ಮೊನ್ನೆ ಚಂದ್ರಮಾನ ಯುಗಾದಿ ;ನಮ್ಮಲ್ಲಿ ಸಾಮಾನ್ಯವಾಗಿ ಸೌರಮಾನ ಯುಗಾದಿ ಅಥವಾ ವಿಷು ಹಬ್ಬ ಹೆಚ್ಚು ಆಚರಣೆಯಲ್ಲಿ ಇದ್ದರೂ ಒಂದು ಪಾಯಸ ಮಾಡುವುದು ಉಂಟು . ಎಲ್ಲಕ್ಕಿಂತ ಮುಖ್ಯ ಹೊಸ ಪಂಚಾಂಗ .ನಮ್ಮಲ್ಲಿ ದಶಕಗಳಿಂದ ವೈಜಯಂತಿ ಪಂಚಾಂಗ .ಅದರ ಮುಖ ಪುಟದಲ್ಲಿ ಮೀಸೆ ಹೊತ್ತ ಬಾಲಗಂಗಾಧರ ತಿಲಕರ ಮತ್ತು ವೈ ವೆಂಕಟೇಶ ಕೇತಕರ ಪಟ .
ಬಂದ ಕೂಡಲೇ ಓದುವುದು ಸಂವತ್ಸರ ಭವಿಷ್ಯ .ಈ ವರ್ಷ ಎಷ್ಟು ಕೊಳಗ ಮಳೆ ಬೀಳುವುದು ,ಅದರಲ್ಲಿ ಸಮುದ್ರಕ್ಕೆ ಎಷ್ಟು ,ಭೂಮಿಗೆ ಎಷ್ಟು ಇತ್ಯಾದಿ .ಆ ಮೇಲೆ ನಮ್ಮ ರಾಶಿ ಭವಿಷ್ಯ . ಅದು ಆಶಾಜನಕ ಇದ್ದರೆ ಓಕೆ .ಇಲ್ಲದಿದ್ದರೆ ಪತ್ರಿಕೆಗಳ ಯುಗಾದಿ ಸಂಚಿಕೆಯನ್ನು ನೋಡುವುದು .ಹೆಚ್ಚಾಗಿ ಅವು ಒಳ್ಳೆಯದನ್ನೇ ಬರೆಯುವವು .ಬೆಸ್ಟ್ ಆಫ್ ಆಲ್ ನಮಗೇ ಎಂದು ತಿಳಿದು ಸಂತೋಷ ಪಡುವುದು .
ಪಂಚಾಂಗದಲ್ಲಿ ಗೌಳೀ ಪತನ ಫಲಂ ಎಂದು ಒಂದು ಕಾಲಂ ಇದೆ .ಹಳ್ಳಿ ಬಿದ್ದುದರ ಬಗ್ಗೆ .ನಮ್ಮ ಶರೀರದ ಯಾವ ಭಾಗದಲ್ಲಿ ಬಿದ್ದರೆ (ನಮಗೆ ,ಹಲ್ಲಿಗೆ ಅಲ್ಲ )ಏನು ಸೂಚನೆ ?ನಡು ತಲೆಗೆ ಬಿದ್ದರೆ ಮೃತ್ಯು ,ಬಲ ಭುಜಕ್ಕೆ ಬಿದ್ದರೆ ಜಯ ಮತ್ತು ಸುಖ ಇದೆ .ಗಂಡಸರಿಗೆ ಬೇರೆ ಹೆಂಗಸರಿಗೆ ಬೇರೆ . ಒಂದು ವೇಳೆ ತಲೆಗೆ ಬಿದ್ದು ಭುಜಕ್ಕೆ ತಾಗಿ ಕೆಳಗೆ ಬಿದ್ದರೆ?ಬಾಲ್ಯದಲ್ಲಿ ಹಾವು ಬಾರಿ ಹಲ್ಲಿ ಮೈಮೇಲೆ ಬಿದ್ದಾಗ ಹೆದರಿ ಪಂಚಾಂಗ ಓದಿ ಸಮಾಧಾನ ಪಟ್ಟುದೋ ಅಥವಾ ಭಯ ಪಟ್ಟು ದೇವರಿಗೆ ನಮಸ್ಕಾರ ಮಾಡಿದ್ದೂ ಇದೆ .
ವೈಜಯಂತಿ ಪಂಚಾಂಗ ದಲ್ಲಿ ನಾನು ಮೆಚ್ಚಿದ್ದು ಇತ್ತೀಚೆಗಿನ ವಾಸ್ತು ಗೀಳನ್ನು ಅವರು ವಿಮರ್ಶಿದ್ದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ