ಪ್ರೊ ಎ ವಿ ನಾರಾಯಣ ಮತ್ತು ಪ್ರೊ ವತ್ಸಲಾ ರಾಜ್ಞಿ ದಂಪತಿಗಳು
ಶೈಕ್ಷಣಿಕ ರಂಗದಲ್ಲಿ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ (ಯುವಕರನ್ನೂ ನಾಚಿಸುವಂತೆ )ಕ್ರಿಯಾ ಶೀಲವಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ ತಮ್ಮನ್ನು ತೊಡಗಿಸಿ ಗೊಂಡ ದಂಪತಿ ಶ್ರೀ ಎ ವಿ ನಾರಾಯಣ ಮತ್ತು ವತ್ಸಲಾ ಮೇಡಂ .ಪ್ರೊ ನಾರಾಯಣ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ದಿಂದ ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕ ರಾಗಿ ಸೇರಿ ,ಪ್ರಿನ್ಸಿಪಾಲ್ ಆಗಿ ನಿವೃತ್ತರಾದವರು. ಒಳ್ಳೆಯ ಶಿಕ್ಷಕ ರೂ ,ಆಡಳಿತ ಗಾರರೂ ಎಂದು ನಿರೂಪಿಸಿದ ಇವರು ನಂತರವೂ ಕಾಲೇಜು ಆಡಳಿತ ಮಂಡಳಿಯಲ್ಲಿ ಸಕ್ರಿಯರಾಗಿ ಇದ್ದು ಸಂಸ್ಥೆಯ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ತಮ್ಮ ಯೋಗದಾನ ನೀಡಿದವರು . ಜತೆಗೆ ಸಾಹಿತ್ಯ ಪರಿಷತ್ ,ಹಿರಿಯ ನಾಗರಿಕರ ಸಂಘಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು . ತನು ಮನ ಧನ ದ ಕೊಡುಗೆ ಎಂಬುದು ಇವರ ವಿಚಾರಕ್ಕೆ ಕ್ಲೀಷೆ ಯಲ್ಲ . ಕನ್ನಡ ಕೆಲಸ ಗಳಲ್ಲಿ ಉತ್ಸಾಹ ದಿಂದ ಓಡಾಡುವದು ಕಾಣ ಬಹುದು .
ವತ್ಸಲಾ ಮೇಡಂ ಗಣಿತ ಶಾಸ್ತ್ರ ಪ್ರಾಧ್ಯಾಪಕೆರಾಗಿ ಅದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು . ಕಠಿಣ ವೆಂದು ಪರಿಗಣಿತವಾದ ಈ ವಿಷಯವನ್ನು ಸುಲಿದ ಬಾಳೆಯ ಹಣ್ಣಿನಂತೆ ಮಾಡುವ ಇವರ ಪಾಠ ಪ್ರವಚನ ಗಳನ್ನು ವಿದ್ಯಾರ್ಥಿಗಳು ಈಗಲೂ ನೆನಪಿಸಿ ಕೊಳ್ಳುತ್ತಾರೆ .
ಇಬ್ಬರೂ ವಿದ್ಯಾರ್ಥಿ ಮತ್ತು ಆಡಳಿತ ಮಂಡಳಿ ಮನ್ನಣೆ ಪಡೆದವರು . ಮೃದು ಮಿತ ಮತ್ತು ಹಿತ ಭಾಷಿಗಳು . ಇಂತಹವರ ಇರುವಿಕೆಯಿಂದ ಸಮಾಜದ ಶ್ರೀಮಂತಿಕೆ ಇದ್ದದ್ದು ಉಳಿಯುತ್ತದೆ ,ಮತ್ತು ಹೆಚ್ಚುತ್ತದೆ .
ಇವರು ಹೀಗೇ ಅರೋಗ್ಯ ,ಸಂತೋಷ ಮತ್ತು ಸಡಗರದಿಂದ ಇದ್ದು ನಮಗೆಲ್ಲಾ ಮಾರ್ಗ ದರ್ಶನ ಮಾಡುತ್ತ ಇರಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ