ನಮ್ಮ ನೆಹರೂನಗರ ಪರಿಸರದಲ್ಲಿ ಬಂಜಾರ ವನಸ್ ಎಂಬ ಹೋಟೆಲ್ ಆರಂಭಿಸಿದ್ದಾರೆ . ಬಂಜಾರ ವನಸ್ ಎಂದರೆ ಹೊಟ್ಟೆ ತುಂಬಾ ಊಟ ಎಂದು ಅರ್ಥ . ಇದರ ಪ್ರವರ್ತಕರಿಗೆ ಶುಭಾಶಯ ಗಳು .
ಉಡುಪಿ ಯಲ್ಲಿ ಬಹಳ ಹಿಂದೆ ವನಸ್ ಎಂಬ ಹೋಟೆಲ್ ಆರಂಭ ವಾಗಿತ್ತು . ಜತೆಗೆ ಬಾಜಲ್ ಎಂಬ ತಂಪು ಪಾನೀಯ ಬಹಳ ವರ್ಷಗಳ ವರೆಗೆ ಬರುತ್ತಿತ್ತು . ತುಳು ಶಬ್ದಗಳನ್ನು ಜನಪ್ರಿಯ ಗೊಳಿಸಿದ ಅವರಿಗೆ ಅಭಿನಂದನೆಗಳು .. ಮಂಗಳೂರಿನಲ್ಲಿ ಕೂಡಾ ಹೊಟೇಲ್ ವನಸ್ ,ಇರೆತ್ತ ವನಸ್ ಹೆಸರಿನ ಹೊಟೇಲ್ ಗಳಿವೆ ಎಂದು ಕೇಳಿದ್ದೇನೆ.
ತಮಿಳು ಭಾಷೆಯಲ್ಲಿ ಪಾರ್ತಾಲ್ ಪಶಿ ತೀರುಮ್ (ನೋಡಿದರೇ ಸಾಕು ಹಸಿವು ನೀಗುವುದು )ಎಂಬ ನುಡಿಗಟ್ಟು ಇದೆ .ಇದೇ ಹೆಸರಿನ ಸಿನಿಮಾ ಕೂಡಾ ೧೯೬೨ ರಲ್ಲಿ ಬಂದಿದ್ದು ಕಮಲ ಹಾಸನ್ ಬಾಲ ನಟರಾಗಿ ಅಭಿನಯಿಸಿದ್ದರು . ಎಂ ಟಿ ಆರ್ ಹೋಟೆಲ್ ತಿಂಡಿ ಪಾರ್ತಾಲೆ ಪಶಿ ತೀರುಮ್ ಎಂದು ಟಿ ಎಸ ಆರ್ ಪ್ರಜಾವಾಣಿಯಲ್ಲಿ ಬರೆದದ್ದನ್ನು ಓದಿದ ನೆನಪು .
ನಾ ಮೊಗಸಾಲೆ ಯವರ ಧರ್ಮ ಯುದ್ಧ ಕಾದಂಬರಿ ಯಲ್ಲಿ ನಮ್ಮ ಹಳ್ಳಿಗಳ ಆಗಿನ ಹೋಟೆಲ್ ಗಳ ಪ್ರೋಟೋ ಟೈಪ್ ಒಂದರ ಚಿತ್ರಣ ಚೆನ್ನಾಗಿ ಚಿತ್ರಿಸಿದ್ದಾರೆ . ನಮ್ಮ ಮನೆ ಸಮೀಪ ಬೈರಿ ಕಟ್ಟೆಯಲ್ಲಿ ಶಂಕರ ನಾರಾಯಣ ರಾವ್ ಎಂಬುವರ ಹೋಟೆಲ್ ಇದೇ ತರಹ ಇದ್ದು ,ಕ್ಯಾಷಿ ಯರ್ ,ಸಪ್ಲೈಯ್ಯರ್ ,ಕುಕ್ ಮತ್ತು ಕ್ಲೀನರ್ ಗಳ ಏಕ ಪಾತ್ರಾಭಿನಯ ಕಾಣ ಬಹುದಾಗಿತ್ತು . ನನ್ನ ತಂದೆಯವರ ಆಪ್ತ ಮಿತ್ರರು . ಒಂದೂವರೆ ಮೀಟರ್ ಚಾ ವನ್ನು ದೊಡ್ಡ ಕುಪ್ಪಿ ಗ್ಲಾಸ್ (ಈಗಿನ ಹೋಟೆಲ್ ಗಳಲ್ಲಿ ಇರುವುದರ ಮೂರು ಪಟ್ಟು )ತುಂಬಿಸಿ ಕೊಡುತ್ತಿದ್ದರು .ಅವರ ಬನ್ಸ್ ,ಕಾರದ ಕಡ್ಡಿ ,ಸಜ್ಜಿಗೆ ಬಜಿಲ್ ತುಂಬಾ ಚೆನ್ನಾಗಿತ್ತು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ