ಜಲೋದರ
ನಮ್ಮ ಉದರದದೊಳಗೆ ಜಠರ ಕರುಳ ಮಾಲೆ ಇತ್ಯಾದಿ ತೇಲುತ್ತಲಿದ್ದು ಅದಕ್ಕೆ ಸಾಕಷ್ಟು ಸ್ಥಳಾವಕಾಶ ಇದೆ .ಅಲ್ಲದೆ ಅವುಗಳ ಸುಲಲಿತ ಚಲನೆಗೆ ಸುಮಾರು ೫೦ ಮಿಲ್ಲಿ ಲೀಟರ್ ನಷ್ಟು ದ್ರವ ಇದ್ದು ಘರ್ಷಣೆ ನಿವಾರಕ ಆಗಿ ಕೆಲಸ ಮಾಡುವದು .
ಆದರೆ ಕೆಲವು ಸಂದರ್ಭಗಳಲ್ಲಿ ದ್ರವ ಉತ್ಪತ್ತಿ ಮತ್ತು ಶೇಖರಣೆ ಹೆಚ್ಚು ಆಗಿ ಹೊಟ್ಟೆ ಉಬ್ಬುವುದು . ಎದೆಯ ನೀರಿಗಿಂತ ಇಲ್ಲಿ ಹೊರಗೆ ವಿಕಸಿಸಲು ಅವಕಾಶ ಇದೆ .
ಮದ್ಯಪಾನ ,ಅಥವಾ ಸೋಂಕು ರೋಗಗಳಿಂದ ಲಿವರ್ ಕಾರ್ಯ ನಾಶ ಆದರೆ ಜಲೋದರ ಬರುವದು ಸಾಮಾನ್ಯ . ಹೊಟ್ಟೆಯ ಪೋರ್ಟಲ್ ರಕ್ತ ನಾಳ ಗಳ ಒಳಗೆ ಹೆಚ್ಚಿದ ಒತ್ತಡ , ಲವಣ ಮತ್ತು ನೀರು ಹಿಡಿದು ಕೊಳ್ಳುವ ಅಲ್ದೊ ಸ್ಟಿರೋನ್ ಎಂಬ ಹಾರ್ಮೋನ್ ಮಿತಿ ಮೀರಿ ಉತ್ಪಾದನೆ ಮತ್ತು ರಕ್ತದಲ್ಲಿ ಸಸಾರ ಜನಕದ (ಲಿವರ್ ಇದರ ಕಾರ್ಖಾನೆ )ಕೊರತೆ ಇದಕ್ಕೆ ಕಾರಣ .
ಇನ್ನು ಕ್ಷಯ ರೋಗ ,ಕ್ಯಾನ್ಸರ್,ಅಪೌಷ್ಟಿಕತೆ ಮತ್ತು ಮೂತ್ರ ಪಿಂಡ ಹೃದಯ ವೈಫಲ್ಯ ದಲ್ಲಿಯೂ ಹೊಟ್ಟೆಯಲ್ಲಿ ನೀರು ತುಂಬಿ ಕೊಳ್ಳ ಬಹುದು . ಸೂಜಿ ಹಾಕಿ ನೀರು ಪರೀಕ್ಷೆ ಮಾಡಿ ಕಾರಣ ತಿಳಿದು ಕೊಳ್ಳುವರು . ಹೊಟ್ಟೆಯ ಸ್ಕ್ಯಾನ್ ಸಹಾಯ ಕಾರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ