ಮಂಜು ,ಹಿಮ ಮತ್ತು ಇಬ್ಬನಿ
ಈಗ ಚಳಿಗಾಲ . ವಾತಾವರಣದಲ್ಲಿ ಉಷ್ಣತೆ ಕಡಿಮೆ ಆಗಿ ಮೇಲೆ ಇರುವ ನೀರಾವಿ ಸಾಂದ್ರ ಗೊಂಡು ಇಳೆಗೆ ಇಳಿಯುವುದು .ಇವುಗಳ ನಾಮಕರಣ ದ ಬಗ್ಗೆ ಕೆಲವರಲ್ಲಿ ಗೊಂದಲ ಇದ್ದು ಅದರ ನಿವಾರಣೆಗೆ ಈ ಲೇಖನ .
ಮಂಜು
ಇವು ನೀರ ಹನಿಗಳಾಗಿ ಮೋಡ ಮುಸುಕಿದ ತರಹ ಇದ್ದರೆ ಮಂಜು ಎನ್ನುತ್ತೇವೆ . ತಮ್ಮೊಡನೆ ವಾತಾವರಣದ ಧೂಳು ಕಲ್ಮಶಗಳನ್ನೂ ಒಳಗೊಂಡು ಇರುವ ಕಾರಣ ಅಲರ್ಜಿ ಉಂಟು ಮಾಡ ಬಲ್ಲವು . ತಲೆಗೆ ಟೊಪ್ಪಿ ಶಾಲು ಹಾಕಿದರೆ ಇದನ್ನು ತಡೆಗಟ್ಟಲು ಅಸಾಧ್ಯ . ಹೊರ ಹೋಗುವಾಗ ಸಾಮಾನ್ಯ ಮಾಸ್ಕ್ ಹಾಕಿಕೊಂಡರೆ ಸಾಕು . ಚಳಿಗಾಲದಲ್ಲಿ ನಮ್ಮ ಚರ್ಮದಂತೆ ,ಶ್ವಾಸ ನಾಳದ ಒಳಮೈ ಒಣಗಿದ್ದು ,ಯಾವತ್ತೂ ಅದರ ಮೇಲಿರುವ ರಕ್ಷಣಾತ್ಮಕ ಆರ್ದ್ರತೆ ಯೂ ಕಡಿಮೆ ಇರುವುದು ಕೆಮ್ಮು ದಮ್ಮು ಆರಂಭಕ್ಕೆ ಕಾರಣ .
ಹಿಮ
ಗಗನದಲ್ಲಿ ಮೋಡದೊಳಗಣ ಅವಿ ತಂಪಾಗಿ ಹರಳುಗಟ್ಟಿ ಭುವಿಗೆ ಧವಳ ಹಾಸು ವಾಗುವುದನ್ನು ಹಿಮ ಎನ್ನುವರು .
ಇಬ್ಬನಿ
ಸಾಂದ್ರ ಗೊಂಡ ನೀರ ಹನಿಗಳು ಹುಲ್ಲು , ಮರ ಗಿಡಗಳ ಎಲೆಗಳು ,ಜೇಡರ ಬಲೆ ,ಮನೆಯ ಮಾಡು ಇತ್ಯಾದಿಗಳ ಮೇಲೆ ಸಲಿಲ ಬಿಂದುಗಳಾಗಿ ,ಇಬ್ಬನಿ ಎಂದು ಕರೆಯಲ್ಪಡುತ್ತವೆ . ತೋಟಕ್ಕೆ ಹೋದಾಗ ಗಾಳಿ ಬೀಸಿದೊಡನೆ ನಮ್ಮ ಮೇಲೆ ಪನ್ನೀರ ಸಿಂಚನ ಆಗುವುದು .
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ