ಕೊಷ್ಟೋ ಕೊಂಡ್ರಾಯಿಟಿಸ್
ಕೊಷ್ಟೋ ಎಂದರೆ ಪಕ್ಕೆಲುಬು . ನಮ್ಮ ಪಕ್ಕೆಲುಬು ಎದೆಗೂಡಿನ ಮುಖ್ಯ ಎಲುಬಿಗೆ ಸೇರುವ ಮುನ್ನ ಮೆದು ಎಲುಬು ಅಥವಾ ಮೃದ್ವಸ್ಥಿ (cartilage )ಇದೆ . ಈ ಮೃದ್ವಸ್ಥಿ ಕೆಲವೊಮ್ಮೆ ಏನಾದರೂ ಕೆಲಸ ಮಾಡುವಾಗ ಎಳೆದಂತೆ ಆಗಿ ಉರಿಯೂತದಿಂದ ನೋವು ಉಂಟಾಗುವದು . ಕೆಮ್ಮುವಾಗ ಮತ್ತು ಕೈಗಳಿಂದ ಏನಾದರೂಏನಾದರೂ ಮಾಡುವಾಗ ನೋವು ಅಧಿಕ ಆಗುವದು . ನೋವು ಪಕ್ಕೆಲುಬು ಮುಖ್ಯ ಎಲುಬಿಗೆ ಸೇರುವ ಜಾಗದಲ್ಲಿ ಇದ್ದು ಅಲ್ಲಿ ಮುಟ್ಟುವಾಗ ನೋವು ಆಗುವುದು . ಎದೆ ನೋವು ಇರುವ ಕಾರಣ ಬಹಳ ಮಂದಿ ಹೆದರಿ ಬರುವದು ಸಹಜ . ಇದಕ್ಕೆ ಸಾಮಾನ್ಯ ನೋವಿನ ಮಾತ್ರೆ ಕೊಡುವೆವು . ಆದರೂ ಶರೀರದಲ್ಲಿ ಅನವರತ ವಿಶ್ರಾಂತಿ ತೆಗೆದು ಕೊಳ್ಳದೆ ಕೆಲಸ ಮಾಡುವ ಸಂಧಿ (joint )ಯಲ್ಲಿ ಇರುವ ಕಾರಣ (ಯಾಕೆಂದರೆ ನಾವು ಬದುಕಿರುವ ವರೆಗೆ ಉಸಿರಾಡುತ್ತಿರಬೇಕಲ್ಲ )ಬಹಳ ಸಮಯ ಕಾಡುತ್ತದೆ .
ಪ್ರೊಕ್ಟಾಲ್ಜಿಯಾ ಫ್ಯೂಗಾಕ್ಸ್
ಪ್ರೊಕ್ಟಾಲ್ಜಿಯಾ ಎಂದರೆ ಗುದ ನಾಳದ ನೋವು . ಫ್ಯೂಗಾಕ್ಸ್ ಎಂದರೆ ಬಂದು ಹೋಗುವ (fleeting )ಎಂದು ಅರ್ಥ .ಕೆಲವೊಮ್ಮೆ ರಾತ್ರಿ ಮಲಗಿದ ಮೇಲೆ ,ಅಥವಾ ಹಗಲು ಕೂಡಾ ಇದ್ದಕ್ಕಿದ್ದಂತೆ ಮಲದ್ವಾರದ ಒಳಗೆ ಸೆಳೆತ ಆರಂಭವಾಗುವದು . ಸೂಕ್ಷ್ಮ ಜಾಗದಲ್ಲಿ ಇರುವ ಕಾರಣ 'ಹೇಳಲಾರೆ ನಾ ತಾಳಲಾರೆ ' ಎಂಬ ಸಂಕಟ .ಮಲ ಶಂಕೆ ಮಾಡ ಬೇಕೆಂದು ಆಗುವದು . ನೋವು ಕೆಲವು ಸೆಕೆಂಡ್ ಗಳಿಂದ ೨೦ ನಿಮಿಷಗಳ ವರೆಗೆ ಇದ್ದು ತಾನೇ ಮಾಯವಾಗುವುದು . ಸಾಮಾನ್ಯ ನೋವಿನ ಮಾತ್ರೆ ,ಕೆಲವು ಔಷಧಿಯುತ ಮುಲಾಮು ಮತ್ತು ಆಸ್ತಮಾ ಕ್ಕೆ ಉಪಯೋಗಿಸುವ ಸಾಲ್ಬುಟಮೋಲ್ ಇನ್ಹೇಲರ್ ವೈದ್ಯರು ಸಲಹೆ ಮಾಡುವರು . ದೀರ್ಘ ಕಾಲ ಆಗಾಗ ನೋವು ಬರುತ್ತಿದ್ದರೆ ಬೇರೆ ಕಾರಣಗಳು ಇರ ಬಹುದು . ಅದನ್ನು ವೈದ್ಯಕೀಯ ಪರೀಕ್ಷೆಯಿಂದ ಕಂಡು ಕೊಳ್ಳುವರು
ಅನ್ಯ ಗಂಭೀರ ಸಮಸ್ಯೆಯಾಗಿರಬಹುದೆಂದು ಭೀತರಾಗುವ ಎರಡು ದೈಹಿಕ ಸಮಸ್ಯೆಗಳ ನೈಜ ಸ್ವರೂಪವನ್ನು ಸರಳವಾಗಿ ತಿಳಿಸಿಕೊಟ್ಟಿರುವಿರಿ. ಧನ್ಯವಾದಗಳು ಸರ್.
ಪ್ರತ್ಯುತ್ತರಅಳಿಸಿ