ಮರೆಯಲಾಗದ ಹಾಡು
೧೯೭೭ ರಲ್ಲಿ ಗೊರೂರು ರಾಮಸ್ವಾಮಿ ಐಯ್ಯಂಗಾರ್ ಅವರ ಪ್ರಸಿದ್ಧ ಕೃತಿ ಹೇಮಾವತಿಯನ್ನು ಆದರಿಸಿ ಅದೇ ಹೆಸರಿನ ಚಿತ್ರ ಬಂದಿತ್ತು . ಸಿದ್ದಲಿಂಗಯ್ಯ ನಿರ್ದೇಶನದ ಈ ಚಿತ್ರದಲ್ಲಿ ಜಿ ವಿ ಐಯ್ಯರ್ ನಟಿಸಿದ್ದು ವಿಶೇಷ .
ಚಿತ್ರಕ್ಕೆ ಸಂಗೀತ ಸಂಯೋಜನೆ ಎಲ್ ವೈದ್ಯನಾಥನ್ . ಇವರು ಪ್ರಸಿದ್ಧ ವಯೊಲಿನ್ ತ್ರಿಮೂರ್ತಿ ಸಹೋದರರಾದ ಎಲ್ ಸುಬ್ರಹ್ಮಣ್ಯಂ ,ಎಲ್ ಶಂಕರ್ ಮತ್ತು ಎಲ್ ವೈದ್ಯನಾಥನ್ ಪೈಕಿ ಓರ್ವರು .
ಚಿತ್ರದಲ್ಲಿ ಚಿ ಉದಯ ಶಂಕರ್ ಬರೆದ ಶಿವ ಶಿವ ಎನ್ನದ ಎಂಬ ಹಾಡು ಇದೆ .ಕಚೇರಿ ರೂಪದಲ್ಲಿ ಚಿತ್ರೀಕರಣ .ವೈದ್ಯನಾಥನ್ ಆಭೋಗಿ ಮತ್ತು ತೋಡಿ ಯಲ್ಲಿ ಇದನ್ನು ಅಳವಡಿಸಿ ದೀರ್ಘ ನೆರವಲ್ ಇಡುವ ಯೋಜನೆ ಹಾಕಿದ್ದು ,ಗಾಯಕಿ ಎಸ ಜಾನಕಿಯವರಿಗೆ ಪಕ್ಕ ವಾದ್ಯಕ್ಕೆ ದಿಗ್ಗಜ ಪಿಟೀಲು ವಾದಕ ಎಂ ಎಸ ಗೋಪಾಲಕೃಷ್ಣನ್ ಅವರನ್ನು ಕೇಳಿದ್ದರು . ವೈದ್ಯನಾಥನ್ ಕೇಳಿಕೊಂಡ ಕಾರಣ ಎಂ ಎಸ ಜಿ ಒಪ್ಪಿಕೊಂಡಿರಬೇಕು .
ಹಾಡಿನ ಸಂಗೀತ ಹರಹು ನೋಡಿದ ಎಂ ಎಸ ಗೋಪಾಲಕೃಷ್ಣನ್ ಕೊನೆಯ ನೆರವಲ್ ಭಾಗ ಸಂಕೀರ್ಣವೂ ,ವೇಗವಾದ ತಾಳದಲ್ಲಿಯೂ ಇರುವ ಸ್ವಯಂ ಶಾಸ್ತ್ರೀಯ ಸಂಗೀತ ವಿದುಷಿ ಅಲ್ಲದ ಕಾರಣ ಎಸ್ ಜಾನಕಿಯವರಿಗೆ ಕಷ್ಟವಾದೀತು ;ಆ ಭಾಗವನ್ನು ತಾನು ಮಾತ್ರ ವಯಲಿನ್ ನಲ್ಲಿ ನುಡಿಸುವೆನು ಎಂದರಂತೆ .ಅದಕ್ಕೆ ಎಸ ಜಾನಕಿಯವರ ಪ್ರತಿಭೆಯನ್ನು ಸರಿಯಾಗಿ ಬಲ್ಲ ನಿರ್ದೇಶಕ 'ಇಲ್ಲ ಅವರು ಚೆನ್ನಾಗಿ ಹಾಡಿಯಾರು "ಎಂದು ಎಂ ಎಸ ಜಿ ವಯೊಲಿನ್ ಜತೆ ಅವರ ಹಾಡು ಯಶಸ್ವಿ ಯಾಗಿ ರೆಕಾರ್ಡ್ ಮಾಡಿದರಂತೆ . ಗೋಪಾಲಕೃಷ್ಣನ್ ಅವರು ತುಂಬಾ ಸಂತೋಷ ಪಟ್ಟು ತಲೆದೂಗಿದರಂತೆ ..
https://youtu.be/Xbo9sVrlz0k
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ