ಬಾಲ್ಯದಲ್ಲಿ ದೇವಸ್ಥಾನ ಗಳಲ್ಲಿ ಬೆಲ್ಚ ಪ್ಪಾಡ ರು ಕಾಣ ಬರುತ್ತಿದ್ದರು . ಉದ್ದ ಕೂದಲು ಬಿಟ್ಟು ಕೆಂಪು ಬಟ್ಟೆ ಶಾಲು ಧರಿಸಿ ,ಕೈಯಲ್ಲಿ ಕಡಗ , ಒಂದು ಖಡ್ಗ ಹಿಡಿದು ಬರುತ್ತಿದ್ದ ದೃಶ್ಯ ಕಣ್ಣು ಮುಂದೆ ಇದೆ .ದೇವರು (ದೇವಿ )ಇವರ ಮೈಮೇಲೆ ಬಂದು ಭಕ್ತರಿಗೆ ಸಾಂತ್ವನ ಹೇಳಿ ಧೈರ್ಯ ಕೊಡುವರು ಎಂಬ ನಂಬಿಕೆ .ಇದು ಒಂದು ಕೇರಳೀಯ ಪರಂಪರೆ . ನಮ್ಮ ಗ್ರಾಮದ ಬೆಲ್ಚ ಪ್ಪಾಡರ ಮಾತೃ ಭಾಷೆ ಕೂಡಾ ಮಲಯಾಳ ಆಗಿದ್ದು ನನ್ನ ಆಪ್ತ ಮಿತ್ರ ರಾಜು ಬೆಲ್ಚಡ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಆಗಿದ್ದಾರೆ .
ಮಲಯಾಳದ ವೆಲುಪ್ಪಚ್ಚಾಡ ಎಂಬ ಮೂಲದಿಂದ ಈ ಶಬ್ದ ಬಂದಿರ ಬೇಕು . ಪದದ ಅರ್ಥ ಬೆಳಕು ತೋರುವವವನು .ತೆಂಕ್ಲಾಗಿ ಗಂಡು ಮತ್ತು ಸ್ತ್ರೀ ವೆಲ್ಚಪ್ಪಾಡ್ ಇರುವರು .ಉತ್ಸವ ದಿನ ಪೂಜಾ ಸಮಯ ಚೆಂಡೆ ಗಂಟೆ ಘಂಟಾ ಘೋಷಕ್ಕೆ ಖಡ್ಗ ಝಳಪಿಳಸುತ್ತಾ ಆವೇಶ ಬಂದು ಕುಣಿಯುವರು ,
ಇತರ ದಿನಗಳಲ್ಲಿ ಕೂಡಾ ಮನೆ ಮನೆಗೆ ಬಂದು ಆಶೀರ್ವಾದ ಮಾಡಿ ಪ್ರೀತಿಯಿಂದ ಕೊಟ್ಟ ಕಾಣಿಕೆ ತೆಗೆದು ಕೊಂಡು ಹೋಗುವರು .ನಮ್ಮ ಊರಿನಲ್ಲಿ ಈಗ ಇವರನ್ನು ಕಾಣ ಸಿಗುವುದಿಲ್ಲ .
ಪ್ರಸಿದ್ಧ ಕೊಡುಂಗಲ್ಲೂರು ಭಗವತಿ ಕ್ಷೇತ್ರದ ವೆಳಿಚ್ಚ ಪ್ಪಾಡ್ ತುಳ್ಳಲ್(ಕುಣಿತ ) ನೋಡಲು
https://www.youtube.com/watch?v=2xl94n81wiE&t=16s
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ