ಬೆಂಬಲಿಗರು

ಮಂಗಳವಾರ, ಅಕ್ಟೋಬರ್ 6, 2020

ಕೈಗುಣ

ವೈದ್ಯರಿಗೆ ಕೆಲವೊಮ್ಮೆ  ಸುಮ್ಮನೆ ಶ್ರೇಯಸ್ ಲಭಿಸಿದರೆ  ಕೆಲವೊಮ್ಮೆ ಟೀಕೆ ಬೈಗುಳು .ಮನೆಗೆ  ಬಂದ ಸೊಸೆಯ ಕಾಲ್ಗುಣದಂತೆ .

 ಒಂದು ಉದಾಹರಣೆ ಕೊಡುವೆನು .ಡೆಂಗೀ ಕಾಯಿಲೆ ಸೀಸನ್ ನಲ್ಲಿ  ಜ್ವರ ಮೈ ಕೈ ನೋವು ಎಂದು ಬಂದವರಿಗೆ  ನಾವು ರಕ್ತ ಪರೀಕ್ಷೆ ಮಾಡಿಸುತ್ತೇವೆ .ಪಾಸಿಟಿವ್ ಇದ್ದರೆ  ಜ್ವರದ ಮಾತ್ರೆ ಪಾರಸಿಟಮಾಲ್  ಕೊಡುತ್ತೇವೆ .ವಾಂತಿ ,ತೀವ್ರ  ನಿಶ್ಶಕ್ತಿ ಇದ್ದರೆ ಗ್ಲುಕೋಸ್  ಡ್ರಿಪ್ ಕೊಡುತ್ತೇವೆ .ಯಾಕೆಂದರೆ  ಈ ಕಾಯಿಲೆಗೆ ಇನ್ನೂ ಔಷಧಿ ಕಂಡು ಹಿಡಿದಿಲ್ಲ ಮತ್ತು ಬಹುತೇಕ ತಾನೇ ಗುಣ ಹೊಂದುವ ರೋಗ .ನಾನು ರೋಗಿಗಳಿಗೆ ಇದನ್ನು ವಿವರಿಸಿ ಹೇಳುವೆನು.ಮತ್ತು ಇದಕ್ಕೆ ಔಷಧಿ ಇಲ್ಲಾ ಎಂಬುದನ್ನೂ ಒತ್ತಿ ತಿಳಿಸುವೆನು .ಆದರೂ ಗುಣ ಹೊಂದಿದ ಕೆಲವರು ನನ್ನಲ್ಲಿ ಈ ರೋಗಕ್ಕೆ ವಿಶೇಷ ಔಷಧಿ ಇದೆ ಎಂದು ತಮ್ಮ ಬಂಧುಗಳನ್ನೂ ಕರೆದು ಕೊಂಡು ಬರುವರು .ಇದರಿಂದ ನನಗೆ ಭಾರೀ ಮುಜುಗರ ಆಗುವುದು .

 ಇದೇ ಕೆಲವೊಮ್ಮೆ ಅಪರೂಪದ ಕಾಯಿಲೆಗಳನ್ನು ಕಷ್ಟ ಪಟ್ಟು  ಕಂಡು ಹಿಡಿದು ಅದಕ್ಕೆ ಶೀಘ್ರ ಪರಿಹಾರ ಇಲ್ಲ ಎಂದೋ  ಕಷ್ಟವೆಂದೋ ಹೇಳಿದರೆ  ನಮ್ಮನ್ನು ಮನಸ್ಸಲ್ಲೇ ಬೈದು ಬೇರೆ ವೈದ್ಯರಲ್ಲಿ ಹೋಗುವರು .

ರೋಗಿಗಳ ರೋಗ  ವಿವರಗಳನ್ನು ಶಾಂತವಾಗಿ ಕೇಳುವುದು ಮತ್ತು ಶಾಸ್ಟ್ರೀಯ ಪರೀಕ್ಷೆ ಮುಖ್ಯ .ವೈಜ್ನಾನಿಕ ವಿಶ್ಲೇಷಣೆ  ಮತ್ತು ಚಿಕಿತ್ಸೆಯೇ ಮುಖ್ಯ ಹೊರತು  ಕೈಗುಣ  ಗೌಣ .

ತನ್ನಿಂದ ತಾನೇ ವಾಸಿ ಆಗುವ  ರೋಗ , ವೈಜ್ನಾನಿಕ ಪರೀಕ್ಷೆಗೆ ಒಳ ಪಡದ ತನ್ನ ಔಷಧಿ ಯಿಂದ ಗುಣ ಆಯಿತು ಎಂದು ಹೇಳಿ ಕೊಳ್ಳುವುದು ಆತ್ಮ ವಂಚನೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ