ಸಾಫ್ಟ್ ಹ್ಯಾಂಡ್ ನ ಸಾಫ್ಟವೆರ್ ಹುಡುಗ ಹುಡುಗಿಯರಿಗೆ ಉಪ್ಪಿಟ್ಟು ಮಾಡುವ ವಿಧಾನ (ಇಬ್ಬರಿಗೆ)
ವಿಧಾನ ೧
ಮೂರು ಹಸಿಮೆಣಸು ,ಎರಡು ಈರುಳ್ಳಿ ,ಸಣ್ಣ ತುಂಡು ಶುಂಠಿ ಸಣ್ಣಕೆ ಹಚ್ಚಿಕೊಳ್ಳಿರಿ . ಆಮೇಲೆ ಚೆನ್ನಾಗಿ ಕೈ ತೊಳೆದು ಕೊಳ್ಳಿರಿ . ಒಂದು ಒಲೆಯ ಮೇಲೆ ಬಾಣಲೆಯಲ್ಲಿ ಎರಡು ಕಪ್ ರವೆ ಹಾಕಿ ಚಿನ್ನದ ಬಣ್ಣ ಬರುವ ವರೆಗೆ ತಿರುವಿ ಅದನ್ನು ಒಂದು ಬಟ್ಟಲಲ್ಲಿ ಸುರುವಿರಿ . ಇನ್ನೊಂದು ಒಲೆಯಲ್ಲಿ ಎರಡು ಕಪ್ ನೀರು ಕುಡಿಯಲು ಒಂದು ಪಾತ್ರೆಯಲ್ಲಿ ಇಡಿರಿ . ಬಾಣಲೆಗೆ ದೊಡ್ಡ ಎರಡು ಚಮಚೆ ಎಣ್ಣೆ (ಉದಾ ತೆಂಗಿನ ಎಣ್ಣೆ ,ನೆಲಗಡಲೆ ಎಣ್ಣೆ )ಹಾಕಿ ,ಅದಕ್ಕೆ ಎರಡು ಸಣ್ಣ ಚಮಚ ಸಾಸಿವೆ ,ಉದ್ದಿನ ಬೇಳೆ ಸೇರಿಸಿ ತಿರುವಿರಿ ,ಸಾಸಿವೆ ಚಟ ಚಟ ಹೇಳುವಾಗ ಹಚ್ಚಿ ಇಟ್ಟ ಈರುಳ್ಳಿ,ಹಸಿಮೆಣಸು ,ಶುಂಠಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ . ಚೆನ್ನಾಗಿ ತಿರುವಿರಿ . ಬಟ್ಟಲಲ್ಲಿ ಇಟ್ಟ ರವೆ (ಸಜ್ಜಿಗೆ )ಬಾಣಲೆಗೆ ಹಾಕಿರಿ ,ಒಂದು ಚಮಚ ಪುಡಿ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ತಿರುವಿರಿ . ಅಷ್ಟರಲ್ಲಿ ಇನ್ನೊಂದು ಒಲೆಯ ಮೇಲಿನ ಪಾತ್ರೆಯಲ್ಲಿ ನೀರು ಕುದಿಯಲು ಆರಂಭವಾಗುವದು . ಆ ನೀರನ್ನು ಬಾಣಲೆಗೆ ಹಾಕಿ ತಿರುವಿರಿ .ಆಮೇಲೆ ಒಂದು ಮುಚ್ಚಳ ಮುಚ್ಚಿ ಸ್ವಲ್ಪ ಕಾಯಿರಿ . ನೀರು ಆರಿದ ಒಡನೆ ಒಲೆಯಿಂದ ಕೆಳಗೆ ತೆಗೆದು ಇಟ್ಟು ,ತುರಿದ ತೆಂಗಿನ ಕಾಯಿ ,ಕೊತ್ತಂಬರಿ ಸೊಪ್ಪು ಹಾಕಿ ರಿ .ಬಿಸಿ ಬಿಸಿ ಉಪ್ಪಿಟ್ಟು ರೆಡಿ . (ಬಿಸಿ ಪಾತ್ರೆಯನ್ನು ಬರಿ ಕೈಯಲ್ಲಿ ಮುಟ್ಟದಿರಿ .ಬಟ್ಟೆ ಅಥವಾ ಇಕ್ಕುಳ ಉಪಯೋಗಿಸಿ .
ವಿಧಾನ ೨
ನೀವು ಭಯಂಕರ ಬ್ಯುಸಿ ಆಗಿದ್ದು ಸಮಯದ ಅಭಾವ ಇದ್ದರೆ ಎಂ ಟಿ ಆರ್ ಅಥವಾ ೭೭೭ ಉಪ್ಪಿಟ್ಟು ಮಿಕ್ಸ್ ನ್ನು ಒಂದು ಕಪ್ ಗೆ ಎರಡರಂತೆ ನೀರು ಕುದಿಸಿ ಅದಕ್ಕೆ ಸುರುವಿರಿ .ಉಪ್ಪಿಟ್ಟು ರೆಡಿ ,ತಿನ್ನುವಾಗ ಪೇಪರ್ ಪ್ಲೇಟ್ ನಲ್ಲಿ ತಿಂದರೆ ತೊಳೆಯುವ ಕೆಲಸ ಇಲ್ಲ .
ಇಷ್ಟೂ ಸಮಯ ಇಲ್ಲದಿದ್ದರೆ ಸ್ವಿಗ್ಗಿ ಅಥವಾ ಝೋಮ್ಯಾಟೋ ಆಪ್ ಒತ್ತಿ ನಿಮ್ಮ ಇಷ್ಟದ ಹೋಟೆಲ್ ಗೆ ಆರ್ಡರ್ ಮಾಡಿರಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ