ಚಾತಕ ಪಕ್ಷಿ
ನಮ್ಮಲ್ಲಿ ಕಾಯುವುದಕ್ಕೆ ಹಲವು ಉಪಮೆಗಳನ್ನು ಉಪಯೋಗಿಸುವದು ರೂಢಿ .ಶಬರಿಯು ರಾಮನಿಗೆ ಕಾದಂತೆ ಅಥವಾ ಚಾತಕ ಪಕ್ಷಿಯಂತೆ ಎನ್ನುವುದು ಜನಪ್ರಿಯ .ಅದರಲ್ಲಿ ಶಬರಿ ರಾಮನ ಕಥೆ ಎಲ್ಲರಿಗೂ ತಿಳಿದಿರುವದು .ಆದರೆ ಏನಿದು ಚಾತಕ ಪಕ್ಷಿ ?ಯಾರಿಗೆ ಅದು ಕಾಯುವುದು ?
ಚಾತಕ ಪಕ್ಷಿ ಕೋಗಿಲೆ ಜಾತಿಗೆ ಸೇರಿದ ಹಕ್ಕಿ .ಆಫ್ರಿಕಾ ಮತ್ತು ಏಷ್ಯಾ ಖಂಡಗಳಲ್ಲಿ ಕಾಣಿಸಿಕೊಳ್ಳುವುದು .ಇದಕ್ಕೆ ಒಂದು ಜುಟ್ಟು ಇರುವ ಕಾರಣ ಜುಟ್ಟು ಕೋಗಿಲೆ ಎಂದೂ ಕರೆಯುವರು .ಇಂಗ್ಲಿಷ್ ನಲ್ಲಿ ಜಾಕೋಬಿನ್ ಕುಕ್ಕೂ ಎಂದು ಕರೆಯಲ್ಪಡುವುದು .
ಇದರ ದರ್ಶನ ಮುಂಗಾರು ಮಳೆಯ ಆಗಮನದ ಸೂಚನೆ ಎಂಬ ಪ್ರತೀತಿ .ಅಲ್ಲದೆ ಇದು ಮಳೆ ನೀರನ್ನೇ ಕುಡಿದು ಬದುಕುವುದು ಎಂಬ ನಂಬಿಕೆ .
ಇಲ್ಲಿ ಚಾತಕ ಪಕ್ಷಿ ಮುಂಗಾರು ಮಳೆಗಾಗಿ ಕಾಯುವುದು ;ಜನರು ಚಾತಕ ಪಕ್ಷಿ ಆಗಮನ (ಮತ್ತು ಅದರ ಹಿಂದೆ ಬರುವ ಮುಂಗಾರು ಮಳೆಗೆ )ಕ್ಕೆ ದಾರಿ ನೋಡುವರು .
ಪ್ರಜೆಗಳು ಒಳ್ಳೆಯ ದಿನಗಳಿಗೆ ,ರೈತರು ಒಳ್ಳೆಯ ಮಳೆಗೆ ,ಪ್ರೇಮಿಯು ಪ್ರೇಮಿಯ ಸಂದೇಶ ಮತ್ತು ದರ್ಶನಕ್ಕೆ , ತಾಯಿ ದೂರ ದೇಶಕ್ಕೆ ಹೋದ ಮಗನ ಆಗಮನಕ್ಕೆ ,ಹೆತ್ತವರು ಕೋರೋನ ಕಡಿಮೆಯಾಗಿ ಮಕ್ಕಳ ಶಾಲೆ ಪುನರಾರಂಭ ಆಗಲು ,ಹೀಗೆ ಹಲವರು ಚಾತಕ ಪಕ್ಷಿಯಂತೆ ಕಾಯುತ್ತಲಿರುವರು .
ಕಾಯುವವರಿಗೆ ತಾಳ್ಮೆ ಬೇಕಾಗುವುದು
ತಾಳುವಿಕೆಗಿಂತ ತಪವು ಇಲ್ಲ ಕೇಳಬಲ್ಲವರಿಗೆ ಹೇಳುವೆನು ಸೊಲ್ಲ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ