ಇದರಲ್ಲಿನ ಒಂದು ಉಲ್ಲೇಖ ; ಲೇಖಕರು ತಮ್ಮ ಹಳೆಯ ಪ್ರಬಂಧ ಗಳ ಸಂಕಲನ 'ಏಕೋನೋಮಿಸ್ತ್ಸ್ ಮಿಸೆಲೆನಿ ' ಎಂಬ ಹೆಸರಿನಿಂದ ಆಕ್ಸ್ ಫರ್ಡ್ ಯೂನಿವರ್ಸಿಟೀ ಪ್ರೆಸ್ ಪ್ರಕಟಿಸಲಿದ್ದು ,ಅದರಲ್ಲಿ ತಾವು ಡಾ ಮನ ಮೋಹನ್ ಸಿಂಗ್ ಅವರನ್ನು ಮೊದಲು ಭೇಟಿಯಾದ ಬಗ್ಗೆ (ಸಿಂಗ್ ರಾಜ ಕಾರಣಕ್ಕೆ ಬರುವ ಮೊದಲು ),ಮತ್ತು ಅದರಲ್ಲಿ ಅವರ ವಿನಯ ಮತ್ತು ಸರಳತೆಯ ಬಗ್ಗೆ ಉಲ್ಲೇಖ ಇತ್ತು .ತಾವು ಸದ್ಯ ಸರಕಾರದ ಸೇವೆಯಲ್ಲಿ ಇರುವ ಕಾರಣ ಪ್ರಧಾನ ಮಂತ್ರಿಯ ಕಚೇರಿಗೆ ಆ ಲೇಖನ ಸೇರಿಸಲು ,(ಕಾನೂನು ಪ್ರಕಾರ ಅವಶ್ಯಕತೆ ಇಲ್ಲದಿದ್ದರೂ )ಅನುಮತಿ ಕೇಳಿ ಪತ್ರ ಬರೆದಿದ್ದುದಾಗಿಯೂ ,ಕೆಲ ದಿನಗಳ ನಂತರ ಪ್ರಧಾನಿಯವರ ಕಾರ್ಯದರ್ಶಿ ಫೋನ್ ಮಾಡಿ ಅದನ್ನು ಸೇರಿಸದಿರಲು ಸಲಹೆ ಮಾಡಿದುದಾಗಿ ಬರೆಯುತ್ತಾರೆ . ಯಾವುದೇ ರಾಜಕಾರಿಣಿ ತನ್ನನ್ನು ಹೊಗಳಿಸಿ ಕೊಳ್ಳುವ ಅವಕಾಶ ಬಿಡುವುದುಂಟೇ ?ಎಂದು ಆಶ್ಚರ್ಯ ಪಡುವ ಸರದಿ ಲೇಖಕರದ್ದು .
ಇನ್ನೊಂದು ಪ್ರಸಂಗ .ಅಮಾರ್ತ್ಯ ಸೇನ್ ಒಂದು ಸಭೆಯಲ್ಲಿ ಮನಮೋಹನ್ ಸಿಂಗ್ ಮಯನ್ಮಾರ್ ಸೈನ್ಯ ಆಡಳಿತ ಬಗ್ಗೆ ಕಠಿಣ ನಿಲುವು ತೆಗೆದು ಕೊಳ್ಳದ ಬಗ್ಗೆ ಅವರ ಸನ್ಮುಖದಲ್ಲಿಯೇ ಟೀಕಿಸುತ್ತಾರೆ .ಆದರೆ ಸಿಂಗ್ ಅವರ ದೊಡ್ಡ ಗುಣ ಟೀಕೆ ಮತ್ತು ಹೊಗಳಿಕೆಗಳನ್ನು ಕ್ರೀಡಾ ಮನೋಭಾವ ದಿಂದ ಸಮವಾಗಿ ಸ್ವೀಕರಿಸುವುದು ಎಂದು ಬರೆದಿದ್ದಾರೆ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ