ಬೆಂಬಲಿಗರು

ಗುರುವಾರ, ನವೆಂಬರ್ 5, 2026

ಸಾಧಕ ಪಥ ಪ್ರದರ್ಶಕ ವೈದ್ಯ ಡಾ ಶಶಿಧರ ಬೈಕುಂಜೆ

 

                                                                                                                                    ಸಿಂಗಾಪುರ ದೇಶದ ಈ ವರ್ಷದ ಸಾರ್ವಜನಿಕ ಆಢಳಿತ ಪದಕ ವಿಜೇತರಾದ ಡಾ ಶಶಿಧರ ಬೈಕುಂಜೆ ನಮ್ಮ ಊರಿನವರು . 

ಇಂಗ್ಲೆಂಡ್ ದೇಶದಲ್ಲಿ ಮೂತ್ರ ಪಿಂಡ ಕಾಯಿಲೆ ಗಳ ಬಗ್ಗೆ ಉನ್ನತ ಅಧ್ಯಯನ ಮತ್ತು ಸೇವೆ ಸಲ್ಲಿಸಿ ತಾಯಿ ನಾಡಿಗೆ ಸೇವೆ ಸಲ್ಲಿಸುವ ಘನ ಉದ್ದೇಶದಿಂದ ಊರಿಗೆ ಮರಳಿ ದೇರಳಕಟ್ಟೆ ಕೆ ಎಸ್ ಹೆಗ್ಡೆ  ಮೆಡಿಕಲ್ ಅಕಾಡೆಮಿ ಸೇರಿದ ಇವರು  ಅಲ್ಲಿ ಈ ವಿಭಾಗ ಬೆಳವಣಿಗೆ ಯಲ್ಲಿ ಪ್ರಮುಖ ಪಾತ್ರ ವಹಿಸಿದರು . ಮೂತ್ರ ಪಿಂಡ ರೋಗ ತಡೆಗಟ್ಟುವಿಕೆ ,ಕಂಡು ಹಿಡಿಯುವಿಕೆ ,ಡೈಯಾಲಿಸಿಸ್ ಮತ್ತು ಮೂತ್ರ ಪಿಂಡ ಕಶಿ ವಿಭಾಗ ಗಳಲ್ಲಿ ಸಾಧನೆ . ಡೈಯಾಲಿಸಿಸ್ ಅವಲಂಬಿತ ರೋಗಿಗಗಳು ಅದಕ್ಕಾಗಿ ಮಂಗಳೂರಿಗೆ ಬರಬೇಕಿತ್ತು . ಅದಕ್ಕಾಗಿ ಪುತ್ತೂರು ಕಾರ್ಕಳ ಗಳಲ್ಲಿ  ಡೈಯಾಲಿಸಿಸ್ ಉಪಕೇಂದ್ರ ಗಳನ್ನು ಸ್ಥಾಪಿಸಿ ಈ ಭಾಗದ ಅನೇಕ ರೋಗಿಗಳಿಗೆ ಅನುಕೂಲ ವಾಯಿತು . ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಅವರು ಸ್ಥಾಪಿಸಿದ ಕೇಂದ್ರ ಪುತ್ತೂರು ಭಾಗದ ಮೊದಲನೆಯದು . ಈಗ ಪುತ್ತೂರಿನಲ್ಲಿ ಇನ್ನೆರಡು ,ಸುಳ್ಯ ದಲ್ಲಿ ಇಂತಹ ಕೇಂದ್ರಗಳು ಇವೆ . 

ಹಸನ್ಮುಖಿ ಮತ್ತು ಮೃದು ಭಾಷಿ ಯಾದ ಈ ಡಾಕ್ಟರ್ ರೋಗಿಗಳ ಆರೈಕೆಯಲ್ಲಿ ವಹಿಸುತ್ತಿದ್ದ ಮುತುವರ್ಜಿ ನಾನು ಕಣ್ಣಾರೆ ಕಂಡಿರುವೆನು . 

ಆದರೆ ವ್ಯವಸ್ಥೆ ಅವರು ನಮ್ಮ ದೇಶದಲ್ಲಿ ಮುಂದುವರಿಯಲು ಅನುಕೂಲ ವಿರದುದರಿಂದ ಸಿಂಗಾಪುರ ದೇಶ ಕ್ಕೆ ತೆರಳಿ ಪ್ರಸ್ತುತ  ಸೆನ್ಗ್ಕಾಂಗ್ ಸಾರ್ವಜನಿಕ   ಆಸ್ಪತ್ರೆಯ ಮೂತ್ರ ಪಿಂಡ ರೋಗ ವಿಭಾಗದ ಮುಖ್ಯಸ್ಥ ರಾಗಿ ಚಿಕಿತ್ಸೆ ಅಧ್ಯಾಪನ  ಮತ್ತು ಸಂಶೋಧನೆ ಯಲ್ಲಿ ತೊಡಗಿಸಿ ಕೊಂಡಿರುವರು . 2022 ರಲ್ಲಿ ಸಿಂಗಾಪುರ ದ ಆರೋಗ್ಯ ಗುಣಮಟ್ಟ ಸೇವಾ ಪ್ರಶಸ್ತಿ ಕೂಡಾ ಇವರಿಗೆ ಸಂದಿರುವುದು ಹೆಮ್ಮೆಯ ವಿಷಯ . 

ಪತ್ನಿ  ಡಾ ವಿದ್ಯಾ ಉಪಾಧ್ಯಾಯ ಪ್ರತಿಭಾವಂತ  ವೈದ್ಯೆ , ರೇಡಿಯೋಲಾಜಿಸ್ಟ ಆಗಿದ್ದು ತಮ್ಮ ವಿಭಾಗದಲ್ಲಿ ಹೆಸರು ಮಾಡಿರುವರು