ಇಲ್ಲಿಯ ಪುಸ್ತಕ ವೈವಿದ್ಯ ನೋಡಿ ಕಾರಂತರ ಮರಳಿ ಮಣ್ಣಿಗೆ ,ಗೋಕಾಕರ ಸಮರಸವೇ ಜೀವನ ,ಬೈರಪ್ಪನವರ ವಂಶ ವೃಕ್ಷ ,ಚಿತ್ತಾಲರ ಪುರುಷೋತ್ತಮ ,ಕುವೆಂಪು ಅವರ ಕಾನೂರು ಹೆಗ್ಗಡಿತಿ ;ನಾವು ಸಂಗ್ರಹಾರ್ಹ ಕೃತಿ ಗಳು ಎಂದು ಕರೆಯುವ ಪುಸ್ತಕಗಳು ಇರುವ ಇದು ಯಾವುದೋ ಕನ್ನಡ ಸಾಹಿತಿ ಪ್ರಾಧ್ಯಾಪಕರ ಸಂಗ್ರಹ ಎಂದು ನೀವು ಊಹಿಸುತ್ತಿರ ಬೇಕು .
ಇದು ಕಬಕ ನಿವಾಸಿ ಅಬೂಬಕರ್ ಅವರ ಮನೆ ಲೈಬ್ರರಿ ಸಂಗ್ರಹ . ಇವರನ್ನು ನಾನು ವರ್ಷಗಳಿಂದ ಬಲ್ಲೆ .ಸಾರಿಗೆ ಇಲಾಖೆ ಕೆಲಸಗಳಲ್ಲಿ ಜನರಿಗೆ ಸಹಾಯ ವಾಗುತ್ತಾ ಇದ್ದವರು . ನನ್ನ ಬಳಿಗೆ ಸಣ್ಣ ಪುಟ್ಟ ತೊಂದರೆಗೆ ಔಷಧೋಪಚಾರಕ್ಕೂ ಬಂದಿದ್ದರು.ಶ್ವೇತ ವಸನ ದಾರಿ ,ಸರಳ ವ್ಯಕ್ತಿತ್ವ . ಆಸ್ಪತ್ರೆಗೆ ಬಂದರೆ ಎಲ್ಲರಂತೆ ಸರತಿಯಲ್ಲಿ ಬರುವರು .
ಆದರೆ ಅವರ ಪುಸ್ತಕ ಪ್ರೀತಿಯ ವಾಸನೆ ನನಗೆ ಸಿಕ್ಕಿದ್ದು ಇತ್ತೀಚೆಗೆ . ಪುಸ್ತಕದ ಅಂಗಡಿಯಿಂದ ನನ್ನ ಕೃತಿ ಯನ್ನು ಖರೀದಿಸಿ ಅವರು ಮತ್ತು ಮನೆಯವರು ಎಲ್ಲರೂ ಓದಿ ಆನಂದಿಸಿದ ವಿವರ ಸಿಕ್ಕಿದಾಗ ನನಗೆ ಅಚ್ಚರಿ ;ನನ್ನ ಪರಿಚಯ ಇದ್ದ ಕಾರಣ ಇರಬೇಕು ಎಂದು ಕೊಂಡು ಅನ್ವೇಷಣೆ ಮಾಡಲು ಇವರ ಬಳಿ ಓದುಗರಿಗೆ ಈರ್ಷೆಯಾಗುವ ದೊಡ್ಡ ಸಂಗ್ರಹವೇ ಇದೆ ಎಂಬ ವಿಚಾರ ತಿಳಿದು ಬಹಳ ಸಂತೋಷ ವಾಗಿ ಅದನ್ನು ನಿಮ್ಮೊಡನೆ ಹಂಚಿ ಕೊಳ್ಳುತ್ತಿದ್ದೇನೆ .
ಇಳಿ ವಯಸ್ಸಿನಲ್ಲಿ ಇರುವ ಅವರಿಗೆ ಒಳ್ಳೆಯ ಆಯುರಾರೋಗ್ಯ ಹಾರೈಸುವಾ ಮತ್ತು ಅವರ ಸಂಪತ್ ಭಂಡಾರ ಬೆಳೆಯಲಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ