ಯಾವುದೇ ಸ್ತ್ರೀ ರೋಗ ತಜ್ನರ ಬಳಿಗೆ ತಪಾಸಣೆಗೆ ಹೋದ ಗರ್ಭಿಣಿಯರ ದಾಖಲೆಯ ಮೇಲ್ಬಾಗ ಎರಡು ಷಾರ್ಟ್ ಫೋರ್ಮ್ ಗಳನ್ನು ನೋಡ ಬಹುದು .ಒಂದು ಎಲ್ ಎಂ ಪಿ (LMP) ,ಇನ್ನೊಂದು ಇ ಡಿ ಡಿ (E D D). ಕೊನೆಯ ಋತು ಸ್ರಾವ ದ ಮೊದಲನೇ ದಿನವನ್ನು ಎಲ್ ಎಂ ಪಿ(Last Menstrual Period) ತೋರಿಸುತ್ತದೆ . . ಇ ಡಿ ಡಿ ಎಂದರೆ ಸಂಭವನೀಯ ಹೆರಿಗೆ ದಿನಾಂಕ(Expected Date of Delivery) . ಪ್ರಸವ ತಜ್ನರ ಬಳಿಯಿಂದ ಬಂದ ಗರ್ಭಿಣಿಯರು ತಮಗೆ ಹೆರಿಗೆಗೆ ಈ ದಿನಾಂಕ ಕೊಟ್ಟಿದ್ದಾರೆ ಎಂದು ಹೇಳುವರು .ಇದು ಅವರು ಬಲ್ಮೆ ಇಟ್ಟು ಹೇಳುವುದಲ್ಲ .
ಪೂರ್ಣ ಬೆಳವಣಿಗೆಗೆ ತಾಯ ಗರ್ಭದ ಒಳಗೆ ಸಾಮಾನ್ಯವಾಗಿ ಶಿಶುವಿನ ವಾಸ 280 ದಿನಗಳು . ಅದನ್ನು ಗಮನದಲ್ಲಿ ಇಟ್ಟು ಕೊಂಡು ಕೊನೇ ಋತು ಸ್ರಾವದ ಆರಂಭದ ತಾರೀಕಿಗೆ ಏಳು ಸೇರಿಸಿ ,ಮೂರು ತಿಂಗಳು ಹಿಂದೆ ಹೋದಾಗ ಬರುವ ದಿನಾಂಕ ಮುಂದಿನ ವರ್ಷದಲ್ಲಿ ಸುಮಾರಾಗಿ ಹೆರಿಗೆ ದಿನ ಆಗಿರುತ್ತದೆ . ಉದಾಹರಣೆಗೆ ಎಲ್ ಎಂ ಪಿ 20022 ಏಪ್ರಿಲ್ 15 ಆಗಿದ್ದರೆ ಏಳು ಸೇರಿಸಿದಾಗ 2022 ಏಪ್ರಿಲ್ 22 ಆಯಿತು .ಮೂರು ತಿಂಗಳು ಹಿಂದೆ ಅಂದರೆ 2022 ಜನವರಿ 22. ಒಂದು ವರ್ಷ ಮುಂದೆ ಅದೇ ದಿನ 2023 ರ ಜನವರಿ 22 . ಅದು ಇಡಿ ಡಿ .
ಈಗ ಅಲ್ಟ್ರಾ ಸೌಂಡ್ ಸ್ಕ್ಯಾನ್ ಮೂಲಕವೂ ಸಂಭವನೀಯ ಹೆರಿಗೆ ದಿನಾಂಕ ಹೇಳುವರು .ಅದು ಹೆಚ್ಚು ನಿಖರ ಇರುವುದಲ್ಲದೆ ದಿನ ಲೆಕ್ಕ ಮತ್ತು ಬೆಳವಣಿಗೆ ಲೆಕ್ಕ ಒಂದ್ಕಕೊಂದು ತಾಳೆ ಆಗುತ್ತದೆಯೋ ಎಂದು ಕೂಡಾ ಸೂಚಿಸುವದು .
ಇನ್ನೊಂದು ಅಪಭ್ರಂಶ ಕೂಡಾ ನೀವು ಕಾಣ ಬಹುದು . ಒಂದು ಗ್ರಾವಿಡಾ (GRAVIDA )ಎಷ್ಟನೇ ಗರ್ಭಿಣಿ ಎಂದು ಸೂಚಿಸುವುದು . ಪ್ಯಾರಾ ಎಂದರೆ ಪ್ರಸವಿದರೆ ಶಿಶು ಬದುಕ ಸಾಧ್ಯವಾಗುವ ವರೆಗೆ ಮುಂದುವರಿದವು ಎಷ್ಟು ಎಂದು ಸೂಚಿಸಿದರೆ ಅದಕ್ಕಿಂತ ಮೊದಲೇ ಆದರೆ ಗರ್ಭಪಾತ . ಗ್ರಾವಿಡಾ ವನ್ನು Gr ಎಂದೂ ಪ್ಯಾರಾ ವನ್ನು P ಎಂದೂ ಗರ್ಭಪಾತವನ್ನು A(Abortion) ಎಂದೂ ಸೂಚಿಸುವರು .ಉದಾ ಒಂದು ಮಗು ಇದ್ದು ಎರಡನೇ ಗರ್ಭಿಣಿಗೆ Gr 2 P1 ಇತ್ಯಾದಿ .
ಅದಕ್ಕೆ LD (Last Delivery) ಎಂದರೆ ಕೊನೆಯ ಹೆರಿಗೆ ಯಾವಾಗ ಎಂಬ ಸೂಚಕವೂ ಸೇರುವುದಲ್ಲದೆ ಅದು ತಿಂಗಳು ತುಂಬಿ ಸಹಜ ಹೆರಿಗೆ ಆದರೆ FTND (Full Term Normal Delivery )ಶಸ್ತ್ರ ಚಿಕಿತ್ಸೆ ಮೂಲಕ ಆದರೆ LSCS(Lower Segment Caesarean Section)ಎಂಬ ಷಾರ್ಟ್ ಫೋರ್ಮ್ ಕಾಣ ಬಹುದು .
ಒಳ್ಳೆಯ ದಿನ ಮತ್ತು ನಕ್ಷತ್ರ ಬೇಕು ಎಂದು ಮೊದಲೇ ಹೆರಿಗೆ ಮಾಡಿಸಿ ಎಂದು ಗೋಗೆರೆಯುವವರೂ ಇದ್ದಾರೆ .ತಮ್ಮ ವಾಹನಕ್ಕೆ ಎಷ್ಟು ಕೊಟ್ಟಾದರೂ ಇಷ್ಟದ ಮತ್ತು ಅದೃಷ್ಟದ ನಂಬರ್ Reg. ಪಡೆಯುವಂತೆ .
ಬಾಲಂಗೋಚಿ : ಈಗ ಒನ್ ಲೈನ್ ಅಂಗಡಿಗಳಿಂದ ವಸ್ತು ಖರೀದಿಸುವಾಗ ಕೊರಿಯರ್ ಕಂಪೆನಿ ಯವರು EDD ಮೊದಲೇ ಸೂಚಿಸುವರು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ