ಎಂ ವೆಂಕಟ ರಾವ್ ನಿತ್ಯಾನಂದ ಗ್ರಂಥಾಲಯ ಮಂಗಳೂರು
ಯಕ್ಷಗಾನ - ಅಂಗದ ಸಂಧಾನ ( ದಿ. ಕುಂಬಳೆ ಪಾರ್ಥಿ ಸುಬ್ಬ ವಿರಚಿತ ) . 1967 ಪ್ರಕಾಶಕರು : ಯಂ , ವೆಂಕಟ ರಾವ್ , - ಶ್ರೀ ನಿತ್ಯಾನಂದ ಗ್ರಂಥಾಲಯ , ಶ್ರೀಮದ್ರಾಮಾಯಣದೊಳಗಣ ಯ ಕೃ ಗಾ ನ ೦ ಗ ದ ಸ ೦ ಧಾ ನ ( ದಿ. ಕುಂಬಳೆ ಪಾರ್ಥಿ ಸುಬ್ಬ ವಿರಚಿತ) ಹೊಸ ಮುದ್ರಣ 1967 ಪ್ರಕಾಶಕರು: ಯಂ , ವೆಂಕಟ ರಾವ್ , ಶ್ರೀ ನಿತ್ಯಾನಂದ ಗ್ರಂಥಾಲಯ, ಹಂಪನಕಟ್ಟೆ , ಮಂಗಳೂರು- ೧. ಹಂಪನಕಟ್ಟೆ : : ಮಂಗಳೂರು- ೧. ನಲವತ್ತು ಪೈಸೆ. ಬೆಲೆ: 40ಪೈಸೆ.
ಕೆಲವು ವರ್ಷಗಳ ಹಿಂದೆ ಕಾಸರಗೋಡಿನ ಆಸ್ಪತ್ರೆಯೊಂದರಲ್ಲಿ ಹಿರಿಯರೊಬ್ಬರು ನನ್ನ ಬಳಿಗೆ ಆರೋಗ್ಯ ಸಲಹೆಗೆ ಬಂದರು .ಅವರನ್ನು ಎಲ್ಲಿಯೋ ನೋಡಿದ ನೆನಪು . ಆಲೋಚಿಸಿದಾಗ ತಿಳಿಯಿತು .ಅವರು ಮಂಗಳೂರು ಬಸ್ ಸ್ಟಾಂಡ್ ನ ನಿತ್ಯಾನಂದ ಗ್ರಂಥಾಲಯದ ಎಂ (ಮಾನ್ಯ )ವೆಂಕಟ ರಾಯರು ಎಂದು .ವೃದ್ದಾಪ್ಯ ಹಾಗೂ ಆರೋಗ್ಯ ಸಮಸ್ಯೆಗಳಿಂದ ಕುಗ್ಗಿ ಹೋಗಿದ್ದರು .
ಮಂಗಳೂರಿನಲ್ಲಿ ಎರಡು ವೆಂಕಟ ರಾಯರು ಪ್ರಸಿದ್ದರು ಒಬ್ಬರು ಸರ್ಜನ್ ಆಗಿ ದಂತ ಕತೆಯಾಗಿದ್ದವರು.ಇನ್ನೊಬ್ಬರು ಇವರು .ಹಂಪನ ಕಟ್ಟೆಯ ಹಳೆಯ ಬಸ್ ಸ್ಟಾಂಡ್ ನಲ್ಲಿ ಗೋಡೆ ಬದಿಗೆ ಆತು ಕೊಂಡು ಇವರ ಪುಸ್ತಕಗಳು ;ಎದುರು ಗಡೆ ದಿನ ಪತ್ರಿಕೆ ,ನಿಯತ ಕಾಲಿಕೆಗಳು. ಮಂಗಳೂರು ನಗರಕ್ಕೆ ಮುಖ್ಯ ಪತ್ರಿಕಾ ವಿತರಕರೂ ಆಗಿದ್ದರು .ಇವರು ಜನ ಪ್ರಿಯ ಪ್ರಕಾಶಕರೂ ಆಗಿದ್ದು ಇವರ ಯಕ್ಷಗಾನ ಪ್ರಸಂಗ ,ಭಜನೆ ,ಸ್ತೋತ್ರ ಪುಸ್ತಕಗಳು ಬಹಳ ಬೇಡಿಕೆ ಹೊಂದಿದ್ದವು . ಆರು ದಶಕಗಳ ಕಾಲ ಒಂದು ಸರಿಯಾದ ಅಂಗಡಿಯೂ ಇಲ್ಲದೆ ಸರಸ್ವತಿ ಸೇವೆ ಸಲ್ಲಿಸಿದವರು .2010ನೇ ಇಸವಿ ಏಪ್ರಿಲ್ 14ರಂದು ತಮ್ಮ ಮಾನ್ಯದ ನಿತ್ಯಾನಂದ ನಿಲಯದಲ್ಲಿ ತಮ್ಮ 83 ನೇ ವಯಸ್ಸಿನಲ್ಲಿ ತೀರಿಕೊಂಡರು .
ಯಕ್ಷಗಾನ ಪ್ರೇಮಿ ಆಗಿದ್ದ ಇವರು ತಮ್ಮ ಹುಟ್ಟೂರಾದ ಮಾನ್ಯದಲ್ಲಿ (ಕಾಸರಗೋಡು ತಾಲೂಕು ) ಸೇವೆ ರೂಪದ ಯಕ್ಷಗಾನ ಬಯಲಾಟ ನಿಯತವಾಗಿ ಆಡಿಸುತ್ತಿದರು . ಶ್ಯಾಮ ವರ್ಣ ,ಕಾಲರ್ ಹಿಂದೆ ಒಂದು ಕರ ವಸ್ತ್ರ ,ಯಾವತ್ತೂ ಚಟುವಟಿಕೆಯಲ್ಲಿ ಇವರ ಚಿತ್ರಣ ಹಳಬರಿಗೆ ನೆನಪಿರುತ್ತದೆ .ನನಗಂತೂ ಸಂಗೀತ ಪಠ್ಯಗಳೂ ಸೇರಿ ಬೇರೆ ಕಡೆ ಲಭ್ಯವಿರದ ಅಮೂಲ್ಯ ಪುಸ್ತಕಗಳು ಅವರಲ್ಲಿ ಸಿಕ್ಕಿವೆ . ತುಳು ಮತ್ತು ಕನ್ನಡ ಭಾಷೆಗೆ ಅವರು ಸಲ್ಲಿಸಿದ ಸೇವೆಗೆ ಸರಿಯಾದ ಮನ್ನಣೆ ಸಿಕ್ಕಿಲ್ಲವೆಂದು ನನ್ನ ಭಾವನೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ