದು ನಡೆದ ಅದರ ಬಿಡುಗಡೆ  ಸಮಾರಂಭದಲ್ಲಿ ನಾನೂ ಪಾಲು ಗೊಂಡಿದ್ದೆ .

 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ