ಒಂದೇ ಔಷಧಿ ಬಹು ಮುಖ ಉಪಯೋಗ
ಆಧುನಿಕ ವೈದ್ಯ ಶಾಸ್ತ್ರದಲ್ಲಿ ಒಂದೇ ಔಷಧಿಯನ್ನು ಬೇರೆ ಬೇರೆ ಕಾಯಿಲೆಗೆ ಉಪಯೋಗಿಸುವುದು ಇದೆ . ಉದಾಹರಣೆಗೆ Propranalol ಎಂಬ ಔಷಧಿ ಇದೆ .ಇದು ರಕ್ತದ ಒತ್ತಡಕ್ಕೆ ಕಂಡು ಹಿಡಿದ ಮಾತ್ರೆ .ಇದನ್ನು ಮೈಗ್ರೇನ್ ತಲೆ ನೋವು ,ಕೈ ನಡುಗುವಿಕೆ ಮತ್ತು ಮಾನಸಿಕ ಉದ್ವೇಗ , ಲಿವರ್ ಕಾಯಿಲೆಯಲ್ಲಿ ಅನ್ನನಾಳ ದಿಂದ ರಕ್ತ ಸ್ರಾವ ಆಗದಂತೆ ಕೂಡಾ ಉಪಯೋಗಿಸುವರು . ಇನ್ನು ಮಾನಸಿಕ ಖಿನ್ನತೆಗೆ ಉಪಯೋಗಿಸುವ Amitryptiline ಔಷಧಿ ಸಕ್ಕರೆ ಕಾಯಿಲೆಯಲ್ಲಿ ನರ ಬೆಂಕಿ ಬರುವುದಕ್ಕೆ ,ಮೈಗ್ರೇನ್ ಮತ್ತು ಉದ್ವೇಗದ ತಲೆನೋವು ತಡೆಗಟ್ಟಲು ಉಪಯೋಗಿಸುವರು . ಅಪಸ್ಮಾರದ ಔಷಧಿ Tegtretol ಮತ್ತು Pregabalin ನರದ ಉರಿ ಶಮನಕ್ಕೆ ಉಪಯೋಗಿಸುವರು .
ಮಿನೊಕ್ಸಿಡೈಲ್ ಎಂಬ ಔಷಧವನ್ನು ಅಧಿಕ ರಕ್ತದ ಒತ್ತಡದ ಚಿಕಿತ್ಸೆಗೆ ಅಭಿವೃದ್ಧಿ ಪಡಿಸುವಾಗ ಅದರ ಅಡ್ಡ ಪರಿಣಾಮ ಕೂದಲು ಅಧಿಕ ಬೆಳೆಯುವುದು ಕಂಡು ಬಂತು .ಮುಂದೆ ಈ ಔಷಧಿ ಬೋಳು ತನ ನಿವಾರಿಸಲು ಬಳಕೆಗೆ ಬಂದು ಮೂಲ ಉದ್ದೇಶ ಮರೆಯಾಯಿಯಿತು .
ಇದನ್ನೆಲ್ಲಾ ಬರೆಯಲು ಕಾರಣ ಎಂದರೆ ,ಕೆಲವೊಮ್ಮೆ ಔಷಧಿ ಕೊಳ್ಳುವಾಗ ರೋಗಿಗಳು ಈ ಔಷಧಿ ಯಾಕೆ ಇರುವುದು ಎಂದು ಅಂಗಡಿಯವನ ಬಳಿ ಕೇಳುವ ಕ್ರಮ ಇದೆ .ಆಗ ಅವನು ಇದು ಫಿಟ್ಸ್ ಗೆ ಇರುವದು ಎಂದಾಗ ನನಗೆ ಅಪಸ್ಮಾರ ಇಲ್ಲ ,ಆ ಡಾಕ್ಟ್ರಿಗೆ ಮಂಡೆ ಸಮ ಇಲ್ಲ ,ಏನಾದರೂ ಮದ್ದು ಬರೆಯುತ್ತಾರೆ ಎಂದು ಕೆಲವರು ಆಡಿಕೊಳ್ಳುವುದು ನಾನು ಕೇಳಿಸಿ ಕೊಂಡಿದ್ದೇನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ