ಚಳಿಗಾಲ ತಡವಾಗಿ ಬಂದಿದೆ . ನಮ್ಮ ಊರಿನಲ್ಲಿ ಅರೋಗ್ಯ ಕರ ದಿನಗಳು ಎನ್ನ ಬಹುದು . ಇದಕ್ಕೆ ಅಪವಾದ ಎಂಬಂತೆ ಕೆಮ್ಮು ದಮ್ಮು ಕಾಯಿಲೆಗಳು ,ಜತೆಗೆ ಮದ್ಯಪಾನ ಸಂಬಂದಿ ರೋಗಗಳು ಮಾತ್ರ ಸ್ವಲ್ಪ ಹೆಚ್ಚು .
ಮದ್ಯಪಾನ ಅತಿಯಾದರೆ ಆರೋಗ್ಯಕ್ಕೆ ಹಾನಿಕರ . ಒಂದು ಸಮಸ್ಯೆ ಇದೆ ,ಒಬ್ಬನ ಮಿತಿಯೂ ಇನ್ನೊಬ್ಬನಿಗೆ ಅತಿ ಆಗಬಹದು .
ಆಲ್ಕೋಹಾಲ್ ತಲೆಯಿಂದ ಕಾಲಿನ ವರೆಗೆ ಎಲ್ಲಾ ಅಂಗಗಳ ಮೇಲೆ ಪರಿಣಾಮ ಬೀರ ಬಲ್ಲುದು . ಹಲವು ವರ್ಷ ಮದ್ಯ ಪಾನ ಮಾಡುತ್ತ ಇದ್ದವರು ಅದರ ಮೇಲೆ ಮಾನಸಿಕ ಮತ್ತು ಶಾರೀರಿಕವಾಗಿ ಅವಲಂಬಿತ ವಾಗುವುದು ಕೂಡಾ ಕಾಯಿಲೆ ಎಂದು ಪರಿಗಣಿಸಲ್ಪಡುತ್ತದೆ .(Alcohol Dependence).
ಇಂತಹವರು ಏಕಾ ಏಕಿ ಮದ್ಯ ಸೇವನೆ ನಿಲ್ಲಿಸಿದರೆ (ಅಥವಾ ಸೇವಿಸಲು ಸಿಗದಿದ್ದರೆ )ಕೈ ಕಾಲು ನಡುಗುವುದು ,ನಿದ್ದೆ ಬರದು ,ಯಾರ್ಯಾರೋ ಆಕ್ರಮಣ ಮಾಡಲು ,ಕೊಲ್ಲಲು ಬಂದಂತೆ ಕಾಣುವುದು ,ಕೆಲವೊಮ್ಮೆ ಅಪಸ್ಮಾರ ಬರುವುದು . ಇಂತಹವರಿಗೆ ಮದ್ಯಪಾನ ಹುಲಿಯ ಮೇಲಿನ ಸವಾರಿಯಂತೆ . ಅವರಿಗೆ ಮದ್ಯ ವರ್ಜನೆಗೆ ಸಹಾಯ ಮಾಡಲು ವೈಜ್ಞಾನಿಕ ಮಾರ್ಗಗ ಳು ಇವೆ .
ಇನ್ನು ಎಲ್ಲರೂ ಬಲ್ಲಂತೆ ಮದ್ಯವು ವಿಶೇಷ ಹಾನಿ ಮಾಡುವದು ಲಿವರ್ ಗೆ .ಲಿವರ್ ನಮ್ಮ ಶರೀರದ ಮುಖ್ಯ ಕಾರ್ಯಾಂಗ ಮತ್ತು ಗೋದಾಮು .. ಇಲ್ಲಿಯೇ ಹಲವು ವಿಷಗಳ ನಿಷ್ಕ್ರಿಯ ಗೊಳಿಸುವಿಕೆ ಕೂಡಾ . ದೇಹಕ್ಕೆ ಬೇಕಾದ ಗ್ಲುಕೋಸ್ ,ಸಸಾರ ಜನಕ , ಪಿತ್ತರಸ ,ರಕ್ತ ಹೆಪ್ಪುಗಟ್ಟಿಸುವ ವಸ್ತುಗಳ ಉತ್ಪಾದನೆ ,ವಿಟಮಿನ್ ಗಳ ನಿರ್ವಹಣೆ ಇಲ್ಲಾ ಮಾಡುವ ಅಂಗ .
ದೀರ್ಘಕಾಲ ಮದ್ಯ ಸೇವನೆ ಮೊದಲು ಲಿವರ್ ನಲ್ಲಿ ಕೊಬ್ಬು ಹೆಚ್ಚು ಮಾಡುವುದು .ಇದನ್ನು ಫ್ಯಾಟಿ ಲಿವರ್ ಎನ್ನುವರು .(ಇದು ಬೊಜ್ಜು ಇರುವವರಲ್ಲಿ ,ಸಕ್ಕರೆ ಕಾಯಿಲೆ ಉಳ್ಳವರಲ್ಲಿ ಕೂಡಾ ಇರುವದು .). ಮುಂದೆ ಲಿವರ್ ನ ಉರಿಯೂತ ಉಂಟು ಮಾಡಿ ಜಾಂಡೀಸ್ ಪ್ರಕಟ ಆಗ ಬಹುದು . ಇದಕ್ಕೆ ಮದ್ಯಪಾನ ನಿಲುಗಡೆ ಮತ್ತು ಉತ್ತಮ ಆಹಾರ ಸೇವನೆಯೇ ಚಿಕಿತ್ಸೆ . ಅವಗಣಿಸಿದರೆ ಮುಂದೆ ಲಿವರ್ ನ ಜೀವ ಕೋಶಗಳು ನಶಿಸಿ ,ಅದರ ಬದಲಿಗೆ ನಿಷ್ಕ್ರಿಯ ನಾರು ಬರುವದು . ಇದನ್ನೇ ಲಿವರ್ ಸಿರೋಸಿಸ್ ಎನ್ನುವರು .ಇದು ಮುಂದೆ ಲಿವರ್ ಕ್ಯಾನ್ಸರ್ ಕೂಡಾ ಆಗ ಬಹುದು .
(ಮುಂದುವರಿಯುವುದು )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ