ನಾನು ಚೆನ್ನೈ ರೈಲ್ವೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಸಮಯ .ನಮ್ಮ ಊರಿನವರು ಒಬ್ಬರು ಶ್ರೀ ನಾರಾಯಣ ಭಟ್ ಎಂಬ ಸಜ್ಜನ ಮೆದುಳಿನ ಗಡ್ಡೆಯ ಚಿಕಿತ್ಸೆಗಾಗಿ ಅಡ್ಮಿಟ್ ಆಗಿದ್ದರು .ಅವರಿಗೆ ಶಸ್ತ್ರ ಚಿಕಿತ್ಸೆ ಆಗಿ ಹಲವು ದಿನ ಆಸ್ಪತೆಯಲ್ಲಿಯೇ ಇದ್ದರು .ಅವರ ಜತೆ ಅವರ ಪತ್ನಿ ,ಮಗ ಮತ್ತು ಕೆಲವು ಹಿತೈಷಿಗಳು ಉಪಚಾರಕ್ಕೆ ನಿಲ್ಲುತ್ತಿದ್ದರು .
ಒಂದು ದಿನ ಓರ್ವ ಹಿರಿಯರು ಹೀಗೆ ಅವರಿಗೆ ಸಹಾಯಕ್ಕೆ ಬಂದವರ ಪರಿಚಯ ಆಯಿತು .ಅವರು ಚೆನ್ನೈ ನ ಪ್ರಸಿದ್ಧ ಪ್ರೆಸಿಡೆನ್ಸಿ ಕಾಲೇಜಿನ ಸಂಸ್ಕೃತ ವಿಭಾಗದ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥರು .ವಿಶ್ವ ವಿದ್ಯಾಲಯದಲ್ಲಿ ಅವರಿಗೆ ಒಳ್ಳೆಯ ಹೆಸರು ಇದ್ದು ,ಸೆನೆಟ್ ಸದಸ್ಯರೂ ಆಗಿದ್ದರು ಎಂದು ನೆನಪು . ಅವರು ಆಸ್ಪತ್ರೆಯ ಜನರಲ್ ವಾರ್ಡ್ ನಲ್ಲಿ ನೆಲದಲ್ಲಿ ಶೀಟ್ ಹಾಕಿ ಕೊಂಡು ಮಲಗಿ ರೋಗಿಯ ಉಪಚಾರ ಮಾಡಿ ,ಮೆನೆಯವರಿಗೆ ಸ್ವಲ್ಪ ವಿಶ್ರಾಂತಿ ಕೊಡುವರು . ಸ್ವಯಂ ಹಿರಿಯ ಪ್ರಾಧ್ಯಾಪಕರು ,;ರೋಗಿ ತನ್ನ ಮನೆಯವರೋ ಅಲ್ಲ . ಪರಿಚಯದವರು ,ಊರಿನವರು ತಮ್ಮಿಂದಾದ ಸಹಾಯ ಮಾಡುವಾ ಎಂದು ಬಂದವರು .
ಹೀಗೆ ಪರಿಚಯವಾಗಿ ಅವರ ಮನೆಗೆ ಭೇಟಿ ನೀಡಿ ಆತಿಥ್ಯ ಸ್ವೀಕರಿಸುವ ಅವಕಾಶವೂ ಸಿಕ್ಕಿತ್ತು .ಚೆನ್ನೈ ಕನ್ನಡ ವಲಯದಲ್ಲಿ ಅವರಿಗೆ ತುಂಬಾ ಗೌರವ ಸ್ಥಾನ ಇತ್ತು .ನಿವೃತ್ತರಾದ ಬಳಿಕ ಊರಿಗೆ ಮರಳಿ ಕೃಷಿ ಮತ್ತು ಸಂಸ್ಕೃತ ಭಾಷಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು ಒಂದು ವರ್ಷದ ಹಿಂದೆ ತೀರಿ ಕೊಂಡರು.
ಹಿರಿಯ ಚೇತನಕ್ಕೆ ನಮನ .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ