ಮಟ್ಟು ಗುಳ್ಳದ ಹೊಸ ರೂಪ
ಮಟ್ಟು ಗುಳ್ಳ ಸವಿ ಬಲ್ಲವನೇ ಬಲ್ಲ .ನಮ್ಮ ಜಿಲ್ಲೆಯಲ್ಲಿ ಬಹಳ ಜನಪ್ರಿಯ . ಇತ್ತೀಚೆಗೆ ನಮ್ಮ ಪುತ್ತೂರು ಕಡೆ ಹೆಚ್ಚು ಕಾಣಿಸಿ ಕೊಳ್ಳುತ್ತಿಲ್ಲ .
ಉಡುಪಿ ಜಿಲ್ಲೆಯ ಮಟ್ಟು ,ಕೈಪುಂಜಲ್ ಮತ್ತು ಉಳಿಯಾರ ಗೋಳಿ ಪ್ರದೇಶದ ಸುಮಾರು 200 ಎಕ್ರೆ ಪ್ರದೇಶದಲ್ಲಿ ಬೆಳೆಯುವ ಈ ಬದನೆಗೆ 2011 ರಲ್ಲಿ ಬೌಗೋಳಿಕ ಸೂಚಕ ಗುರುತು ಪಟ್ಟಿ (Geographical indication tag )ಸಿಕ್ಕಿತು .ಇದನ್ನು ವಾಣಿಜ್ಯ ಮಂತ್ರಾಲಯದ GI ರಿಜಿಸ್ಟ್ರಾರ್ ನೀಡುವರು . ಒಂದು ಬೌಗೋಳಿಕ ಪ್ರದೇಶದ ವಿಶಿಷ್ಟ ಗುಣದ ಕೃಷಿ ,ಕೈಗಾರಿಕಾ ಉತ್ಪನ್ನಗಳಿಗೆ ಇದನ್ನು ನೀಡಲಾಗುವುದು .ಉಡುಪಿ ಜಿಲ್ಲೆಯ ಮಲ್ಲಿಗೆ ಮತ್ತು ಸೀರೆ ಕೂಡಾ ಇದನ್ನು ಪಡೆದುಕೊಂಡಿವೆ .
ಮಟ್ಟು ಗುಳ್ಳದ ಸ್ಟಿಕರ್ ನಲ್ಲಿ ಶ್ರೀ ವಾದಿರಾಜ ಸ್ವಾಮಿ ಚಿತ್ರ ಮತ್ತು ಮತ್ತು ಗುಳ್ಳ ಬೆಳೆಗಾರರ ಸಂಘದ ಲೋಗೋ ಇದೆ .ಸೋದೆ ಮಠದ ಶ್ರೀ ವಾದಿರಾಜ ಸ್ವಾಮಿ ಶ್ರೀ ಹಯಗ್ರೀವರ ಆಶೀರ್ವಾದದೊಂದಿಗೆ ಮಟ್ಟು ಗುಳ್ಳದ ಬೀಜಗಳನ್ನು ಇಲ್ಲಿಯ ಕೃಷಿಕರಿಗೆ ನೀಡಿದರು ಎಂಬ ನಂಬಿಕೆ ಇದೆ
ನೀವು ಸೇಬು ,ಆಮದು ಕಿತ್ತೆಲೆ ಇತ್ಯಾದಿಗಳ ಮೇಲೆ GI ಸ್ಟಿಕ್ಕರ್ ಗಳನ್ನು ನೋಡಿರ ಬಹುದು .ಅದೇ ತರಹದ ಸ್ಟಿಕ್ಕರ್ ಈಗ ಮಟ್ಟು ಗುಳ್ಳ ಕ್ಕೂ ಹಾಕಿ ಮಾರುತ್ತಾರೆ . ಇದರಿಂದ ವಿದೇಶಗಳಿಗೆ ಇದನ್ನು ರಫ್ತು ಮಾಡಲು ಅನುಕೂಲ ಆಗಿದೆ .
ಸ್ಥಳೀಯವಾಗಿ ಇದರ ಬೆಲೆ ಸ್ವಲ್ಪ ಹೆಚ್ಚಾದರೂ ನಮ್ಮ ಊರ ಬೆಳೆ ಹೆಸರು ಪಡೆಯುವುದು ನಮಗೆ ಹೆಮ್ಮೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ