ಸಂತತಿ ಮುಂದುವರಿಸುವದು ಜೀವಿಯ ಮೂಲ ಪ್ರವೃತ್ತಿ ,ಮನುಷ್ಯನೂ ಇದರಿಂದ ಹೊರತಲ್ಲ . ಇದರಲ್ಲಿ ಎಲ್ಲರಂತೆ ಬೀಜ ಮತ್ತು ಕ್ಷೇತ್ರ ಇದೆ . ಮಾನವರ ಲೈಂಗಿಕ ಬೆಳವಣಿಗೆ ಸಂಕೀರ್ಣ ವಾಗಿದ್ದು ಹಲವು ಚೆಕ್ಸ್ ಮತ್ತು ಬ್ಯಾಲೆನ್ಸ್ ಗಳು ಇವೆ .
ತಾಯ್ತನದ ತಯಾರಿ
ಮೆದುಳಿನ ಬಹಳ ಸಣ್ಣ ಭಾಗವಾದ ಹೈಪೊಥಲಮಸ್ ಎಂಬ ಅಂಗ ಇದರ ಹೈ ಕಮಾಂಡ್ ಆಗಿದ್ದು ರಕ್ತದ ಮತ್ತು ನರಗಳ ಮೂಲಕ ಸಂದೇಶಗಳನ್ನು ಮತ್ತು ತನ್ನಲ್ಲಿ ಜನ್ಮಥಾ ಇರುವ ಟೈಮ್ ಟೇಬಲ್ ಗಳನ್ನು ವಿಶ್ಲೇಷಿಸಿ ಪಿಟ್ಯುಟರಿ ಎಂಬ (ಇದೂ ಕೂಡಾ ತಲೆಯ ಒಳಗೆ ಮೆದುಳಿನ ಬುಡದಲ್ಲಿ ಇದೆ )ಸರ್ವ ಗ್ರಂಥಿ ನಿಯಂತ್ರಕ (master gland )ಗ್ರಂಥಿಗೆ ಸಂದೇಶ ಗಳನ್ನು ತಮ್ಮೊಳಗೆ ಇರುವ ಹಾಟ್ ಲೈನ್ ಮೂಲಕ ರವಾನಿಸುವದು . ಇದರಲ್ಲಿ ಗೊನೆಡೋಟ್ರೋಪಿನ್ ಬಿಡುಗಡೆ ಮಾಡುವ ಹಾರ್ಮೋನ್ ಎಂದು ಇದೆ .ಇದು ಪಿಟ್ಯುಟರಿ ಗ್ರಂಥಿಯಿಂದ ಎರಡು ಮುಖ್ಯ ಹಾರ್ಮೋನ್ ಗಳು ಬಿಡುಗಡೆ ಆಗುವಂತೆ ಮಾಡುವುದು .
ಮೊದಲನೆಯದು ಫೋಲಿಕ್ಯುಲರ್ ಚೋದಕ ,ಇದು ಸ್ತ್ರೀಯರ ಅಂಡಾಶಯ ದಲ್ಲಿ ಸೂಕ್ಷ್ಮವಾದ ದ್ರವ ಚೀಲಗಳನ್ನು (follicle ) ಸೃಷ್ಟಿ ಮಾಡಿ ಅದರೊಳಗೆ ಅಂಡಾಣು ಬೆಳವಣಿಗೆ ಆಗುವಂತೆ ಮಾಡುವುದು . ಇನ್ನೊಂದು ಲ್ಯೂಟಿನೈಸಿಂಗ್ ಹಾರ್ಮೋನ್ .ಇದು ಅಂಡಾಶಯ (ovary )ಯಿಂದ ಈಸ್ಟ್ರೋಜೆನ್ ಸ್ರಾವ ಎಂಬ ಮುಖ್ಯ ಹಾರ್ಮೋನ್ ಮತ್ತು ಅಂಡಾಣು ಬಿಡುಗಡೆ ಯಲ್ಲಿ ಮುಖ್ಯ ಪಾತ್ರ ವಹಿಸುವದು . ಈಸ್ಟ್ರೋಜೆನ್ ಹಾರ್ಮೋನ್ ಸ್ತ್ರೀಯರಲ್ಲಿ ಲೈಂಗಿಕ ಅವಯವ ಗಳ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸಿದರೆ ಪ್ರೊಜೆಸ್ಟರಾನ್ ಎಂಬ ಅಂಡಾಶಯದಲ್ಲಿ ಉತ್ಪತ್ತಿ ಆಗುವ ಹಾರ್ಮೋನ್ ಗರ್ಭ ಕೋಶವನ್ನು ಶಿಶುವಿನ ಬೆಳವಣಿಗೆಗೆ ಅನುಕೂಲ ವಾಗುವಂತೆ ತಯಾರಿ ಮಾಡುತ್ತದೆ .ಇಸ್ತ್ರೋಜನ್ ಗರ್ಭಕೋಶದ ತುದಿಯಿಂದ ವೀರ್ಯಾಣುಗಳಿಗೆ ಅನುಕೂಲವಾದ ಮಾಧ್ಯಮ ಉಂಟು ಮಾಡುವ ಸ್ರಾವ ಗಳನ್ನು ಉಂಟು ಮಾಡುತ್ತದೆ. ಅಂಡಾಣು ಬಿಡುಗಡೆ ಆದ ಮೇಲೆ ಅಂಡಾಶಯದ ವಿಶೇಷ ದ್ರವ ಚೀಲಗಳು ಕೊರ್ಪಸ್ ಲ್ಯುಟಿಯಂ ಎಂಬ ವಿಶೇಷ ಕಾರ್ಯಾಂಗ ವಾಗಿ ಮಾರ್ಪಟ್ಟು ಪ್ರೊಜೆಸ್ಟೆರೋನ್ ಎಂಬ ಹಾರ್ಮೋನ್ ಉತ್ಪತ್ತಿ ಮಾಡಿ ಗರ್ಭ ಮತ್ತು ಶಿಶುವಿನ ಬೆಳವಣಿಗೆಗೆ ತಯಾರು ಮಾಡುತ್ತದೆ .ಅಂಡಾಣು ಮತ್ತು ವೀರ್ಯಾಣು ಉಟ್ಟಾಗದಿದ್ದಲ್ಲಿ ವಿಶೇಷ ವಾಗಿ ಹೆಚ್ಚು ರಕ್ತ ಪೂರೈಕೆ ಸಹಿತ ತಯಾರಾದ ಗರ್ಭಕೋಶದ ಒಳಮೈ ಕಳಚಿ ಜನನಾಂಗದ ಮೂಲಕ ಹೊರ ಬರುವುದೇ ಋತು ಸ್ರಾವ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ