ಕಂತು ಪಿತ
ಏತರ ಭಯ ನಿನಗೆ ಕಂತು ಪಿತನ ದಯೆ ಇರಲು
ಈ ತರಹದ ದೇವರ ನಾಮ ಕೇಳಿದಾಗ ಎಲ್ಲಾ ಕುತೂಹಲ . ಯಾರು ಈ ಕಂತು ?ವೆಂಕಟಸುಬ್ಬಯ್ಯ ನವರ ನಿಘಂಟಿನಲ್ಲಿ ಮನ್ಮಥ ನಿಗೆ ಕಂತು ಎಂದು ಕರೆವರು ಎಂದು ಬರೆದಿರುವರಂತೆ .ಆದರೆ ಈ ಹೆಸರಿನ ಮೂಲ ಏನು ಎಂಬುದು ಸಂಶೋಧನೆಗೆ ಯೋಗ್ಯ ಎಂದು ಹೇಳುವರು .
ನಮಗೆ ಸಾಮನ್ಯವಾಗಿ ಕಂತು ಎಂದರೆ ಹಣ ಇಲ್ಲ ,ಕೊಳ್ಳುವ ಅಸೆ ಇದೆ ಎಂಬ ಪರಿಸ್ಥಿತಿಯಲ್ಲಿ ಹಂತ ಹಂತವಾಗಿ ಪಾವತಿ ಮಾಡಿ ಕೊಳ್ಳುವ ವ್ಯವಸ್ಥೆ . ಉದಾಹಣೆಗೆ ನಾನು ನನ್ನ ಮೊದಲ ಟಿ ವಿ ಕೊಂಡದ್ದು ಕಂತಿನಲ್ಲಿ .ಅಂಗಡಿಯವರಿಗೆ ಬಾಕಿ ಹಣವನ್ನು ಪೋಸ್ಟ್ ಡೇಟೆಡ್ ಚೆಕ್ ಕೊಟ್ಟು ಸಾಮಗ್ರಿ ಮನೆಗೆ ತರುವುದು .ಒಂದು ರೀತಿಯ ಸಾಲವೇ ಅನ್ನಿ . ಕೊಳ್ಳಲು ನಿಜವಾಗಿ ಅರ್ಹತೆ ಇಲ್ಲ ,ಕಂತು ದೇವನ ಕೃಪೆಯಿಂದ ಅದು ಬರುವದು .
ಅದರಂತೆ ನಿಜವಾದ ಕಂತು (ಮನ್ಮಥ ) ಒಬ್ಬ ಯುವಕ (ಮತ್ತು ಯುವತಿ ವೈಸ್ ವರ್ಸಾ )ನಿಗೆ ಯುವತಿಯ ಮೇಲೆ ಆಸೆ ಹುಟ್ಟಿಸುವನಲ್ಲದೆ ಆಕೆಯ ಸ್ನೇಹ ಸಂಪಾದಿಸಸಲು ಇವನಲ್ಲಿ ಇಲ್ಲದ ಆಕರ್ಷಣೆಯನ್ನು ತುಂಬಿಕೊಳ್ಳಲು ಕಂತಿನಲ್ಲಿ ಕೆಲವು ಚಮತ್ಕಾರಗಳನ್ನು (ಉದಾ ವಾಟ್ಸ್ ಅಪ್ ಆಕರ್ಷಕ ಸಂದೇಶ ಕಳುಹಿಸುವ ) )ತುಂಬುವನು .
ಇ. ಸಾ .ಬೇ . QED
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ