ಬೆಂಬಲಿಗರು

ಶುಕ್ರವಾರ, ಡಿಸೆಂಬರ್ 24, 2021

English ಯಕ್ಷಗಾನ ಮತ್ತು ಪಿ ವಿ ಐತಾಳ ಕುಟುಂಬದ ಕೊಡುಗೆ

                                    


೧೯೭೩ ನೇ ಇಸವಿ ಇರಬೇಕು . ಮಂಗಳೂರು ಕೊಡಿಯಾಲ ಬೈಲಿನ ಕರ್ನಾಟಕ  ಬ್ಯಾಂಕ್ ಹಾಲ್ ನಲ್ಲಿ ಒಂದು ಅಪೂರ್ವ ಕಾರ್ಯಕ್ರಮಕ್ಕೆ ಹೋಗಿದ್ದೆ .ಎಂದು ಇಂಗ್ಲಿಷ್ ತಾಳಮದ್ದಳೆ . ಪ್ರಸಂಗ ನೆನಪಿಲ್ಲ .ಎಲ್ ಐ ಸಿ ಅನಂತ ರಾಮ ರಾವ್ ಮತ್ತು ಪ್ರಭಾಕರ ಜೋಶಿ ಮುಖ್ಯ ಅರ್ಥ ದಾರಿಗಳು .ಭಾಗವತರು ಕನ್ನಡದಲ್ಲಿಯೇ ಪದ ಹೇಳುವರು ;ಅರ್ಥ ದಾರಿಗಳು ಮಾತ್ರ ಇಂಗ್ಲಿಷ್ ನಲ್ಲಿ ಸಂಭಾಷಣೆ . ಕಮ್ ಆನ್ ಭೀಮ ಸೇನಾ  ಲೆಟ್ ಅಸ್ ಫೈಟ್ ಇತ್ಯಾದಿ ಇರಬೇಕು . ಕನ್ನಡ ಭಾಷೆ ಬಾರದವರಿಗೆ ತಾಳಮದ್ದಳೆ ಪರಿಚಯಿಸುವ ಒಳ್ಳೆಯ ಪ್ರಯತ್ನ .ಶಿವರಾಮ ಕಾರಂತರು ಸಂಭಾಷಣೆ ಇಲ್ಲದೆಯೇ ಅಭಿನಯದಿಂದ ಅರ್ಥ ಸೂಚಿಸುವ ಬ್ಯಾಲೆ ಮಾಡಿದ್ದರು .ಆದರೆ ಯಕ್ಷಗಾನದಲ್ಲಿ ಸಂಭಾಷಣೆ ಒಂದು ಕಲೆ ; ಒಂದು ವಿಚಾರಕ್ಕೆ ಹಲವು ಮಗ್ಗುಲುಗಳನ್ನು ತೋರ ಬಲ್ಲ ಸಂಹವನ ಅಲ್ಲದೆ ಪಾಮರರಿಗೆ ಕಲೆಯನ್ನು ಹತ್ತಿರ ಒಯ್ಯಲು ಸಾಧನ . 

ಸುರತ್ಕಲ್ ಕ್ಷೇತ್ರದ ಮಾಜಿ ಶಾಸಕ ಶ್ರೀ ಪಿ ಐತಾಳ್ ಇಂಗ್ಲಿಷ್ ಯಕ್ಷಗಾನದ ಸಾಹಸ ಕ್ಕೆ ಕೈ ಹಾಕಿ ಶ್ರದ್ದೆಯಿಂದ ಬೆಳೆಸಿದವರು .ಅವರ ಮಕ್ಕಳಾದ ಡಾ ಸತ್ಯ ಮೂರ್ತಿ ಐತಾಳ ಮತ್ತು ಸಂತೋಷ ಐತಾಳ ಮತ್ತು ಕುಟುಂಬದವರು ಅದನ್ನು ಮುಂದುವರಿಸಿಕೊಂಡು ಬರುತ್ತಿರುವುದು ಸಂತೋಷ .. ಇವರ ತಂಡದವರು ಶಾಸ್ತ್ರೀಯ ವಾದ  ನಟನೆ ಕಲಿತು ಕುಣಿತ  ,ಸಂಭಾಷಣೆ ಮಾತ್ರ ಇಂಗ್ಲಿಷ್ ನಲ್ಲಿ , ಸ್ವಲ್ಪ ಗ್ರಾಂಥಿಕ ಇಂಗ್ಲಿಷ್ ಆದುದರಿಂದ  ಅಭಾಸ ಎನಿಸುವುದಿಲ್ಲ . ಉದಾ
I am Tarakasura, the indomitable emperor of Rakshasas at Shonikapura..The kind and merciful Lord Bramhadeva manifested before me and granted me a boon to the effect that I have no death except from the offspring of Lord Shankara.. HA HA HA.”

 ಅಖಿಲ ಭಾರತೀಯ ಸಮ್ಮೇಳನ ಗಳಲ್ಲಿ ಇವರ ತಂಡ ತಮ್ಮ ಕಾರ್ಯಕ್ರಮ ಪ್ರದರ್ಶಿಸಿ ಮೆಚ್ಚಿಗೆ ಗಳಿಸಿದೆ . ಡಾ ಸತ್ಯಮೂರ್ತಿ ಐತಾಳರು ಶಸ್ತ್ರ ಚಿಕಿತ್ಸಾ ತಜ್ಞರು ಮತ್ತು ಮೆಡಿಕಲ್ ಕಾಲೇಜು ಪ್ರಾಧ್ಯಾಪಕರು ,ನನ್ನ ಸನ್ಮಿತ್ರರು . ಅವರ ಭಾವ ಚಿತ್ರ ಮತ್ತು ಯಕ್ಷಗಾನ ವೇಷದ ಚಿತ್ರ ಇದರೊಂದಿಗೆ ಕೊಟ್ಟಿದ್ದೇನೆ .. 

ಪೂರ್ಣ ಇಂಗ್ಲಿಷ್ ಯಕ್ಷಗಾನ "ಗದಾ ಯುದ್ದ "ಪ್ರಸಂಗ ನೋಡಲು ಕೆಳಗಿನ ಲಿಂಕ್ ಬಳಸಿರಿ

 https://youtu.be/tW_jSHLjh7k

 

1 ಕಾಮೆಂಟ್‌:

  1. ಡಾಕ್ಟರ್ ಪಿ.ಎಸ್ ಐತಾಳರ ಇಂಗ್ಲಿಷ್ ಯಕ್ಷಗಾನ ದ ಬಗ್ಗೆ ನಮಗೆ ತುಂಭಾ ಸಂತೋಷ ಮಾತ್ತು ಅವಿನಾಭವ ಸಂಭಂದ ಇದೆ. ಇಂಥ ಲೇಖನಗಳು ಇನ್ನಷ್ಟು ಬರಲಿ. ದೇಶ ವಿದೇಶದಲ್ಲಿ ಚಂಡೆ ನಾದ ಜೇಂಕರಿಸಲಿ. ಕನ್ನಡ, ತುಳು, ಇಂಗ್ಲಿಷ್,ಭಾಷೆ ಯಲ್ಲಿ ತಮ್ಮ ಉತ್ತಮ ಪ್ರದರ್ಶನ ನೀಡಿದ ಡಾಕ್ಟರ್ ಸತ್ಯಮೂರ್ತಿ ಐತಾಳ್ರವರು ಯಕ್ಷಗಾನ ರಂಗದಿಂದ ಮತ್ತು ವೃತ್ತಿ ರಂಗದಲ್ಲಿ ಜನಪದರಿಂದ ಗಳಿಸಿದ ಸೇವಾ ಕೀರ್ತಿ ಕಿರೀಟಕೊಂಡು ಹೊನ್ನಗರಿ. ವೃತಿ ಪ್ರವುತ್ತಿಗಳೆರಡು ಹಿರಿಮೆ ಗರಿಮೆ ತರಲಿ. ಇತಿ ನಿಮ್ಮ ಅಣ್ಣಯ್ಯ

    ಪ್ರತ್ಯುತ್ತರಅಳಿಸಿ