ಕೊರೋನ ವಾರ್ಷಿಕೋತ್ಸವ
ವರುಷ ತುಂಬಿದ ಕೋವಿಡಾಸುರನ ಅಟ್ಟಹಾಸ
ಶಾಲೆ ಮರೆಯಿತು , ಮೊಬೈಲ್ ಮೆರೆಯಿತು ಮಾಯವಾಯಿತು ಕೂಟಗಳ ಹರ್ಷೋಲ್ಲಾಸ .
ಎಲ್ಲೆಲ್ಲಿ ಮುಖವಾಡ, ಕೆಲವು ಏರಿತು ಹಲವು ಕಳಚಿತು ,
ಮನುಜರ ಮುಖವಾಡ ಜಾರಿ ಕಂಡಿತು ದಾನವರ
ನಿನ್ನೆಯ ವರೆಗೆ ನಮ್ಮವನೆಂದವನ ಇಂದು ಕಂಡು ಹೌಹಾರಿದರು .
ಗೇಟುಗಳು ಮುಚ್ಚಿದವು ಮೊದಲು ಮನದ ,ಜತೆಗೆ ರಾಜ ಮಾರ್ಗದ .
ಕಡ್ಡಾಯ ಮಾಸ್ಕ ನಮಗೆ ನಿಮಗೆ ಹೊರಬರದೆ ಇರಲಿ ನಿಟ್ಟುಸಿರ ದಗೆ
ನಲ್ಲೆಗೆ ಹೇಗೆ ತಿಳಿದೀತು ನಲ್ಲನ ಹೂನಗೆ ಮೆಲ್ಲುಸಿರ ಬಗೆ ..
ಕಿಂಚಿತ್ ಊಹಿಸ ಬಹುದು ವೈರಸ್ ನಡೆ ,
ಆದರೆ ಕಾರಣಕೆ ನಿಲುಕದ ನಿಗೂಢ ರಾಜ ನಡೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ