ಬದಲಾವಣೆಯ ಹರಿಕಾರ ಶ್ರೀ ಶ್ರೀನಿವಾಸ್
ನನಗೆ ಮುಂಜಾನೆ ವಾಕಿಂಗ್ ಮಾಡುವದುದರಿಂದ ಶರೀರಕ್ಕೆ ವ್ಯಾಯಾಮ ಮಾತ್ರವಲ್ಲ ಮನಸಿಗೆ ಉಲ್ಲಾಸ ಉಂಟಾಗುತ್ತದೆ .ವಿವಿಧ ಪಕ್ಷಿಗಳು ,ಅವುಗಳ ಸಂಗೀತ ಮತ್ತು ಬಗೆ ಬಗೆಯ ಪ್ರಾಣಿಗಳು ,ಪ್ರಕೃತಿಯಲ್ಲಿ ಕಾಣುವ ಹೊಸತು ಇವೆಲ್ಲಾ ಚೇತೋಹಾರಿ ಅಂಶಗಳು ಆದರೆ ಅಲ್ಲದೆ ವಾಕಿಂಗ್ ಸಮಯದಲ್ಲಿ ಬೇರೆ ವಾಕ್ಸ್ ಆ ಲೈಫ್ (walk of life )ನ ಜನರು ಸಿಗುತ್ತಾರೆ . ಅವರೊಡನೆ ಉಭಯ ಕುಶಲೋಪರಿ ವಿನಿಮಯ ಕೂಡಾ ನನಗೆ ಇಷ್ಟ .
ಅವರಲ್ಲಿ ಒಬ್ಬರು ಶ್ರೀನಿವಾಸ್ .ಇವರು ವಿವೇಕಾನಂದ ಕಾಲೇಜು ರೋಡ್ ನಲ್ಲಿ ಸ್ವಸ್ತಿಕ್ ಟೈಲರ್ ಎಂಬ ಅಂಗಡಿ ಇಟ್ಟಿದ್ದಾರೆ .ಮುಂಜಾನೆ ಆರು ಗಂಟೆಗೆಲ್ಲಾ ಹಾಜರ್ . ಅಂಗಡಿ ತೆರೆದು ದೇವರ ಪಟಕ್ಕೆ ನಮಸ್ಕರಿಸಿ ಕೆಲಸದಲ್ಲಿ ನಿರತರಾಗಿರುತ್ತಾರೆ . ನಮಗೆ ಸ್ಪೋಂಟೆನಿಯಸ್ ಮೈತ್ರಿ.ನನ್ನ ನೆರಳು ಹಾಯ್ದೊಡನೆ ಓಡಿ ಹೊರ ಬಂದು ನಮಸ್ಕಾರ ಮಾಡುವರು.
ಶ್ರೀನಿವಾಸ್ ಮೂರು ದಶಕ ಬೆಂಗಳೂರಿನಲ್ಲಿ ಟೈಲರ್ ವೃತ್ತಿ ನಡೆಸಿ ಈಗ ಪುತ್ತೂರಿಗೆ ಬಂದು ನೆಲೆಸಿರುವ ಇವರ ಹುಟ್ಟೂರು ಅನಂತಾಡಿ. ಇವರ ಸ್ಪೆಷಾಲಿಟಿ ಎಂದರೆ ಆಲ್ಟರೇಷನ್ ಅಥವಾ ಬದಲಾವಣೆ .ಸಾಮಾನ್ಯವಾಗಿ ಸಿಂಪಿಗರು ಈ ಕೆಲಸ ಇಷ್ಟ ಪಡುವುದಿಲ್ಲ . ಇವರ ಮುಖ್ಯ ವೃತಿಯೇ ಅದು .
ಬಾಲಂಗೋಚಿ : ಇವರು ಬಟ್ಟೆ ಮಾತ್ರ ಅಲ್ಟ ರೇಷನ್ ಮಾಡುವರು .ಲೇಡಿ ಯನ್ನು ಜೆಂಟ್ಸ್ ಮತ್ತು ವೈಸ್ ವೆರ್ಸ ಅಲ್ಲ . ಹಿಂದೆ ಮನೆ ತುಂಬಾ ಮಕ್ಕಳು ಇದ್ದಾಗ ಅಣ್ಣನ ಹಳೆ ಅಂಗಿ ತಮ್ಮ ,ಅಕ್ಕನ ಲಂಗ ರವಿಕೆ ತಂಗಿ ಸಣ್ಣ ದೊಡ್ಡ ಮಾಡಿಸಿ ಹಾಕುವುದು ಇತ್ತು . ಬೆಳೆಯುವ ಮಕ್ಕಳಿಗೆ ವರ್ಷಕ್ಕೇ ಹೊಲಿಸಿದ ಉಡುಪು ಟೈಟ್ ಆಗುವುದು ಸಹಜ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ