ಬಹಳ ಮಂದಿ ತಲೆ ನೋವಿನಿಂದ ಬಳಲುವವರು ತಮಗೆ ಶೀತವೇ ಇತ್ತೀಚಿಗೆ ಆಗುವುದಿಲ್ಲ .ಶೀತವಾಗಿ ಮೂಗಿನಿಂದ ಇಳಿದರೆ ತಲೆ ನೋವು ತನ್ನಿಂದ ತಾನೇ ಕಡಿಮೆ ಆಗುವುದು .ಆದ ಕಾರಣ ಶೀತವಾಗಲು ಮದ್ದು ಕೊಡಿ ಎಂದು ಕೇಳುತ್ತಾರೆ .
ಇದು ಸ್ವಲ್ಪ ನಿಜ ಇರ ಬಹುದು .ನಮ್ಮ ಮೂಗಿನ ಸುತ್ತ ಮುತ್ತ ಎಲುಬಿನಲ್ಲಿ ಪ್ಯಾರಾ ನೇಸಲ್ (ನಾಸಿಕ ಕ್ಕೆ ಹೊಂದಿಕೊಂಡ )ಸೈನಸ್ ಎಂಬ ಖಾಲಿ ಜಾಗ ಇರುತ್ತವೆ . ನಮ್ಮ ಸ್ವರಕ್ಕೆ ವಿಶೇಷ ಗುಣ ಕೊಡುವುದು(ಮ್ಯೂಸಿಕ್ ಸಿಸ್ಟಮ್ ನ ಟೊಳ್ಳು ಸ್ಪೀಕರ್ ಪೆಟ್ಟಿಗೆಯಂತೆ ) ಮತ್ತು ಮೂಗನ್ನು ಆರ್ದ್ರವಾಗಿ ಇಟ್ಟುಕೊಳ್ಳುವ ದ್ರವ ಉತ್ಪತ್ತಿ ಇವುಗಳ ಕಾರ್ಯ . ಎಲ್ಲಾ ಸೈನಸ್ ಗಳು ನಾಳಗಳ ಮೂಲಕ ಮೂಗಿಗೆ ಸಂಪರ್ಕ ಪಡೆದಿವೆ . ಶೀತ ಆದಾಗ ಈ ನಾಳಗಳು ಮುಚ್ಚಿ ಸೈನಸ್ ಗಳಲ್ಲಿ ಉತ್ಪತ್ತಿ ಆದ ದ್ರವ್ಯ ಹೊರ ಹೋಗಲು ಸಾಧ್ಯವಿಲ್ಲದೆ ಅಲ್ಲಿಯೇ ತುಂಬಿ ಮತ್ತು ಕೆಲವೊಮ್ಮೆ ಬ್ಯಾಕ್ಟೀರಿಯಾ ಸೋಂಕು ಹೊಂದಿ ನೋವು ಉಂಟು ಮಾಡ ಬಹುದು .ಇದಕ್ಕೆ ಸೈನುಸೈಟಿಸ್ ಎನ್ನುತ್ತಾರೆ . ಇಲ್ಲಿ ಕಫ ಇಳಿದರೆ ತಲೆನೋವು ಕಡಿಮೆ ಆಗುವ ಸಾಧ್ಯತೆ ಇದೆ
ಇದು ಬಿಟ್ಟರೆ ಸೋಂಕೇತರ ಕಾರಣಗಳಲ್ಲಿ ತಲೆ ನೋವು ಬರುವದು ಸಾಮಾನ್ಯಾಗಿ ಉದ್ವೇಗದ ತಲೆನೋವು (ಟೆನ್ಶನ್ ಟೈಪ್ )ಮತ್ತು ಮೈ ಗ್ರೇನ್ . ನಮ್ಮಲ್ಲಿ ಶೀತ ಇಳಿದು ಹೋಗುವುದಿಲ್ಲ ಎಂದು ಬರುವವರು ಈ ವರ್ಗದವರು ,. ಇದಕ್ಕೂ ಶೀತಕ್ಕೂ ಯಾವ ಸಂಬಂಧವೂ ಇಲ್ಲ . ಅದಕ್ಕೆ ಯೋಗ್ಯ ಔಷಧಿಗಳು ಇವೆ .
ಶೀತ ಉಂಟು ಮಾಡಲು ನಮ್ಮಲ್ಲಿ ಮದ್ದು ಇಲ್ಲ .ನಾನು ಹಾಗೆ ಕೇಳಿ ಕೊಳ್ಳುವವರಲ್ಲಿ 'ಇಳಿದು ಬಾ ತಾಯಿ ಇಳಿದು ಬಾ ನನ್ನ ಮೂಗಿಂದ ,ಬದಿಯ ಸೈನಸ್ ನಿಂದ ಇಳಿದು ಬಾ "ಎಂದು ಹಾಡಿರಿ ಎನ್ನುವೆನು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ