ಮೇಲಿನ ಚಿತ್ರದಲ್ಲಿ ಕಾಣುವದು ಪುತ್ತೂರಿನ ಹಿರಿಯ ವೈದ್ಯರಾದ ಡಾ ಜಿ ಏನ್ ವಿಠ್ಠಲ್ . ಪಂಜದ ಸಮೀಪ ಕುಗ್ರಾಮ ನಾಯ್ಕೆರೆ ಯಲ್ಲಿ ೧೯೪೫ ರಲ್ಲಿ ಜನಿಸಿ ಪಂಜ ,ಪುತ್ತೂರು ಮತ್ತು ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿ ಕೆಲ ಕಾಲ ಪ್ರಸಿದ್ಧ ಪುತ್ತೂರು ಬೋರ್ಡ್ ಹೈ ಸ್ಕೂಲ್ ನಲ್ಲಿ ಅಧ್ಯಾಪನ ಮಾಡಿ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ ಪೂರೈಸಿ ಮಂಡ್ಯ ಜಿಲ್ಲೆ ಮದ್ದೂರಿನಲ್ಲಿ ಮಿಷನ್ ಆಸ್ಪತ್ರೆ ಯಲ್ಲಿ ಸೇವೆ .ಆಮೇಲೆ ಅಲ್ಲಿಯೇ ಖಾಸಗಿ ಕ್ಲಿನಿಕ್ ಹಾಕಿ ಪ್ರಾಕ್ಟೀಸ್ .ಕೆಲ ಸಮಯ ಮಾನಾ ರಾಯಪುರ ದಲ್ಲಿ ಸ್ಥಾಪಿತ ಬಾಂಗ್ಲಾದೇಶಿ ನಿರಾಶ್ರಿತರ ಶಿಬಿರದಲ್ಲಿ ವೈದ್ಯಕೀಯ ಸೇವೆ . ೧೯೭೬ ರಲ್ಲಿ ಇರಾನ ದೇಶಕ್ಕೆ ತೆರಳಿ ೧೯೮೯ ರ ವರೆಗೆ ಅಲ್ಲಿಯ ಸರಕಾರಿ ವೈದ್ಯಕೀಯ ಸೇವೆಯಲ್ಲಿ . ಇರಾನಿನ ಮಂಜಿಲ್ ಗಿಲಾನ್ ನಲ್ಲಿ ಇರಾಕೀ ಯುದ್ಧ ಕೈದಿಗಳ ಅರೋಗ್ಯ ದೇಖೆ ರೇಖೆ ..
ಆಸ್ಟ್ರಿಯಾ ದೇಶದ ವಿಯೆನ್ನಾ ದಲ್ಲಿ ಶಿಶು ರೋಗಗಳ ಬಗ್ಗೆ ವಿಶೇಷ ತರಬೇತಿ ಪಡೆದಿರುವ ಇವರು ಪುತ್ತೂರಿನ ಪ್ರಥಮ ಅಲ್ಟ್ರಾ ಸೌಂಡ್ ಸ್ಕ್ಯಾನ್ ಕೇಂದ್ರ ಅಪೊಲೊ ಸ್ಕ್ಯಾನ್ ಸೆಂಟರ್ ಸ್ಥಾಪಿಸಿ ಈ ಊರಿನಲ್ಲಿ ರೋಗ ನಿಧಾನದ ಹೊಸ ವಿಧಾನ ಪರಿಚಯಿಸಿ ಅದಕ್ಕೋಸ್ಕರ ಮಂಗಳೂರಿಗೆ ಹೋಗುವ ಅವಶ್ಯ ಕತೆ ನಿವಾರಿಸಿದರು .
ಹಳ್ಳಿಯ ರೋಗಿಗಳಿಗೆ ಸದಾ ಸಾಂತ್ವನ ಸಹಾಯ ಹಸ್ತ
ನಾನು ಪ್ರಸ್ತುತ ಕೆಲಸ ಮಾಡುತ್ತಿರುವ ಪುತ್ತೂರು ಸಿಟಿ ಆಸ್ಪತ್ರೆಯ ಸ್ಥಾಪಕ ಸದಸ್ಯರು ಆಗಿರುವ ಇವರು ಸದ್ಯ ವೃದ್ದಾಪ್ಯ ಮತ್ತು ಅರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು , ಆಗಾಗ ಅವರಲ್ಲಿ ತೆರಳಿ ಗೌರವ ಸಲ್ಲಿಸಿ ಅರೋಗ್ಯ ವಿಚಾರಣೆ ಮಾಡುವೆನು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ