ಬೆಂಬಲಿಗರು

ಭಾನುವಾರ, ಅಕ್ಟೋಬರ್ 4, 2020

ಬಿ ಎಂ ರೋಹಿಣಿಯವರ ಜೀವನ ಕಥನ ಮತ್ತು ಸಮೀಪದಲ್ಲಿ ಓದಿದ ಜೀವನ ಚರಿತ್ರೆಗಳು

ನಾನು ಇತ್ತೀಚೆಗೆ ಓದಿದ ಆತ್ಮ ಚರಿತ್ರೆಗಳು 

                                          

 

  ಇಂಗ್ಲೀಷ್  ಭಾಷೆಯಲ್ಲಿ  ಲಾಸ್ಟ್ ಬಟ್ ನೋಟ್ ದ ಲೀಸ್ಟ್ ಎನ್ನುವಂತೆ ಕೊನೆಗೆ ಓದಿ ಮುಗಿಸಿದ್ದು  ಬಿ ಎಂ ರೋಹಿಣಿ ಯವರ  ನಾಗಂದಿಗೆಯೊಳಗಿಂದ  ಎಂಬ  ಹೆಸರಿನ  ಆತ್ಮ ಚರಿತ್ರೆ .ಇದು ನಾನು ಬಹುವಾಗಿ ಮೆಚ್ಚಿದ ಕೃತಿ ಎಂದು ಯಾವುದೇ ಸಂಕೋಚ ಇಲ್ಲದೆ ಹೇಳುತ್ತೇನೆ .ಇವರ ಬರಹದ ಭಾಷೆ ,ತಮ್ಮನ್ನೆ ಕಾಲ ಕಾಲಕ್ಕೆ  ಮುಕ್ತ ಮನಸ್ಸಿನಿಂದ   ವಿಮರ್ಶಿಸಿ  ಕೊಂಡು  ,ತಮ್ಮ ತಂದೆಯನ್ನೂ ಸೇರಿ ಯಾವ ರೀತಿ ಒಂದು ವ್ಯಕ್ತಿಯು ಏಕ ಕಾಲಕ್ಕೆ ನಾವೆಂದುಕೊಳ್ಳುವ  ಒಳ್ಳೆಯತನ ಮತ್ತು ಕೆಟ್ಟುದನ್ನು ಒಳಗೊಂಡು ಇರುವನು ಎಂದು ಬರೆದ ರೀತಿ ಬಹಳ ಮೆಚ್ಚಿಗೆ ಆಯಿತು .

     ಸಾಮಾನ್ಯ ಕುಟುಂಬದಲ್ಲಿ ಹೆಣ್ಣು ಮಗಳಾಗಿ ಜನಿಸಿ ಕುಟುಂಬದ ಆರ್ಥಿಕ ಜವಾಬ್ದಾರಿ ತಾಯಿಯೊಡನೆ ಹೊತ್ತುಕೊಂಡೇ  ಕಲಿತು ಅಧ್ಯಾಪಿಕೆ ಆಗಿ ತನ್ನ ಕೆಲಸವನ್ನು ಪ್ರೀತಿಸಿ ,ಸಾಹಿತ್ಯ  ,ಸಮಾಜ ಸೇವೆ ,ಸಂಶೋಧನೆ ಯಲ್ಲಿ ತೊಡಗಿಸಿ ಕೊಂಡ  ಕತೆ ಎಲ್ಲರೂ ಒದ ಬೇಕು .

ಈ  ಪುಸ್ತಕದಿಂದ  ಕೆಲವು ವಾಕ್ಯಗಳನ್ನು ಉದ್ದರಿಸುತ್ತೇನೆ .

'ಸಮಾಜದೊಂದಿಗೆ ಗಟ್ಟಿಯಾದ  ಭಾಂಧವ್ಯವನ್ನು  ಬೆಳೆಸಿಕೊಂಡು ನಾನು ಕಂಡ ಸತ್ಯ ವೇನೆಂದರೆ ನಮ್ಮ  ಸುತ್ತಮುತ್ತಲೂ  ಸಮಾಜವೇ ಕಟ್ಟಿದ ಗೋಡೆಗಳನ್ನಾದರೂ  ಸುಲಭದಲ್ಲಿ  ಕೆಡವ ಬಹುದು.ಆದರೆ ,ನಮ್ಮ ಮನಸ್ಸಿನಲ್ಲಿ  ನಾವೇ ಕಟ್ಟಿಕೊಂಡ ಗೋಡೆಗಳನ್ನು ಅಲ್ಲಾಡಿಸುವುದು ಬಿಡಿ ,ಮುಟ್ಟಲಿಕ್ಕೂ ಸಾಧ್ಯವಿಲ್ಲ '

'ಸಾವಿನ್ನು ಯಾರೂ ತಪ್ಪಿಸಿ ಕೊಳ್ಳಲು ಸಾಧ್ಯವಿಲ್ಲ .ಆದರೆ ಸಾವಿನ ಭಯದಿಂದ ತಪ್ಪಿಸಿ ಕೊಳ್ಳುವವರು ವಿರಳ '

'ಬಾಲ್ಯವೆಂಬುದು ಸ್ಪಂಜಿನಂತೆ ಸಂಪರ್ಕಕ್ಕೆ ಬಂದುದೆಲ್ಲವನ್ನೂ ಹೀರಿಕೊಳ್ಳುತ್ತದೆ .ನೆನಪುಗಳೋ  ಕೊಂಕ್ರೀಟ್ ನಂತೆ ಗಟ್ಟಿಯಾಗಿ ಕೂತಿರುತ್ತವೆ '

'ಯಾಕೆಂದರೆ ಅವರ ಮುಂದೆ ನಿಂತು ಮಾತಾಡಲು ಯಾರಿಗೂ 'ಬ್ಯಾಟರಿ'ಇರಲಿಲ್ಲ '

'ವೃತ್ತಿಗೆ  ಸೇರಿದ ಆರಂಭದಲ್ಲಿ ಎಲ್ಲರಿಗೂ  ಸೋಡಾ ಬಾಟ್ಲಿ ಸ್ಪಿರಿಟ್ ಇರುತ್ತದೆ '

'ಮಕ್ಕಳು ಚಿಕ್ಕವರೆಂಬ ತಾತ್ಸಾರ ಸಲ್ಲದೆಂಬ ಪಾಠವನ್ನು ನನ್ನ ಮಕ್ಕಳೇ ನನಗೆ ಕಲಿಸಿ ಕೊಟ್ಟರು .ನಾನು ಕಲಿಸಿದ್ದಕಿಂತ  ಹೆಚ್ಚು ಅವರಿಂದ ನಾನು ಕಲಿತಿದ್ದೇನೆ .'

'ಹೇ  ಯಾರಿಗೂ ಗುರುಗಳಾಗಲು ಸಾಧ್ಯವಿಲ್ಲ ,ನಮ್ಮೊಳಗಿನ ಅಂತರಾತ್ಮಕ್ಕಿಂತ ಮಿಗಿಲಾದ ಗುರುಗಳಿಲ್ಲ .'

'ಓದು ಬರಹಗಳು ಎಲ್ಲಾ ಮನುಷ್ಯರನ್ನು ಸಹೃದಯವಂತರನ್ನಾಗಿ ಮಾಡಲು ಸಾಧ್ಯವಿಲ್ಲ ವೆಂಬುದನ್ನು ಉದಾಹರಣೆ ಸಹಿತ ವಿವರಿಸುವ ಚಿಂತನಾ ಶೈಲಿಗೆ ನಾನು ಬೆರಗಾಗಿ ಕಿವಿಯಾಗುತ್ತಿದ್ದೆ .'

'ತೀರಿಸುವ ಸಾಲವನ್ನು ಕ್ರಮೇಣ ವರ್ಷಗಳ ಬಳಿಕ ತೀರಿಸಿದೆ.ತೀರಿಸಲಾರದ ಮಮತೆಯ ಋಣಭಾರ ವನ್ನು ಈ ಜನ್ಮದಲ್ಲಂತೂ ಕೆಳಗಿಳಿಸಲಾರೆ .'

'ದೇವರನ್ನು ಸೃಷ್ಟಿಸಿದ ನಾವೇ ಅವನನ್ನು ದೇವಾಲಯದೊಳಗೆ ಬಂಧಿಸಿ ಆಯಾ ಧರ್ಮ ಪಂಥದ ಅವರಣದೊಳಗೆ ಬಂಧಿತರಾಗಿದ್ದೇವೆ .'

'ನಮ್ಮ ಬದುಕಿನ ರಹಸ್ಯವಿರುವುದು ಇಲ್ಲೇ .ಮುಂದೆ ಎಂದಾದರೂ ಸುಖ ನೆಮ್ಮದಿ ಸಿಗಬಹುದು ಎಂಬ ನಂಬಿಕೆಯಿಂದಲೇ ನಮ್ಮ ನೋವು ,ಕಷ್ಟಗಳೆಲ್ಲ ಸ್ವಲ್ಪ ಶಮನವಾಗುತ್ತದೆ .ನಾಳೆಯ ಬಗ್ಗೆ ನಮಗಿರುವ ನಿರೀಕ್ಷೆಯೇ  ಇಂದಿನ ಕೆಲವು ಕೊರತೆಗಳಿಗೆ ಪರಿಹಾರ ನೀಡುತ್ತದೆ '

'ಮದುವೆಯ ವಯಸ್ಸು ಅಂದರೆ ಹದಿಹರಯ .ಅದು ದಾಟಿದ ಕೂಡಲೇ ಮದುವೆಯ ಬಗ್ಗೆ ನಮಗಿಂತ ಹೆಚ್ಚು ಆಸಕ್ತಿ ಉಳಿದವರಿಗೆ ಅಂದರೆ ನಮ್ಮ ಸುತ್ತ ಮುತ್ತಲಿನವರಿಗೆ ಇರುತ್ತದೆ .

'ವಿವಾಹವೆಂಬ ವ್ಯವಸ್ಥೆ ಒಂದು ಸಿನಿಮಾ ಥಿಯೇಟರ್ ನಂತೆ ಎನ್ನುತ್ತಾರೆ .ಒಳಗಿದ್ದವರಿಗೆ ಹೊರಗೆ ಬರುವ ಕಾತುರ ,ಹೊರಗಿದ್ದವರಿಗೆ ಒಳಗೆ ಹೋಗುವ ಆತುರ ' '

'ದೇವರಲ್ಲಿ ಅದು ಕೊಡು ಇದು ಕೊಡು ಎಂದು ಕೇಳುವಾಗ ಒಂದು ವೇಳೆ ದೇವರೇ ಪ್ರತ್ಯಕ್ಷನಾಗಿ ನಾನು ಕೊಟ್ಟ ಬುದ್ದಿಯನ್ನು ಏನು ಮಾಡಿದೆ ಎಂದು ಕೇಳಿದರೆ ಏನು ಹೇಳುತ್ತೀರಿ ಎಂದು ಕೇಳಿದೆ '

ಮಕ್ಕಳು ಉಪದೇಶವನ್ನು ಕಣ್ಣಿನಿಂದ ಕೇಳುತ್ತಾರೆಂಬ ಸತ್ಯ ಗೊತ್ತಾಯಿತು .'

'ಅತ್ತೆ ಸೊಸೆಯ ವೈಮನಸ್ಸು ಅಧಿಕಾರ ಹಸ್ತಾಂತರದ ಎಡವಟ್ಟುಗಳೆ ಆಗಿವೆ'

    ಇವು ಎಲ್ಲಾ ಅನುಭವದಿಂದ  ಬಂದ ಮಾತುಗಳು ,ಎಲ್ಲಿಂದಲೂ ಕಾಪಿ ಮಾಡಿದ್ದಲ್ಲ ಎಂಬುದು  ಮೇಲ್ನೋಟಕ್ಕೆ ಓದುಗರಿಗೆ ಅರಿವಾಗುತ್ತದೆ .

ಇನ್ನೊಂದು ವಿಷಿಷ್ಟ ಪದಉಪಯೋಗಿಸುತ್ತಾರೆ .ಗುಡ್ ಗರ್ಲ್ ಸಿನ್ಡ್ರೋಮ್ .ನಮ್ಮ ಅಂತರಾತ್ಮ ಸರಿಯಲ್ಲ  ಬೇಡ ಎಂದರೂ ಸಮಾಜದಲ್ಲಿ ಒಳ್ಳೆಯ ಮುಖ ತೋರಲು ನಾವು ಕೆಲ ನಿರ್ಧಾರ ತೆಗೆದುಕೊಳ್ಳುವುದು ,ಮತ್ತು ಅದರಿಂದ ಹೆಚ್ಚು ಬಾರಿ ಸೋಲುವುದು ಅಥವಾ ಮೋಸ ಹೋಗುವುದು .


ವೈದ್ಯನಾಗಿ ಒಂದೇ ಒಂದು ತಪ್ಪು ಕಂಡುದು . ಪಾಂಕ್ರಿಯಸ್ ನ ಕಲ್ಲು ಕುಡುಕರಲ್ಲಿ ಕಾಣುವುದು ಎಂದು ಬರೆದಿದ್ದಾರೆ .ಇದು  ಇತರಲ್ಲೂ ಸಾಮಾನ್ಯ .ಮರಗೆಣಸು ಸೇವನೆ ಕಾರಣ ಎಂಬ ಒಂದು ಪ್ರತೀತಿ ಇತ್ತು .

ಒಳ್ಳೆಯ ಓದು ಇಷ್ಟ ಪಡುವವರು ಕೊಂಡು ಓದಿರಿ

 

1                       

 ಲಾ ಅಂಡ್ ಆರ್ಡರ್  ನಮ್ಮ ರಾಜ್ಯದ  ಪೋಲೀಸು ಮಹಾ ನಿರ್ದೇಶಕರಾಗಿ ನಿವೃತ್ತರಾದ  ಮತ್ತು ಕಳೆದ ವಾರ ನಿಧನ ರಾದ ಎ ಪಿ ದುರೈ ಅವರ ಆತ್ಮ ಚರಿತ್ರೆ .ಪ್ರಾರಮಾಣಿಕ ಅಧಿಕಾರಿಯಾಗಿ  ,ನಿಜ ಅರ್ಥದಲ್ಲಿ ಸರ್ವ ಧರ್ಮ ಸಮನ್ವ ತೆ ಜೀವನದಲ್ಲಿ ಅಳವಡಿಸಿ ಕೊಂಡು ಬಾಳಿದವರು .ತಮ್ಮ ಪ್ರಾಮಾಣಿಕತೆ ಯಿಂದ  ಕೆಲವು ಸಂಕಷ್ಟಕ್ಕೆ ಒಳ ಗಾದರೂ  ಎಲ್ಲವನ್ನೂ  ಫಿಲೋಸೋಫಿಕಲ್  ಆಗಿ ತೆಗೆದು ಕೊಂಡವರು.

2     

                       


ಇದು  ನಮ್ಮ ರಾಜ್ಯದ  ಅರಣ್ಯ ಮಹಾ ಸಂರಕ್ಷಣ ಅಧಿಕಾರಿ ಆಗಿದ್ದ  ಶ್ರೀ ಶ್ಯಾಮ ಸುಂದರ್  ಅವರ ಆತ್ಮ ಚರಿತ್ರೆ .ಅವರು ಶಿವರಾಮ ಕಾರಂತರ ಸೋದರ ಅಳಿಯ ಮತ್ತು  ಅವರ ಪತ್ನಿ ಲೇಖಕ ತಂತ್ರಜ್ನ  ಪೇಜಾವರ ಸದಾಶಿವ  ರಾಯರ ಮಗಳು .

ಮದ್ರಾಸ್ ಪ್ರಾಂತ್ಯದಲ್ಲಿ  ಕೆಲಸಕ್ಕೆ ಸೇರಿದ ಇವರು ರಾಜ್ಯ ಪುನರ್ ವಿಂಗಡಣೆ ಕಾಲಕ್ಕೆ  ಆಗಿನ ಮೈಸೂರು ಮತ್ತು ಆಮೇಲೆ ಕರ್ನಾಟಕ ರಾಜ್ಯದ ಸೇವೆ ಯಲ್ಲಿ  ಇಲಾಖೆಯ ಅತ್ಯುನ್ನತ ಹುದ್ದೆ ಪಡೆದರು .ಸ್ವಾತಂತ್ರ್ಯದ ತರುಣದಲ್ಲಿ  ಇನ್ನೂ  ಪ್ರಾಮಾಣಿಕತೆ ಮತ್ತು  ದೇಶಭಕ್ತಿ  ಉಳಿದಿದ್ದ ಕಾಲದಿಂದ ಹಿಡಿದು  ನಂತರದ  ಮಲಿನೀಕರಣ ಕೊಂಡ ರಾಜಕಾರಣ ಎರಡೂ ನೋಡಿದವರು .ಇವರೂ ತಮ್ಮ ಪ್ರಾಮಾಣಿಕತೆಯಿಂದ  ಕೊಂಚ  ಸಮಸ್ಯೆ ಎದುರಿಸಿದವರು .ಮನೆಯಲ್ಲಿ ಊಟಕ್ಕೆ ಧಾನ್ಯ ಕೊರತೆ ಯಾದ ಪ್ರಸಂಗ ,ಮನೆ ಕಟುವಾಗ ಎದುರಿಸಿದ ಬವಣೆ ಇದಕ್ಕೆ ಉದಾಹರಣೆ .

3   

                             


ಇದು    ಕನ್ನಡದ ಪ್ರಸಿದ್ದ  ಲೇಖಕ ಮತ್ತು ಸ್ವಯಂ ಸೇವಕ  ಪುರುಷೋತಮ ಬಿಳಿಮಲೆ ಅವರ  ಆತ್ಮ ಚರಿತ್ರೆ .ದಕ್ಷಿಣ ಕನ್ನಡ ದ  ಒಂದು ಕುಗ್ರಾಮದಲ್ಲಿ ಜನಿಸಿ ಮುಂದೆ ಸುಳ್ಯ ನೆಹರು ಕಾಲೇಜ್ ,ಮಂಗಳೂರು ವಿಶ್ವವಿದ್ಯಾಲಯ ,ಹಂಪೆ ಕನ್ನಡ ಯುನಿವರ್ಸಿಟಿ , ಮತ್ತು  ಡೆಲ್ಲಿಯ  ಜೆ ಎನ್ ಯು ವರೆಗಿನ  ಹೋರಾಟದ ಬದುಕಿನ ಚಿತ್ರಣ ಇದೆ .

     

 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ