ಮೇದೋಜೀರಕ ಗ್ರಂಥಿ (Pancreas )
ನಮ್ಮ ಶರೀರದಲ್ಲಿ ಎರಡು ತರಹದ ಗ್ರಂಥಿಗಳು ಇವೆ . ಒಂದು ನಿರ್ನಾಳ ಗ್ರಂಥಿ ;ಇವು ತಾವು ಉತ್ಪತ್ತಿ ಮಾಡುವ ರಸ ವಿಶೇಷಗಳನ್ನು (ಹಾರ್ಮೋನ್ )ನೇರವಾಗಿ ರಕ್ತಕ್ಕೆ ಸೇರಿಸಿದರೆ ,ಸನಾಳ ಗ್ರಂಥಿಗಳು ನಳಿಕೆಯ ಮೂಲಕ ನಿಗದಿತ ತಾಣಕ್ಕೆ ತಲುಪಿಸುತ್ತವೆ .
ಇವುಗಳಲ್ಲಿ ಪ್ಯಾಂಕ್ರಿಯಾಸ್ ಎರಡೂ ಪಾತ್ರಗಳನ್ನು ನಿರ್ವಹಿಸುವ ವಿಶೇಷ ಅಂಗ . ಇದರ ನಿರ್ನಾಳ ಭಾಗವು ಬಹಳ ಮುಖ್ಯವಾದ ಇನ್ಸುಲಿನ್ ಹಾರ್ಮೋನ್ ಉತ್ಪತ್ತಿ ಮಾಡಿ ,ತನ್ಮೂಲಕ ರಕ್ತದಲ್ಲಿ ಇರುವ ಗ್ಲುಕೋಸ್ ಜೀವ ಕೋಶಗಳನ್ನು ಪ್ರವೇಶಿಸಲು ಸಹಾಯ ಮಾಡುತ್ತದೆ .;ರಕ್ತದ ಗ್ಲೋಕೋಸ್ ಪ್ರಮಾಣ ಹತೋಟಿಯಲ್ಲಿ ಇಡುತ್ತದೆ . ಅದೇ ರೀತಿ ಇನ್ನೊಂದು ಹಾರ್ಮೋನ್ ಗ್ಲುಕಾಗೋನ್ ರಕ್ತದಲ್ಲಿ ಸಕ್ಕರೆ ಪ್ರಮಾಣ ನಿಗದಿಗಿಂತ ಕಡಿಮೆ ಆದರೆ ಲಿವರ್ ನ ಕಾಪು ದಾಸ್ತಾನಿನಿಂದ ಬಿಡುಗಡೆ ಮಾಡಿಸುತ್ತದೆ . ಪ್ಯಾಂಕ್ರಿಯಾಸ್ ನ ನಿರ್ನಾಳ ಭಾಗವನ್ನು ಲ್ಯಾಂಗರ್ ಹ್ಯಾನನ ದ್ವೀಪಗಳು ಎಂದು ಕರೆಯುತ್ತಾರೆ .
ಇನ್ನು ಸನಾಳ ಭಾಗವು ಶರ್ಕರ ಪಿಷ್ಟ ,ಕೊಬ್ಬು ಮತ್ತು ಸಸಾರಜನಕ ಜೀರ್ಣಕ್ಕೆ ಬೇಕಾದ ಕಿಣ್ವಗಳನ್ನು ಸಣ್ಣ ಕರುಳಿಗೆ ನಾಳದ ಮೂಲಕ ರವಾನಿಸುವದು . ಅದು ಕರುಳಿಗೆ ಸೇರುವಲ್ಲಿಯೇ ಪಿತ್ತ ನಾಳವೂ ಬಂದು ಕೂಡುವುದು .
ಪಿತ್ತ ನಾಳದ ಕಲ್ಲು ಇರುವವರಲ್ಲಿ ,ಮದ್ಯಪಾನಿಗಳಲ್ಲಿ ಮತ್ತು ಇನ್ನಿತರ ಕೆಲವು ಸಂದರ್ಭಗಳಲ್ಲಿ ಪ್ಯಾಂಕ್ರಿಯಾಸ್ ನ ಉರಿಯೂತ ಉಂಟಾಗುವುದು .(Pancreatitis ). ಇದರಿಂದ ಹೊಕ್ಕುಳಿನಿಂದ ಸ್ವಲ್ಪ ಮೇಲೆ ತೀವ್ರ ನೋವು ಮತ್ತು ವಾಂತಿ ಉಂಟಾಗುವುದು .ರಕ್ತ ಪರೀಕ್ಷೆಯಲ್ಲಿ ಅಮೈಲೇಸ್ ಮತ್ತು ಲೈಪೇಸ್ ಪ್ರಮಾಣ ಏರಿಕೆ ಇರುವುದು . ಹೊಟ್ಟೆಯ ಸ್ಕಾನ್ ನಲ್ಲಿ ಪ್ಯಾಂಕ್ರಿಯಾಸ್ ಊದಿರುವದು ಕಂಡು ಬರುವದು . ಇಂತಹ ರೋಗಿಗಳನ್ನು ದಾಖಲು ಮಾಡಿ ಖಾಲಿ ಹೊಟ್ಟೆಯಲ್ಲಿ ಇತ್ತು ಆಹಾರವನ್ನು ರಕ್ತ ನಾಳಗಳ ಮೂಲಕ ಕೊಡುವರು .ಈ ಅಂಗಕ್ಕೆ ವಿಶ್ರಾಂತಿ ಕೊಡುವ ಉದ್ದೇಶ .
ಇನ್ನು ಕೆಲವರಲ್ಲಿ ಪ್ಯಾಂಕ್ರಿಯಾಸ್ ನಾಳಗಳ ಒಳಗೆ ಕಲ್ಲು ಉಂಟಾಗಿ ,ಅವು ಜೀರ್ಣ ಕ್ರಿಯೆಗೆ ಬೇಕಾದ ಕಿಣ್ವಗಳ ಸಾಗಣೆಗೆ ಅಡ್ಡಿ ಉಂಟು ಮಾಡುವವು .ಇದರಿಂದ ಅಜೀರ್ಣ ,ಮತ್ತು ಹೊಟ್ಟೆ ನೋವು ಬರ ಬಹುದು . ಇಂತಹವರ ಕಲ್ಲುಗಳನ್ನು ಸಾಧ್ಯವಾದರೆ ತೆಗೆಯುವರು ,ಮತ್ತು ಹೊರಗಿನಿಂದ ಜೀರ್ಣ ಕ್ರಿಯೆಗೆ ಬೇಕಾದ ಎಂಜಯಿಮ್ ಗಳನ್ನು ಮಾತ್ರೆ ರೂಪದಲ್ಲಿ ಕೊಡುವರು .
ಗಂಭೀರವಾದ ಪ್ಯಾಂಕ್ರಿಯಾಸ್ ಕಾಯಿಲೆ ಕ್ಯಾನ್ಸರ್ . ಪ್ಯಾಂಕ್ರಿಯಾಸ್ ಗಡ್ಡೆ ಬೆಳೆದಂತೆ ನೋವು ,ಅಶಕ್ತಿ ಜೊತೆ ಪಿತ್ತ ನಾಳಕ್ಕೆ ತಡೆ ಉಂಟಾದಾಗ ಜಾಂಡೀಸ್ ಉಂಟಾಗುವುದು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ