ಸಮೂಹ ಸಾರಿಗೆ
ಸಮೂಹ ಸಾರಿಗೆಯ ಪ್ರಯಾಣ ನಮ್ಮನ್ನು ಸಮಾಜ ಜೀವಿಯನ್ನಾಗಿ ಮಾಡುವುದರಲ್ಲಿ ಪ್ರಾಮುಖ್ಯ ಪಾತ್ರ ನಿರ್ವಹಿಸುತ್ತದೆ . ಹಿಂದೆ ಬಸ್ಸಿನಲ್ಲಿ ನೀವು ಹತ್ತಿ ಕುಳಿತೊಡನೆ ಪಕ್ಕದವರು 'ನಿಕ್ಕ್ ಓಳಾಂಡು ಮಗ "ಎಂದು ಮಾತಿಗೆ ತೊಡಗುವುದು ಸಾಮಾನ್ಯ ಆಗಿತ್ತು . ನಾವು ಇಳಿಯುವ ವರೆಗೆ ಸುಖ ದುಖ ಮಾತನಾಡುವರು . ಸಣ್ಣ ಮಕ್ಕಳು ನಿಂತಿದ್ದರೆ' ಬಲೇ ಬಾಲೆ ಜಕ್ಕೆಲ್ಡು ಕುಳ್ಳು ಎಂದು ಕುಳಿತು ಕೊಳ್ಳಿಸುವರು.ಕಂಡಕ್ಟರ್ ಹಿಂದಿನ ಬಾಗಿಲಿನ ಬಳಿ ಇರುವಾಗ ನಿಂತವರನ್ನು ಮುಂದೆ ಹೋಗಿ ಎನ್ನುವನು ,ಮುಂದಿನ ಬಾಗಿಲಿಗೆ ಬಂದಾಗ ಹಿಂದೆ ಹೋಗಿ ಎಂದು ಗದರುವನು .ಮುಂದೆ ಬಂದವರು ಹಿಂದೆ ಹೋಗಲು ಮತ್ತು ವೈಸ್ ವೆರ್ಸಾ ನಮ್ಮ ಜೀವನದ್ಲಲೂ ತಯಾರಿರಬೇಕು ಎಂಬ ಸಾಂಕೇತಿಕ ಪಾಠ . ಪ್ರಯಾಣ ಎಷ್ಟು ಸುಖಕರ ಆಗಿದ್ದರೂ ನಮ್ಮ ನಿಲ್ದಾಣ ಬರುವಾಗ ಇಳಿಯ ಬೇಕು
ಈಗ ಯಾರೂ ಬಸ್ ಪ್ರಯಾಣ ಇಷ್ಟ ಪಡುವುದಿಲ್ಲ .ಇದು ನಾವು ಸಮಾಜ ವಿಮುಖ ಆಗುತ್ತಿರುವುದರ ಲಕ್ಷಣ . ಒಂದು ವೇಳೆ ಬಸ್ ಹತ್ತಿದರೂ ಅಕ್ಕ ಪಕ್ಕದವರ ಗೊಡವೆ ಇಲ್ಲದೆ ಮೊಬೈಲ್ ನೋಟ ಮಾತ್ರ . ವೈದ್ಯರು ,ವಕೀಲರು ,ಗಣ್ಯರು ಬಸ್ ಪ್ರಯಾಣ ಮಾಡುವುದು ಮರ್ಯಾದೆಗೆ ಕಮ್ಮಿ ಎಂಬ ಭಾವನೆ ಬಂದಿದೆ . ನಾನು ಬಸ್ಸಿನಲ್ಲಿ ಯಾತ್ರೆ ಮಾಡುವುದನ್ನು ಕಂಡು ಬಹಳ ಮಂದಿ ಕನಿಕರಿಸುತ್ತಾರೆ ."ಪಾಪ ಡಾಕ್ಟರಾಗಿ ಬಸ್ ನಲ್ಲಿ ಬರುತ್ತಾರೆ .ಪ್ರಾಕ್ಟೀಸ್ ಏನೂ ಇಲ್ಲ ಎಂದು ಕಾಣುತ್ತದೆ "ಇದೇ ಮಾತನ್ನು ನಾನು ಪೇಟೆಯಲ್ಲಿ ಚೀಲ ಹಿಡಿದು ತರಕಾರಿ ಮನೆ ಸಾಮಾನು ನೇಲಿಸಿ ಕೊಂಡು ಹೋಗುವುದನ್ನು ಕಂಡು ಹೇಳುತ್ತಾರೆ . ಬೇಸರ ಎಂದರೆ ಮಕ್ಕಳಿಗೆ ಎಳವೆಯಲ್ಲಿಯೇ ನಡೆಯುವುದು .ನಾಲ್ಕು ಚಕ್ರಕ್ಕಿಂತ ಕಡಿಮೆ ಇರುವ ವಾಹನದಲ್ಲಿ ಹೋಗುವುದು ಅಂತಸ್ತಿಗೆ ಹೇಳಿದ್ದಲ್ಲ ಎಂಬ ನಂಬಿಕೆ ಹುಟ್ಟಿಸಿ ಬಿಡುತ್ತಾರೆ .
ನೀವು ಮುಂಬೈಗೆ ಹೋಗಿದ್ದರೆ ,ಅಲ್ಲಿಯ ಲೋಕಲ್ ಟ್ರೈನ್ ನಲ್ಲಿ ಪ್ರಯಾಣಿಸಿರುವಿರಿ . ಅದಕ್ಕೆ ಹತ್ತುವಾಗ ನೂಕು ನುಗ್ಗಲು ಇರುತ್ತದೆ .ಆದರೆ ಎಲ್ಲರೂ ಚಲೋ ಭಾಯಿ ಎಂದು ನಿಮ್ಮನ್ನು ಒಳಗೆ ನುಗ್ಗಿಸಿಯೇ ತಾವೂ ಒಳಕ್ಕೆ ಬರುವರು . ನಾವು ಇಲ್ಲಿ ಮಾಡುವ ಹಾಗೆ ಮುಂದಿನವನನ್ನು ಹಿಂದೆ ತಳ್ಳಿ ಹತ್ತುವುದಿಲ್ಲ .ಇದು ಅಲ್ಲಿಯ ಜೀವನ ತತ್ವ .ತಾನೂ ಬದುಕಿ ಇತರರನ್ನೂ ಬದುಕ ಬಿಡುವುದು . ಮುಂಬೈ ಯಲ್ಲಿ ಶ್ರೀಮಂತ ಇರಲಿ ಬಡವ ಇರಲಿ ನೆಲಕ್ಕೆ ಹತ್ತಿರ ಇರುವರು .
ಇದೇ ಮನೋಭಾವ ಈಗ ವರ್ಕಿಂಗ್ ಫ್ರಮ್ ಹೋಮ್ ಮತ್ತು ವರ್ಚುವಲ್ ಕ್ಲಾಸ್ ಮತ್ತು ಮೀಟಿಂಗ್ ಗಳೂ ಉಂಟು ಮಾಡುವವು ಎಂದು ನನ್ನ ಭಾವನೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ