ನಿನ್ನೆ ಸಂಜೆ "ಪಂಚವಟಿ " ಯಲ್ಲಿ ವಾಸವಿರುವ ಹಿರಿಯರು ಶ್ರೀ ಬಲ್ನಾಡು ಸುಬ್ಬಣ್ಣ ಭಟ್ ಅವರ ಜತೆ ಕಳೆದು ನಾವು ಪುನರ್ಯವ್ವನ ಪಡೆದ ಅನುಭವ .ಸಜ್ಜನ ವಿದ್ವದ್ಜನ ರೊಡನೆ ಕಾಲ ಕಳೆಯುವುದೇ ಒಂದು ಟಾನಿಕ್ .
ಈ ಹಿರಿಯರ ಬಗ್ಗೆ ಹಿಂದೆಯೇ ಬರೆದಿದ್ದೇನೆ .ಎಸ್ ಬಿ ಹೇಟ್ ಎಂಬ ಕಾವ್ಯನಾಮದಿಂದ ತ್ರಿಪದಿ ಚೌಪದಿಗಳನ್ನು ರಚಿಸಿರುತ್ತಾರೆ . ಹಿಂದೆ ಶಿಂಗಣ್ಣ ರಾಮಕೃಷ್ಣ ಶಾಸ್ತ್ರೀ ಅವರ ಇಂದ್ರ ಧನುಸ್ ,ಜಿ ನಾರಾಯಣ ಅವರ ವಿನೋದ ಪತ್ರಿಕೆ ಗಳಲ್ಲಿ ಇವರ ಲೇಖನ ಪದ್ಯ ಗಳು ಪ್ರಕಟವಾಗುತ್ತಿದ್ದವು . ಗಣಿತಾಸಕ್ತಿ ಮತ್ತು ಹಾಸ್ಯ ಪ್ರಜ್ಞೆ ಇವರ ವೈಶಿಷ್ಟ್ಯ .
ಅವರ ಪುತ್ರ ಶ್ರೀ ಪ್ರಸನ್ನ ಮತ್ತು ಸೊಸೆ ತ್ರಿವೇಣಿ ಯವರ ಆತಿಥ್ಯ .ಹೊಟ್ಟೆ ಮತ್ತು ಮನಸು ಎರಡೂ ತಂಪಾಯಿತು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ