ಇನ್ನೊಂದು ಸೌಜನ್ಯದ ವಿಚಾರ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ನವರು ವಿಧಾನ ಸೌಧ ನಿರ್ಮಾತೃ ಮಾತ್ರ ಅಲ್ಲ .ಒಳ್ಳೆಯ ಆಡಳಿತ ಕೌಶಲ್ಯಕ್ಕ್ಕೆ ಹೆಸರಾದವರು .ಎಲ್ಲಕ್ಕೂ ಮಿಗಿಲಾಗಲಿ ಸಾಹಿತ್ಯ ಮತ್ತು ಸಂಸ್ಕೃತಿ ಕಾರ್ಯಕ್ರಮಗಳನ್ನು ನಡೆಸಲು ಇಲಾಖೆಯ ಹುಟ್ಟಿಗೆ ಕಾರಣರಾದವರು . ಸಂಸ್ಕೃತಿ ಪ್ರಸಾರ ಭಾಷಣ ,ಕುಮಾರ ವ್ಯಾಸ ಮತ್ತು ಜೈಮಿನಿ ಭಾರತ ಪುಸ್ತಕಗಳನ್ನು ಮುದ್ರಿಸಿ ಕಡಿಮೆ ದರದಲ್ಲಿ ಜನಸಾಮನ್ಯರಿಗೆ ತಲುಪಿಸಿದವರು ಅವರು .
ಈ ಏನ್ ಮೂರ್ತಿರಾಯರ ಚಿತ್ರಗಳು ಪತ್ರಗಳು ಕೃತಿಯಲ್ಲಿ "ಶ್ರೀ ಕೆ ಹನುಮಂತಯ್ಯನವರು ಮತ್ತು ಸಂಸ್ಕೃತಿ ಪ್ರಸಾರ "ಎಂಬ ಅಧ್ಯಾಯ ಇದೆ ..ಅವರು ಒಂದು ಎಪಿಸೋಡ್ ಉಲ್ಲೇಖಿಸಿದ್ದಾರೆ .
ಒಂದು ದಿನ ಅವರು (ಕೆಂಗಲ್ )ನನ್ನನ್ನು ಬರ ಹೇಳಿದ್ದರು .ನಾನು ಹೋದಾಗ ಅವರು ಎಲ್ಲಿಗೋ ಆತುರದಲ್ಲಿ ಹೊರಡಲು ಸಿದ್ದ ರಾಗಿದ್ದಂತೆ ತೋರಿತು ."ಈಗ ಬಹಳ ಜರೂರಾದ ಕೆಲಸವಿದೆ ,ನನ್ನೊಡನೆ ಬನ್ನಿ .ನನ್ನ ಕೆಲಸ ಮುಗಿದ ಮೇಲೆ ಕುಮಾರ ಕೃಪಕ್ಕೆ ಹೋಗಿ ಅಲ್ಲೇ ಮಾತನಾಡೋಣ .."ಎಂದರು .ಇಬ್ಬರೂ ಹೊರಟೆವು .ಗಾಡಿ ಸರ್ ಎಂ ವಿಶ್ವೇಶ್ವರಯ್ಯನವರ ಮನೆ ಮುಂದೆ ನಿಂತಿತು .ಹನುಮಂತಯ್ಯ ನವರು ೧೦-೧೫ ನಿಮಿಷವಾದ ಮೇಲೆ ಬಂದರು .ಅವರನ್ನು ಕಳಿಸಲು ವಿಶ್ವೇಶ್ವರಯ್ಯನವರೂ ಬಂದರು .ನಾವು ಅಲ್ಲಿಂದ ಹೊರಟ ಮೇಲೆ ಸಂದರ್ಭವೇನೆಂದು ಹೇಳಿದರು .ಅವರು ಯಾವುದೋ ವಿಷಯದಲ್ಲಿ ವಿಶ್ವೇಶ್ವರಯ್ಯನವರ ಸಲಹೆಯನ್ನು ಬೇಡ ಬೇಕಾಗಿತ್ತು . 'ತಮ್ಮನ್ನು ನೋಡ ಬೇಕು ಯಾವಾಗ ಬರಲಿ 'ಎಂದು ಟೆಲಿಫೋನ್ ನಲ್ಲಿ ಕೇಳಿದರು.
"ಈಗ ಸಮಯವೇನೋ ಇದೆ ,ಆದರೆ ನೀವು ಇಲ್ಲಿಗೆ ಬರುವುದು ಸರಿಯಲ್ಲ .ನೀವು ಚರ್ಚಿಸ ಬೇಕೆಂದು ಇರುವುದು ರಾಜ್ಯದ ಯೋಗ ಕ್ಷೇಮಕ್ಕೆ ಸಂಬಂಧ ಪಟ್ಟ ವಿಚಾರ ,ನೀವು ಈಗ ರಾಜ್ಯದ ಪ್ರತಿನಿಧಿಗಳು ,ಆದ್ದರಿಂದ ನಾನು ನಿಮ್ಮಲ್ಲಿಗೆ ಬರುವುದೇ ಕರ್ತವ್ಯ "ಎಂದರಂತೆ .ಹನುಮಂತಯ್ಯನವರು ನನಗೆ ಹೇಳಿದರು "ಇಂತಹ ವಿಷಯಗಳಲ್ಲಿ ಪಟ್ಟು ಹಿಡಿಯುತ್ತಾರೆ ,ಬಂದೇ ಬಿಡುತ್ತಾರೆ ,ಆದ್ದರಿಂದ ಅವರು ಹೊರಡುವುದರೊಳಗೆ ನಾನು ಅವರ ಮನೆಯಲ್ಲಿರಬೇಕೆಂದು ನಿಶ್ಚಯಿಸಿದೆ .ಅದೇ ನಾನು ಹೇಳಿದ 'ಅರ್ಜೆನ್ಸಿ "ಅಂತ ಮಹಾತ್ಮರಿಗೆ ಇಲ್ಲಿಗೆ ಬರುವ ತೊಂದರೆ ಕೊಟ್ಟರೆ ಅದು ನಮಗೆ ಶ್ರೇಯಸ್ಸಲ್ಲ ."
ಇಬ್ಬರು ಮಹಾತ್ಮರ ನಡಾವಳಿ ಹೇಗಿದೆ ?
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ