ಎದೆಯಲ್ಲಿ ನೀರು ತುಂಬುವುದು
ಎದೆಯಲ್ಲಿ ಮುಖ್ಯವಾದ ಎರಡು ಅಂಗಗಗಳು ಇವೆ . ಎರಡು ಶ್ವಾಸ ಕೋಶಗಳು ಮತ್ತು ಅವುಗಳ ನಡುವೆ ಹೃದಯ .ಶ್ವಾಸ ಕೋಶಗಳಲ್ಲಿ ಆಮ್ಲಜನಕ ಹೀರಿ ಶುದ್ದವಾದ ರಕ್ತ ಶ್ವಾಸಕೋಶದ ಅಭಿಧಮನಿ ಮೂಲಕ ಹೃದಯದ ಎಡ ಹೃತ್ಕರ್ಣ ,ಹೃತ್ಕುಕ್ಷಿ ಸೇರಿ ಮಹಾ ಅಪಧಮನಿ ಮೂಲಕ ಶರೀರದ ಎಲ್ಲಾ ಅಂಗಗಳಿಗೆ ಸರಬರಾಜು ಆಗುವುದು .
ಅದೇ ರೀತಿ ಶರೀರದಿಂದ ಬಂದ ಕಡಿಮೆ ಆಮ್ಲಜನಕ ಇರುವ ಹೆಚ್ಚು ಕಾರ್ಬನ್ ಡಯಾ ಕ್ಸೈಡ್ ಇರುವ ರಕ್ತ ಬಲ ಹೃತ್ಕರ್ಣ ,ಹೃತ್ಕುಕ್ಷಿ ,ಶ್ವಾಸ ಕೋಶದ ಅಪಧಮನಿ ಮೂಲಕ ಶ್ವಾಸಕೋಶಗಳಿಗೆ ಹೋಗುವುದು .
ಶ್ವಾಸ ಕೋಶ ಮತ್ತು ಹೃದಯಕ್ಕೆ ಅನುಕ್ರಮ ವಾಗಿ ಪ್ಲೂರಾ ಮತ್ತು ಪೆರಿ ಕಾರ್ಡೀಯಮ್ ಎಂಬ ಎರಡು ಹೊದಿಕೆಯ ರಕ್ಷಣಾತ್ಮಕ ಪೊರೆಗಳು ಇರುತ್ತವೆ .ಇವುಗಳ ಒಳಗೆ 10 ಮಿಲಿ ಲೀಟರ್ ನಷ್ಟು ಲುಬ್ರಿ ಕೆಂಟ್ ದ್ರವ ಇರುತ್ತದೆ .
ಕೆಲವೊಮ್ಮೆ ಕಾಯಿಲೆಯಲ್ಲಿ ಪ್ಲೂರಾ ದ ಎರಡು ಹೊದಿಕೆಗಳ ನಡುವೆ ದ್ರವ ತುಂಬಿ ಅದು ಶ್ವಾಸ ಕೋಶವನ್ನು ಒತ್ತಿ ಸರಿಯಾಗಿ ವಿಕಸನ ಆಗಲು ಬಿಡದು .ಎದೆಯ ಗೂಡನ್ನು ಪಕ್ಕೆಲುಬುಗಳು ಕಾಯುವುದರಿಂದ ಹೊರಗಡೆ ವಿಸ್ತರಿಸಲು ಆಗದು ತಾನೇ . ಇದನ್ನು ಪ್ಲೂರಲ್ ಎಫ್ಯೂಶನ್ ಎನ್ನುತ್ತಾರೆ . ಅದೇ ರೀತಿ ಹೃದಯದ ಎರಡು ಹೊದಿಕೆಗಳ ನಡುವೆ ಆದರೆ ಪೆರಿ ಕಾರ್ಡಿಯಲ್ ಎಫ್ಯೂಶನ್ ಎನ್ನುವರು . ಇದು ದೊಡ್ಡ ಪ್ರಮಾಣದಲ್ಲಿ ಇದ್ದರೆ ಹೃದಯ ಸಂಕುಚನ ವಿಕಸನದಲ್ಲಿ ,ವಿಕಸನಕ್ಕೆ ಅಡ್ಡಿ ಬಂದು ತೊಂದರೆ ಉಂಟು ಮಾಡುವುದು .
ಎರಡೂ ರೀತಿಯ ದ್ರವ ಸಂಗ್ರಹ ಬೇರೆ ಬೇರೆ ಕಾರಣಕ್ಕೆ ದಮ್ಮು ಕಟ್ಟುವುದು ಉಂಟು ಮಾಡುವುದು .ಮತ್ತು ಅದನ್ನು ಉಂಟು ಮಾಡುವ ಮೂಲ ಕಾಯಿಲೆ ಯಾ ಲಕ್ಷಣ ಗಳಾದ ಕೆಮ್ಮು ಜ್ವರ ಇತ್ಯಾದಿ
ಪ್ಲೂರಲ್ ಎಫ್ಯೂಶನ್ ಗೆ ನಮ್ಮ ದೇಶದಲ್ಲಿ ಮುಖ್ಯ ಕಾರಣ ಕ್ಷಯ ರೋಗ .ಹೃದಯ ವೈಫಲ್ಯ ,ಕಾನ್ಸರ್ ,ಶ್ವಾಸ ಕೋಶದ ಸೋಂಕು, ಇತ್ಯಾದಿ ಇತರ ಕೆಲ ಸಾಮಾನ್ಯ ಕಾರಣಗಳು . ಡೆಂಗು ಜ್ವರದಲ್ಲಿ ಕೂಡಾ ಸಣ್ಣ ಪ್ಲೂರಲ್ ದ್ರವ ಸಂಗ್ರಹ ಸಾಮಾನ್ಯ .ವೈದ್ಯರು ಎದೆಯ ಮೇಲೆ ಕುಟ್ಟುವುದು (ಮರ್ಧನ)ಮತ್ತು ಶ್ರವಣ ದ ಮೂಲಕ ನೀರು ತುಂಬಿರುವುದು ಸಂಶಯಿಸಿ ಎಕ್ಸ್ ರೇ ಮತ್ತು ಸ್ಕ್ಯಾನ್ ಮೂಲಕ ದೃಢ ಪಡಿಸಿ ಕೊಳ್ಳುವರು . ನೀರು ಇರುವ ಭಾಗಕ್ಕೆ ಪಕ್ಕೆಲುಬುಗಳ ನಡುವಿಂದ ಸೂಜಿ ಹಾಯಿಸಿ ನೀರು ತೆಗೆದು ಪರೀಕ್ಷೆ ಮಾಡಿ ಕಾರಣ ಕಂಡು ಹಿಡಿದು ಚಿಕಿತ್ಸೆ ಮಾಡುವರು .
ಹೃದಯದ ಸುತ್ತ ನೀರು ನಿಲ್ಲುವುದಕ್ಕೆ ಕ್ಷಯ , ಇತರ ಸೋಂಕು ರೋಗಗಳು ,ಥೈರೊಯ್ಡ್ ಹಾರ್ಮೋನ್ ಕೊರತೆ ಇತ್ಯಾದಿ ಕಾರಣಗಳು . ಹೃದಯದ ಸ್ಕ್ಯಾನ್ -ಏಕೋ ಕಾರ್ಡಿಯೋಗ್ರಫಿ ಮೂಲಕ ದೃಢ ಪಡಿಸಿ ,ದ್ರವ ಸಂಗ್ರಹಿಸಿ ಕಾರಣ ಕಂಡು ಹಿಡಿದು ಚಿಕಿತ್ಸೆ .
ಅವಘಡ ,ಮತ್ತು ಇನ್ನಿತರ ಕಾರಣಗಳಿಂದ ಪೆಟ್ಟು ಆದಾಗ ಎದೆಯ ಒಳಗೆ ರಕ್ತ ಸ್ರಾವ ಆಗಿ ಪ್ಲೂರಲ್ ಅಥವಾ ಪೆರಿ ಕಾರ್ಡಿಯಲ್ ಗಳ ಒಳಗೆ ರಕ್ತ ಸಂಗ್ರಹ ಆಗಿ ದುಷ್ಪರಿಣಾಮ ಉಂಟು ಮಾಡಬಹುದು .
ಈ ರೀತಿ ಸಂಗ್ರಹ ಆದ ದ್ರವದ ಪ್ರಮಾಣ ಉಸಿರುಕಟ್ಟುವಿಕೆ ಉಂಟು ಮಾಡುತ್ತಿದ್ದರೆ ಸೂಜಿ ಮತ್ತು ಕೊಳಾಯಿ ಮೂಲಕ ಅದನ್ನು ಹೊರತೆಗೆಯುವರು . ಮತ್ತು ಮೂಲ ಕಾರಣಕ್ಕೆ ಚಿಕಿತ್ಸೆ ಮಾಡುವರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ