ವಾರದ ನನಗೆ ಮೊಮ್ಮಗು ಆದ ವಿಷಯ ತಿಳಿಸಿದ್ದೆ ತಾನೇ .ಜನನ ದೂರದ ಅಮೆರಿಕಾ ದಲ್ಲಿ .ಆದುದರಿಂದ ಇಂದು ಮೊಬೈಲ್ ಮೂಲಕ ಅವನನ್ನು ನನ್ನ ಮಗ ಸೊಸೆ ತೋರಿಸಿದಾಗ ಸ್ವಲ್ಪ ಅಳುತ್ತಿದ್ದ . ಕೂಡಲೇ ನನಗೆ ಯಾರು ಮಗಾ ನಿನ್ನನ್ನು ಅಳಿಸಿದ್ದು ,ಅಪ್ಪನಾ ಅವನಿಗೆ ಹಪ್ಪ ಮಾಡುತ್ತೇನೆ (ಶಿಕ್ಷಿಸುತ್ತೇನೆ )ಎಂದು ಬಾಯಲ್ಲಿ ಬಂತು .ಕಾಕತಾಳೀಯ ವಾಗಿ ಮಗು ಅಳು ನಿಲ್ಲಿಸಿತು .
ಹಿಂದೆ ದೊಡ್ಡ ಕುಟುಂಬಗಳ ಒಂದು ಅನುಕೂಲ ಇದು ಆಗಿತ್ತು .ತಪ್ಪು ಮಾಡಿದಾಗ ತಂದೆ ಹೊಡೆದರೆ ಅಜ್ಜನ ಬಳಿ ,ಅಮ್ಮ ಬಡಿದರೆ ಅಜ್ಜಿ ಬಳಿ ದೂರು ಹೇಳುವುದು .ಅವರು ಸಮಾಧಾನ ಹೇಳಿ ಪೆಟ್ಟು ಕೊಟ್ಟವರಿಗೆ ಚಿವುಟಿದ ಹಾಗೆಯೋ ,ಹೊಡೆದ ಹಾಗೆಯೋ ನಟಿಸುವರು .ಜತೆಗೆ 'ಹಪ್ಪ ಅವನ ಹಾಂಕಾರವೇ ಮಗುವಿಗೆ ಸುಮ್ಮನೇ ಬಡಿಯುವುದು' ಎನ್ನುವರು ,; ಮಗುವಿಗೆ ತಿನ್ನಲು ಕಲ್ಲುಸಕ್ಕರೆ ಇತ್ಯಾದಿ ಕೊಡುವರು . ಮಗುವಿನ ಅಳು ನಗುವಾಗಿ ಮಾರ್ಪಾಡುವುದು . ಇಟ್ಟಿಗೆ ಕೇಸ್ ಪುಸ್ಕಾ ಆಗುವುದು .
ಈಗ ಸಣ್ಣ ಕುಟುಂಬಗಳಲ್ಲಿ ಇದು ಕಾಣ ಸಿಗದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ