ಸಜ್ಜನಿಕೆಯ ಸಾಕಾರ ಮೂರ್ತಿ ಡಾ ಯೇತಡ್ಕ ಸುಬ್ರಾಯ ಭಟ್
ಕಳೆದ ಕೆಲವು ದಿನಗಳಿಂದ ನಾನು ಉಕ್ಕಿನಡ್ಕ ಪೆರ್ಲ ಬಡಿಯಡ್ಕ ಸುತ್ತಿ ಯೇತಡ್ಕದಲ್ಲಿ ನಿಂತಿದ್ದೆ . ಯೇತಡ್ಕ ಎಂದೊಡನೆ ಕಣ್ಮುಂದೆ ಬರುವುದು ಸಜ್ಜನಿಕೆಯ ಸಾಕಾರ ಮೂರ್ತಿ ಡಾ ಸುಬ್ರಾಯ ಭಟ್ ಅವರ ಚಿತ್ರ . ಇವರು ಪುತ್ತೂರಿನ ಅತ್ಯಂತ ಹಿರಿಯ ಪ್ರಸೂತಿ ತಜ್ನರು . ಪುತ್ತೂರು ಆಸು ಪಾಸಿನಲ್ಲಿ ಇವರನ್ನು ಅರಿಯದವರು ಕಡಿಮೆ .ಹಸುಳೆ ನಗು ,ಮೃದುವಚನ ಇವರ ಟ್ರೇಡ್ ಮಾರ್ಕ್ .ಗೈನಕೋಲೊಜಿಸ್ಟ್ ಗೆ ಅವಶ್ಯವಾದ ತಾಳ್ಮೆ ಇವರಲ್ಲಿ ಅಪಾರ .
ಸುಬ್ರಾಯ ಭಟ್ ಹುಟ್ಟಿದ್ದು ಕಾಸರಗೋಡು ತಾಲೂಕು ಯೇತಡ್ಕ ದಲ್ಲಿ ,ಪ್ರಾಥಮಿಕ ವಿದ್ಯಾಭ್ಯಾಸ ಅಲ್ಲಿಯೇ .ಪ್ರೌಡ ಶಾಲೆಗೆ ಪೆರ್ಲ ಸತ್ಯ ನಾರಾಯಣ ಹೈ ಸ್ಕೂಲ್ . ಪೆರ್ಲ ಸಮೀಪ ಸರ್ಪ ಮೂಲೆಯಲ್ಲಿನ ಮಾವ ನರಸಿಂಹ ಭಟ್ (ಇವರು ಸತ್ಯ ನಾರಾಯಣ ಹೈ ಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷ ರಾಗಿ ಇದ್ದವರು )ಅವರ ಮನೆಯಿಂದ ನೆಡೆದು ಶಾಲೆಗೆ ಹೋಗುತ್ತಿದ್ದರು . ಹಿಂದೆಯೇ ವಿವರಿಸಿದಂತೆ ಅಗೆಲ್ಲ ನೆಂಟರ ಮನೆಯಿಂದ ಶಾಲೆಗೆ ಹೋಗುತ್ತಿದ್ದುದು ಸಾಮಾನ್ಯ .
ಮುಂದೆ ಕೆ ಎಂ ಸಿ ಮಣಿಪಾಲ ದಿಂದ ಎಂ ಬಿ ಬಿ ಎಸ್ ಪದವಿ .ಕೂಡಲೇ ಕರ್ನಾಟಕ ಸರಕಾರಿ ಸೇವೆಗೆ ಸೇರಿದ ಇವರು ಕೆಲವು ವರ್ಷಗಳ ನಂತರ ಸ್ನಾತಕೋತ್ತರ ಪದವಿ ಪಡೆದರು . ಸರಕಾರಿ ಸೇವೆಯಲ್ಲಿ ಬೈಂದೂರು ,ಮಂಗಳೂರು ಮತ್ತು ಪುತ್ತೂರು ಆಸ್ಪತ್ರೆಗಳಲ್ಲಿ ಸೇವೆ .ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಮೇಲೆ ಸ್ಥಳೀಯ ಆದರ್ಶ ಆಸ್ಪತ್ರೆಯಲ್ಲಿ ತಜ್ನರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಸರಕಾರಿ ಮತ್ತು ಖಾಸಗಿ ಎರಡು ರಂಗಗಳಲ್ಲಿಯೂ ಪ್ರಾಮಾಣಿಕ ನಗುಮೊಗದ ಸೇವೆ ಇವರನ್ನು ಅತ್ಯಂತ ಜನಪ್ರಿಯ ರಾಗಿ ಮಾಡಿದೆ .
ಇವರ ಪುತ್ರ ರಾಮ ಗಿರೀಶ್ ಪುತ್ತೂರು ಮತ್ತು ಮಂಗಳೂರಿನಲ್ಲಿ ಕಂಪ್ಯೂಟರ್ ಹಾರ್ಡ್ ವೇರ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರೆ ,ಇನ್ನೋರ್ವ ಡಾ ಮಹೇಶ್ ತಜ್ನ ದಂತ ವೈದ್ಯರು .
ಇಳಿ ವಯಸ್ಸಿನಲ್ಲಿಯೂ ತಮ್ಮ ಶಕ್ತಿಗೆ ಮೀರಿ (ಅತಿಶಯೋಕ್ತಿ ಅಲ್ಲ )ರೋಗಿಗಗಳ ಸೇವೆ ಮಾಡುವ ಇವರು ನಮ್ಮಂತಹ ಎಳೆಯರಿಗೆ ಸ್ಪೂರ್ತಿ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ