ನಮ್ಮ ಹೆಮ್ಮೆಯ ನಿಶ್ಚಿತ್
ಈ ಚಿತ್ರದಲ್ಲಿ ಇರುವ ಯುವಕ ನಿಶ್ಚಿತ್ . ನಮ್ಮ ನೆರೆ (ಹೊರೆಯಂತೂ ಅಲ್ಲವೇ ಅಲ್ಲ )ಕರೆ ಯಲ್ಲಿ ಅವನ ಮನೆ . ತಾಯಿ ನಿವೃತ್ತ ಬಿ ಎಸ ಏನ್ ಎಲ್ ಉದ್ಯೋಗಿ . ಹುಟ್ಟುವಾಗಲೇ ವಾಕ್ ಮತ್ತು ಶ್ರವಣ ಶಕ್ತಿ ಇಲ್ಲ . ಆದರೆ ದೃತಿ ಕೆಟ್ಟು ಮನೆಯಲ್ಲಿ ಕೂರಿಸಲಿಲ್ಲ .ವಾಮನೂರಿನ ಮಂಗಳ ಜ್ಯೋತಿ ವಿಕಲ ಚೇತನ ಸಂಯೋಜಿತ ಶಾಲೆಯಲ್ಲಿ ಅಕ್ಷರಾಭ್ಯಾಸ ಮಾಡಿ ಈಗ ಅಲ್ಲಿಯೇ ಪಕ್ಕದ ಪದ್ಮಾ ಆಟೋ ಗ್ಯಾರೇಜು ನಲ್ಲಿ ಕೆಲಸ .ಬೆಳಗ್ಗೆ ಪುತ್ತೂರಿನಿಂದ ಬಸ್ ಹಿಡಿದು ಮಂಗಳೂರು ,ಅಲ್ಲಿಂದ ಇನ್ನೊಂದರಲ್ಲಿ ವಾಮ೦ಜೂರಿಗೆ ಹೋಗಿ ಬರುವನು .ದಾರಿಯಲ್ಲಿ ನಾನು ಆಸ್ಪತ್ರೆಗೆ ಹೋಗುವಾಗ ಮುಗುಳ್ನಗೆ ಮತ್ತು ನಮಸ್ಕಾರ . ಮೇಯ್ನ್ ರೋಡ್ ವರೆಗೆ ಕಾರಿನಲ್ಲಿ ಬಿಡುವೆನು ಎಂದರೆ ಬೇಡ ಬೇಡ ನಡೆದೇ ಬರುವೆನು ಎನ್ನುವನು .
ಇವನಿಗೆ ಹೀಗೆ ಆಯಿತು ಎಂದು ಬೇಸರವೇ ಎಂದು ಕೇಳಿದ್ದಕ್ಕೆ "ಖಂಡಿತಾ ಇಲ್ಲ ,ನಮಗೆ ಮಹಾಲಿಂಗೇಶ್ವರ ದೇವರೇ ಇಷ್ಟು ಒಳ್ಳೆಯ ಮಗ ಕೊಟ್ಟಿದ್ದಾನೆ "ಎನ್ನುವರು ತಾಯಿ ಶ್ರೀಮತಿ ರತ್ನಾ .
ಕರಾಟೆ ತರಬೇತಿ ಕೂಡಾ ಪಡೆದಿರುವ ಈತ ಬ್ಲಾಕ್ ಬೆಲ್ಟ್ .
ನನ್ನ ಪಕ್ಕದ ಮನೆ ಸನ್ಮಿತ್ರ ಈತ ಎನ್ನಲು ನನಗೆ ಹೆಮ್ಮೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ