ನಮ್ಮ ಮನೆ ಜಗಲಿಯಲ್ಲಿ ಸೆಖೆಗಾಲಕ್ಕೆ ಆಗಲಿ ಎಂದು ಒಂದು ಫ್ಯಾನ್ ಹಾಕಿಸಿದ್ದೆವು .ಕಳೆದ ಕೆಲವು ತಿಂಗಳಿನಿಂದ ಹಕ್ಕಿ ಅದರ ಮೇಲೆ ಗೂಡು ಕಟ್ಟಲು ಶತ ಪ್ರಯತ್ನ ಮಾಡುತ್ತಿದೆ ,ದಿನವೂ ಆ ಕಸವನ್ನು ಗುಡಿಸುವುದೇ ಪ್ರಯಾಸ ಆಗ ತೊಡಗಿತು . ಹಕ್ಕಿಗಳು ಕಡ್ಡಿ ಎಲೆ ಜತೆ ಹಾವಿನ ಪೊರೆ ಎಲ್ಲೆಲ್ಲಿಂದಲೋ ಹೆಕ್ಕಿ ತರುತ್ತಿದ್ದು ಅವುಗಳ ಸಂಗ್ರಹ ವೈವಿಧ್ಯ ಮತ್ತು ತಾಂತ್ರಿಕ ಜ್ಞಾನ ಬೆರಗು ಹುಟ್ಟಿಸುವಂತಹದು .
ಹಕ್ಕಿಗಳ ಮರಳಿ ಯತ್ನವ ಮಾಡು ಎಂಬ ಶ್ರಮ ಸುಮ್ಮನೆ ವ್ಯರ್ಥ ವಾಗುವುದು ಮತ್ತು ದಿನವಿಡೀ ಕಸ ಶೇಖರಣೆ ಕಂಡು ಇಂದು ಮುಂಜಾನೆ ಆ ಫ್ಯಾನನ್ನು ಅವರೋಹಣ ಮಾಡಿದೆನು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ