ಬೆಂಬಲಿಗರು

ಬುಧವಾರ, ಅಕ್ಟೋಬರ್ 21, 2020

ಅಂಥೋನಿ ಸ್ಟೀಫನ್ ಫೌಚಿ

                       

ಜಗತ್ತಿನಾದ್ಯಂತ ವೈದ್ಯಕೀಯ  ಜಗತ್ತು ಅತ್ಯಂತ ಅದರ ಮತ್ತು  ಗೌರವದಿಂದ  ಮತ್ತು  ಆಕಾಂಕ್ಷೆ ಯೊಡನೆ  ಕಾಣುವ ವ್ಯಕ್ತಿ  ಡಾ ಅಂಥೋನಿ ಫೌಚಿ .ನಮ್ಮ ವೈದ್ಯ ಶಾಸ್ತ್ರ ದ ಬೈಬಲ್ ಎಂದು ಕರೆಯಲ್ಪಡುವ  ಮಹಾ ಗ್ರಂಥ ಹ್ಯಾರಿ ಸನ್ಸ್ ಟೆಕ್ಸ್ಟ್ ಬುಕ್ ಆಫ್ ಮೆಡಿಸಿನ್ .   ಅದರ  ಸಂಪಾದಕೀಯ ಮಂಡಳಿಯಲ್ಲಿ ಇವರದು ಸ್ಥಾಯೀ ಹೆಸರು .ಸೋಂಕು ರೋಗಗಳ ಮತ್ತು ಅಲರ್ಜಿ ಗೆ ಸಂಬಂಧ ಪಟ್ಟ ವಿಷಯಗಳಿಗೆ  ಇವರು ಅಥಾರಿಟಿ ..ವೈದ್ಯ ,ಸಂಶೋಧಕ ವಿಜ್ಞಾನಿ ,ಸಂಪಾದಕ  ಮತ್ತು ಆಡಳಿತಕ್ಕೆ  ಸಲಹೆಗಾರ . 

                                             



                    ಫೌಚಿಯವರ ಜನನ ೧೯೪೦ ರಲ್ಲಿ ನ್ಯೂಯೋರ್ಕ್ ನಗರದಲ್ಲಿ .ಅವರ ತಂದೆ ಇಟಲಿ ಮೂಲದ ಫಾರ್ಮಸಿಸ್ಟ್ ..ಕಾರ್ನೆಲ್ ವಿಶ್ವ ವಿದ್ಯಾಲಯದಿಂದ ೧೯೬೬ ನೇ ಇಸವಿ ವೈದ್ಯಕೀಯ ಪದವಿ ಪಡೆದ ಇವರು ೧೯೬೮ ರಲ್ಲಿ  ನ್ಯಾಷನಲ್ ಇನ್ಸ್ಟಿಟ್ಯೂಟ್ ಓಫ್ ಹೆಲ್ತ್ ನ  ಸೋಂಕು ರೋಗ ಮತ್ತು ಅಲರ್ಜಿ ವಿಭಾಗಕ್ಕೆ ಸೇರಿ ಕೊಂಡರು .ಮುಂದೆ ಅಲ್ಲಿಯೇ ಕ್ಲಿನಿಕಲ್ ಫಿಸಿಯೋಲಾಜಿ ಮತ್ತು ಇಮ್ಯು ನೊ ರೆಗ್ಯು ಲೇಷನ್ ಪ್ರಯೋಗಾಲಯದ  ಮುಖ್ಯಸ್ಥರಾ ಗುತ್ತಾರೆ . ೧೯೮೪ ರಲ್ಲಿ  ಅಲರ್ಜಿ ಮತ್ತು ಸೋಂಕು ರೋಗಗಳ ವಿಭಾಗದ ನಿರ್ದೇಶಕ  ರಾದವರು ಈಗಲೂ ಆ ಹುದ್ದೆಯಲ್ಲಿ ಮುಂದುವರಿದಿರುವರು .. ಎಚ್ ಐ ವಿ ,ಏಡ್ಸ್ ,ಸಾರ್ಸ್  ,ಮರ್ಸ್ ,ಎಬೋಲಾ ,ಹಂದಿ ಜ್ವರ ಇತ್ಯಾದಿ ವೈರಸ್ ಜನ್ಯ ಕಾಯಿಲೆಗಳ  ರೋಗ ಪತ್ತೆ ಹಚ್ಚುವಿಕೆ ,ತಡೆಗಟ್ಟುವಿಕೆ ಮತ್ತು  ಚಿಕಿತ್ಸೆಯ ಬಗ್ಗೆ  ತಪಸ್ಸಿನಂತೆ ದುಡಿದ  ಮಹಾ ವೈದ್ಯ ವಿಜ್ಞಾನಿ .ಇತ್ತೀಚಿಗೆ  ಅಮೇರಿಕಾದ  ವೈದ್ಯ ವಿಜ್ಞಾನ ಸಂಸ್ಥೆ ಯು  ಜೀವ ಮಾನದ ಸಾಧನೆ ಗೆ ಇರುವ ಗುಸ್ತಾವ್  ಲಿಏನ್ಹರ್ಡ್ ಪ್ರಶಸ್ತಿ  ಇವರಿಗೆ ನೀಡಿ ಗೌರವಿಸಿತು .ಈ ಬಗ್ಗೆ ಅವರು ನಮ್ಮದು ಒಂದು ಟೀಮ್ ವರ್ಕ್ .ಅದರ ಪರವಾಗಿ  ಪ್ರಶಸ್ತಿ ಸ್ವೀಕರಿಸುವಾಗ ನಮ್ಮನ್ನು ಮತ್ತಷ್ಟು  ವಿನಯವಂತರಾಗಿ ಮಾಡುತ್ತದೆ ಅಂದಿದ್ದಾರೆ . 

                       ಕೋ ವಿಡ್ ೧೯ ರ ಬಗ್ಗೆ  ಸರಕಾರಕ್ಕೆ ಸಲಹೆ ಗಾರ .ವಿಷಯ ನಿಷ್ಟುರತೆ ಮತ್ತು ವಿನಯ ಇವರ ಟ್ರೇಡ್ ಮಾರ್ಕ್ .ಹೊಸ ರೋಗದ ಬಗ್ಗೆ  ಅಂಕಿ ಅಂಶಗಳು ಶೇಖರವಾದಂತೆ ನಮ್ಮ ಹಳೆಯ ನಿರ್ಧಾರಗಳು ಎಷ್ಟು ತಪ್ಪು ಎಷ್ಟು ಒಪ್ಪು ಎಂದು ಅರಿವಾಗುಗುವುದು .ರೋಗ ಲಕ್ಷಣವಿಲ್ಲದ ರೋಗಿಗಳ ಪ್ರಮಾಣ ಇಷ್ಟು ಇರಬಹುದು ಎಂದು ನಾವು ಊಹಿಸಿರಲಿಲ್ಲ ಎಂದು ಒಪ್ಪಿಕೊಳ್ಳುತ್ತಾರೆ ..ಈ ರೋಗದ ಹತೋಟಿಗೆ ವ್ಯಾಕ್ಸೀನ್ ಮತ್ತು  ಸುಧಾರಿತ   ಸಾರ್ವಜನಿಕ ಅರೋಗ್ಯ ವ್ಯವಸ್ಥೆ ಎರಡು ಸೇರಿದರೆ ಮಾತ್ರ ಸಾಧ್ಯ ಎಂದು ಖಡಾಖಡಿ ನುಡಿಯುತ್ತಾರೆ ..ಅಧಿಕಾರರೂಢ ರಾಜಕಾರಣಿಗಳಿಂದ ಒತ್ತಡ ಬಂದರೂ ಎದುರಿಸಿ ಬಹಳ ಜನಪ್ರಿಯ ಯಾದ ಅಂಥೋಣಿ  ಫೌಚಿ ನೀವು ಯಾವುದು ವೈಜಾನಿಕವಾಗಿ ನಿರೂಪಿಸಲ್ಪಟ್ಟಿದೆಯೋ ಅದನ್ನು ನೇರವಾಗಿ ಹೇಳಿ ,ನಿಮ್ಮ ಸಲಹೆ ಕೇಳಿ ದವರಿಗೆ ಅದು ಹಿತವಾಗಿ ಇರಲಿ ಇಲ್ಲದಿರಲಿ .ಇಂದಲ್ಲದಿದ್ದರೆ ಮುಂದೊಂದು ದಿನ ನಿಮ್ಮ ಮಾತಿನ ಸತ್ಯ ತಿಳಿದು ನಿಮ್ಮ ಗೌರವ ಹೆಚ್ಚುವುದು .,ನಿಮ್ಮ ಸಲಹೆಯನ್ನು ಪಾಲಿಸುವುದು ಬಿಡುವುದು  ಕೇಳಿದವರಿಗೆ ಬಿ ಡಿ, ಎಂಬ ಕಿವಿಮಾತು ಹೇಳುತ್ತಾರೆ.

ಇತ್ತೀಚಿಗೆ  ಚುನಾವಣಾ ಭಾಷಣಗಳಲ್ಲಿ ಅಧ್ಯಕ್ಷ ಟ್ರಂಪ್ ಅವರನ್ನು ಹಿಗ್ಗಾ ಮುಗ್ಗಾ ಟೀಕಿಸಿದ ವಿಚಾರಕ್ಕೆ ಅವರ ಪ್ರತಿಕ್ರಿಯೆ. ಗಾಡ್ ಫಾದರ್ ನಲ್ಲಿ ಹೇಳಿದಂತೆ "ವೈಯುಕ್ತಿವಾದದ್ದು ಏನೂ ಇಲ್ಲ .ಸ್ಟ್ರಿಕ್ಟ್ ಲಿ  ಬಿಸಿನೆಸ್ " ನಾನು ನನ್ನ ಕೆಲಸ ಪ್ರಾಮಾಣಿಕವಾಗಿ ಮಾಡಿ ನಮ್ಮ ಜನರ ಸೇವೆ ಮಾಡ ಬಯಸುವೆನು . 

                     ೨೦೦೫ ರಲ್ಲಿ ಅಧ್ಯಕ್ಷ ಬುಷ್ ರವರಿಂದ ಪ್ರಶಸ್ತಿ ಸ್ವೀಕರಿಸಿ

                             ರಾಸ್ಟ್ರಪತಿ ಕ್ಲಿಂಟನ್ ಜತೆ ಎಚ್ ಐ ವಿ  ಸಂಶೋಧನೆ ಬಗ್ಗೆ ವಿಚಾರ  ವಿನಿಮಯ . 

                                          

 ಅಂಥೋನಿ ಫಾಸ್ಸಿ  ಅಮೇರಿಕಾದಲ್ಲಿ  ಎಷ್ಟು ಜನಪ್ರಿಯ ಎಂದರೆ ಐ ಲವ್ ಯು ಫೌಚಿ ಎಂಬ ಸಾಕ್ಸ್ ಗಳು ,ಮತ್ತು  ಫಾಸ್ಸಿ  ಆಡು ಗೊಂಬೆಗಳು ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿವೆ.  

                               




                 


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ