ಜಠರದ ಅಲ್ಸರ್ ಅಥವಾ ಹುಣ್ಣು ಅನ್ನ ನಾಳದ ಉಬ್ಬು ಧಮನಿ ಗಳು
ಕಾಡಿನಲ್ಲಿ ನಡೆದು ಕೊಂಡು ಹೋಗುತ್ತಿದ್ದವನು ಏನೋ ಕಂಡಂತಾಗಿ ರಕ್ತ ಕಾರಿ ಸತ್ತನಂತೆ . ದೇವರು ಅಥವಾ ಭೂತ ರಕ್ಕಸನಿಗೆ ರಕ್ತ ಕಾರಿ ಸಾಯಿ ಎಂದು ಶಾಪ ಹಾಕಿತಂತೆ .ಇತ್ಯಾದಿ ಮಾತನಾಡುವುದನ್ನು ಬೆರಗಾಗಿ ಕೇಳಿದ್ದೇವೆ .
ಮೂಗಿನಲ್ಲಿ ಮತ್ತು ಬಾಯಿಯಲ್ಲಿ ರಕ್ತ ಬಂದರೆ ಹೌಹಾರುವುದು ಸಹಜ . ಆದರೆ ರಕ್ತ ಕಾರುವುದಕ್ಕೆ ಮುಖ್ಯ ಕಾರಣಗಳು ಜಠರ ಮತ್ತು ಅನ್ನ ನಾಳದ ಕಾಯಿಲೆಗಳು . ಮೊದಲೇ ಇದ್ದ ರೋಗ ಹಠಾತ್ ಉಲ್ಬಣ ಗೊಂಡು ವಾಂತಿ ಆಗ ಬಹುದು .
ಜಠರ ದ ಹುಣ್ಣು ಅಥವಾ ಅಲ್ಸರ್ ಮುಖ್ಯ ಕಾರಣವಾಗಿದ್ದು ಇದು ಹೆಲಿಕೊ ಬಾಕ್ಟರ್ ಪೈಲೋರಿ ಎಂಬ ರೋಗಾಣು ಸೋಂಕಿನಿಂದ ಉಂಟಾಗುವುದು ಹೆಚ್ಚು . ಉಳಿದಂತೆ ನೋವಿನ ಮಾತ್ರೆಗಳ ಅತಿಯಾದ ಸೇವನೆ ,ಮದ್ಯಪಾನ ಮತ್ತು ಮಾನಸಿಕ ಉದ್ವೇಗಗಳು ಕೂಡು ಕಾರಣ ಆಗ ಬಹುದು . ಅಪರೂಪಕ್ಕೆ ಕಾನ್ಸರ್ ಕೂಡಾ . ಹೊಟ್ಟೆಯ ರಕ್ತ ಸ್ರಾವ ವಾಂತಿ ರೂಪದಲ್ಲಿ ಹೊರ ಬರ ಬಹುದು ಅಥವಾ ಕರುಳಿನ ಮೂಲಕ ಕೆಳಗಡೆಯಿಂದ . ವಾಂತಿ ಕೆಂಪು ರಕ್ತ ವರ್ಣ ಇದ್ದರೆ ,ಮಲದ್ವಾರದಿಂದ ಹೋಗುವ ರಕ್ತ ಕಪ್ಪು ಇರುವುದು .ಜಠರ ದಲ್ಲಿ ಇರುವ ಆಮ್ಲ ರಕ್ತವನ್ನು ಆಸಿಡ್ ಹಿಮಟಿನ್ ಎಂಬ ಕಪ್ಪು ವಸ್ತುವಾಗಿ ಮಾರ್ಪಡಿಸುವುದು ;ಮೇಲ್ಗಡೆಯಿಂದ ಹೋದರೆ ವಾಂತಿ ,ಕೆಳಗಡೆಯಿಂದ ಹೋದರೆ ಮೆಲಿನಾ ಎನ್ನುತ್ತಾರೆ .
ಹಿಂದೆ ಜಠರ ದ ಅಲ್ಸರ್ ಶಸ್ತ್ರ ಚಿಕಿತ್ಸೆಗಳು ಸಾಮಾನ್ಯ ;ನಾನು ವಿದ್ಯಾರ್ಥಿ ಯಾಗಿದ್ದಾಗ ಓ ಟಿ ದಿನ ಕನಿಷ್ಠ ಒಂದು ಆಪರೇಷನ್ ಇರುತ್ತಿತ್ತು .ಈಗ ಒಳ್ಳೆಯ ಮಾತ್ರೆಗಳು ಬಂದಿದ್ದು ಶಸ್ತ್ರ ಚಿಕಿತ್ಸೆ ಅಪರೂಪ ಆಗಿದೆ .
ಇನ್ನು ಈಗ ರಕ್ತ ವಾಂತಿಗೆ ಇರುವ ಇನ್ನೊಂದು ಮುಖ್ಯ ಕಾರಣ ಅನ್ನ ನಾಳದ ರಕ್ತ ನಾಳ(ಅಭಿಧಮನಿ )ಉಬ್ಬಿ ,ಒಡೆದು ರಕ್ತ ಸ್ರಾವ ಆಗುವುದು . ಲಿವರ್ ಕಾಯಿಲೆ ಸಿರೋಸಿಸ್ ನಲ್ಲಿ ಮತ್ತು ಕೆಲವೊಮ್ಮೆ ಹಾಗೆಯೇ ಉಂಟಾಗುವ ತೊಂದರೆ . ಇದನ್ನು ಕೂಡಲೇ ಉದರ ದರ್ಶಕ ದಿಂದ ಕಂಡು ಹಿಡಿದು ,ಔಷಧಿ ಮತ್ತು ಒಸರುವ ರಕ್ತ ನಾಳದ ಬಾಯಿ ಕಟ್ಟಿ ಶಮನ ಮಾಡುವರು .
ಬಹಳ ಸಾರಿ ರೋಗಿಗಳು ರಕ್ತ ವಾಂತಿ ಎಂದು ಹೇಳುವದು ಕೆಮ್ಮಿನಲ್ಲಿ ಬಂದ ರಕ್ತ ಆಗಿದ್ದು ಇದು ಶ್ವಾಸ ಕೋಶದ ಕಾಯಿಲೆಗಳಿಂದ ಉಂಟಾಗುವುದು .ಉದಾ ಕ್ಷಯ ರೋಗ ,ಕ್ಯಾನ್ಸರ್ ,ಶ್ವಾಸ ಕೋಶದ ರಕ್ತ ನಾಳದ ರಕ್ತ ಹೆಪ್ಪು ಗಟ್ಟುವಿಕೆ ಮತ್ತು ಕೆಲವೊಮ್ಮೆ ಹೃದಯ ವೈಫಲ್ಯ . ಇದನ್ನು ವೈದ್ಯರು ರೋಗಿಯ ವಿವರಣೆ ಮತ್ತು ಪರೀಕ್ಷೆಯಿಂದ ರಕ್ತ ವಾಂತಿಯಿಂದ ಬೇರ್ಪಡಿಸುವರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ