(ಮುಂದುವರಿದುದು )
ಲಿವರ್ ಸಿರೋಸಿಸ್
ಲಿವರ್ ಹಾನಿ ಗೊಂಡಂತೆಲ್ಲಾ, ರಕ್ತದಲ್ಲಿ ಅಲ್ಬುಮೀನ್ ಎಂಬ ಮುಖ್ಯ ಸಸಾರಜನಕ ಕಡಿಮೆ ಆಗಿ , ರಕ್ತದ ನೀರು ಹಿಡಿದು ಇಟ್ಟು ಕೊಳ್ಳುವ ಶಕ್ತಿ ಕಡಿಮೆಯಾಗಿ ಹೊಟ್ಟೆ ,ಕೈಕಾಲುಗಳಲ್ಲಿ ನೀರು ತುಂಬಿ ಕೊಳ್ಳುವುದು . ಕೈಕಾಲುಗಳು ಕೃಶವಾಗುವವು . ಶರೀರದಲ್ಲಿ ಗಂಡು ಹಾರ್ಮೋನ್ ಗಳು ಕಡಿಮೆಯಾಗಿ ಸ್ತ್ರೀ ಹಾರ್ಮೋನ್ ಗಳು ಅಧಿಕವಾಗಿ ಗಂಡಸರಲ್ಲಿ ಸ್ತನಗಳು ದೊಡ್ಡದಾಗುವವು ,ಲೈಂಗಿಕ ದೌರ್ಬಲ್ಯ ಉಂಟಾಗುವದು . ಅನ್ನ ನಾಳದ ಒಳ ಮೈಯ್ಯಲ್ಲಿನ ರಕ್ತ ನಾಳಗಳು ಹಿಗ್ಗಿ ರಕ್ತ ವಾಂತಿಗೆ ಕಾರಣ ಆಗುವದು . ರಕ್ತದಲ್ಲಿ ನೈಸರ್ಗಿಕವಾಗಿ ಉಂಟಾದ ಕೆಟ್ಟ ರಾಸಾಯನಿಕಗಳ ವಿಲೇವಾರಿ ಸರಿ ಆಗದೆ ಅವು ಮೆದುಳು ಸೇರಿದಾಗ ನೆನಪು ,ಜ್ಞಾನ ಕ್ಷಯ ಮತ್ತು ಭೋಧ ಕ್ಷಯ ಉಂಟಾಗುವುದು . ರಕ್ತ ಸರಿಯಾಗಿ ಹೆಪ್ಪು ಗಟ್ಟದು .
ಪ್ಯಾಂಕ್ರಿಯಾಟೈಟಿಸ್
ಮದ್ಯಪಾನಿಗಳಲ್ಲಿ ಮೇದೋಜೀರಕ ಗ್ರಂಥಿ ಯ ಉರಿಯೂತ ಉಂಟಾಗಿ ತೀವ್ರ ತರ ಸಮಸ್ಯೆ ಉಂಟಾಗ ಬಹುದು . ತೀವ್ರ ತರ ಹೊಟ್ಟೆ ನೋವು ಮತ್ತು ವಾಂತಿ ಇದರ ಆರಂಭಿಕ ಲಕ್ಷಣಗಳು .
ಆಲ್ಕೊಹಾಲಿಕ್ ಗ್ರಾಸ್ಟ್ರೈಟಿಸ್
ಪದೇ ಪದೇ ಮದ್ಯಪಾನ ಸೇವನೆಯಿಂದ ಜಠರದ ಒಳ ಪದರ ಹಾನಿಗೊಳಗಾಗುವದು . ಇದರಿಂದ ಹೊಟ್ಟೆ ನೋವು ,ಹಸಿವು ಇಲ್ಲದಿರುವುದು ವಾಂತಿ ಇತ್ಯಾದಿ ಉಂಟಾಗುವದು
ಮೆದುಳು ಮತ್ತು ನರಗಳು ದುರ್ಬಲ ಗೊಳ್ಳುವುವು . ನೆನಪಿನ ಶಕ್ತಿ ಕುಂದುವುದು ,ಖಿನ್ನತೆ ಉಂಟಾಗುವುದು . ಶರೀರದ ಸಮತೂಲ ಕಾಯ್ದು ಕೊಳ್ಳುವ ಅಂಗಗಳಿಗೆ ಹಾನಿಯಾಗಿ ಬಾಲನ್ಸ್ ತಪ್ಪುವುದು .ವಿಟಮಿನ್ ಬಿ 1 ಅನ್ನಾಂಗದ ಕೊರತೆ ಉಂಟಾಗುವುದೂ ಒಂದು ಕಾರಣ .
ರಕ್ತದ ಉತ್ತಡ ಹೆಚ್ಚುವುದು .ಹೃದಯದ ಮಾಂಸ ಖಂಡಗಳು ದುರ್ಬಲ ಗೊಳ್ಳುವುವು .
ಮದ್ಯ ವ್ಯಸನಿಗಳಲ್ಲಿ ಕಾನ್ಸರ್ ಬರುವುದು ಹೆಚ್ಚು . ಕುಡಿತದ ಅಮಲಿನಲ್ಲಿ ಅರಿವಿಲ್ಲದೆಯೇ ಬಿದ್ದು ಪಕ್ಕೆಲುಬು ಫ್ರಾಕ್ತ್ಚರ್ ಆಗಿ ಎದೆ ನೋವು ಎಂದು ವೈದ್ಯರಲ್ಲಿ ಬರುವುದು ಸಾಮಾನ್ಯ .
ಇನ್ನು ಕುಡಿದು ವಾಹನ ಚಾಲನೆ ಮಾಡಿ ಅವಘಡಗಳು ಸಂಭವಿಸುವುದು ಒಂದಾದರೆ ,ಕುಡಿದು ತಾವೇ ವಾಹನಗಳ ಅಡಿಗೆ ಬೀಳುವವರು ಕಡಿಮೆಯೇನಲ್ಲ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ