ಸಾಮಜ ವರ ಗಮನಾ
ಇದು ತ್ಯಾಗರಾಜರ ಜನಪ್ರಿಯ ರಚನೆ . ಹಿಂದೋಳ ರಾಗದಲ್ಲಿ ಹಾಡುತ್ತಾರೆ .ಹಲವು ಚಲನ ಚಿತ್ರಗಳಲ್ಲಿಯೂ ಇದನ್ನು ಅಳವಡಿಸಿದ್ದು ಇದು ಒಂದು ಪ್ರೇಮ ಗೀತೆಯೇ ಎಂದು ಕೆಲವರು ತಿಳಿದುಕೊಂಡಿರ ಬಹುದು .
ಇದರ ಭಾವಾರ್ಥ ಹೀಗಿದೆ
ಗಜ ಗಮನ ದೇವಾ (ಆನೆಯ ನಡೆಯ ದೇವನೇ ) ----ಪಲ್ಲವಿ
ಸಾಧು ಸರಸಿಜ ಹೃದಯ ಕಾವಾ (ಸಾಧುಗಳ ಹೃದಯ ಕಮಲ ಕಾವನೇ )
ಕಾಲಾತೀತ ನಿನ್ನ ಖ್ಯಾತಿ .
ಸಾಮ ವೇದದಿ ಸಂಗೀತಾಮೃತವಂ ಕೊಡುವ
ಗುಣ ಶೀಲ ,ದಯಾಳು ನಮ್ಮ ಕಾವ . -----------ಅನು ಪಲ್ಲವಿ
ವೇದ ಶಿರೋಮಣಿ ,ಸಪ್ತ ಸ್ವರ ಉದಿಪ ನಾದ ಶಿಖರ ದೀಪ
ಕರದಲಿ ಮೋಹನ ಮುರಳೀಧರ ಯದುಕುಲ ಪ್ರಸೂತ
ತ್ಯಾಗರಾಜ ವಂದಿತ . -------- ಚರಣ
ಮಹಾರಾಜ ಪುರಂ ಸಂತಾನಂ ಅವರು ಹಾಡಿದ ಈ ಕೀರ್ತನೆ ಕೇಳಲು ಕೆಳಗಿನ ಲಿಂಕ್ ಒತ್ತಿರಿ
https://youtu.be/CohNqYjOXqc
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ