ಬೆಂಬಲಿಗರು

ಭಾನುವಾರ, ಅಕ್ಟೋಬರ್ 25, 2020

ಹೆಸರು ಬದಲಿಸಿದ ಕೆಲವು ಊರುಗಳು

ಡಿ ವಿ ಜಿ ,ನವರತ್ನ ರಾಮ ರಾವ್  ಮತ್ತು ಮಾಸ್ತಿಯವರ ಕೃತಿಗಳಲ್ಲಿ ಕೆಲವು ಸ್ಥಳ ನಾಮಗಳು ಪುನಃ ಪುನಃ ಬರುತ್ತವೆ .ಅವುಗಳಲ್ಲಿ ಕೆಲವು ಈಗ ಹೆಸರು ಬದಲಿಸಿ ಕೊಂಡಿವೆ .. 

ಬೌರಿಂಗ್ ಪೇಟೆ .                                                                                         ಮರಮಠ್ಳು ಮತ್ತು ಹೊಸಿಂಗೆರೆ ಗ್ರಾಮದ ಪ್ರದೇಶಗಳನ್ನು ಸೇರಿಸಿ ರಚಿಸಿದ  ನಗರ .ಕೋಲಾರ ಚಿನ್ನದ ಗಣಿ ಮತ್ತು ಬೆಂಗಳೂರಿಗೆ ಮಧ್ಯ ಇದೆ .ಕೋಲಾರ ಚಿನ್ನದ ಗಣಿಯಲ್ಲಿ ಅಧಿಕಾರಿಯಾಗಿದ್ದ ಬ್ರಿಟಿಷ್ ಅಧಿಕಾರಿಯ ಹೆಸರು ಇಡಲಾಯಿತು .ಸ್ವಾತಂತ್ರ್ಯಾನಂತರ  ಇದುವೇ ಬಂಗಾರಪೇಟೆ ಆಯಿತು .ಅಕ್ಕಿ ವ್ಯಾಪಾರ ಕೇಂದ್ರ ..ಕೋಲಾರ ಜಿಲ್ಲೆಯಲ್ಲಿ ಇದೆ . 

ಕ್ಲೋಸ್ ಪೇಟೆ

ಈಗಿನ ರಾಮನಗರ ..ಟಿಪ್ಪು ಸುಲ್ತಾನನ ಕಾಲದಲ್ಲಿ  ಶಂಶೇರಾಬಾದ್ ಆಗಿತ್ತು .ಟಿಪ್ಪುವಿನ ಪತನದ ನಂತರ ಆತನೊಡನೆ ಬ್ರಿಟಿಷರ ಮಾತುಕತೆಗಳಲ್ಲಿ  ಮತ್ತು ಹೋರಾಟದಲ್ಲಿ ಮುಖ್ಯ ಪಾತ್ರ ವಹಿಸಿದ ಸರ್ ಬೆರಿ ಕ್ಲೋಸ್ ಅವರಿಂದ ಕ್ಲೋಸ್ ಪೇಟೆ ಆಯಿತು .ಮುಂದೆ ಕ್ಲೋಸ್ ಅವರು ಮೈಸೂರಿನ ಮೊದಲ ರೆಸಿಡೆಂಟ್ ಆದರು .ಬ್ರಿಟಿಷರು  ಬಿಟ್ಟು ಹೋದ ಮೇಲೆ ರಾಮನಗರ ಆಯಿತು . 

ಯೆಡ ತೊರೆ 

ಈಗಿನ ಕೃಷ್ಣರಾಜನಗರ .ಹಾಸನ ಮತ್ತು ಮೈಸೂರು ನಡುವೆ ಮೈಸೂರು ಜಿಲ್ಲೆಯಲ್ಲಿ ಇದೆ . ೧೯೨೫ ರಿಂದ ೧೯೩೦ ರ ಅವಧಿಯಲ್ಲಿ  ಕೃಷ್ಣ ರಾಜ ವಡೆಯರ್ ಅವರಿಂದ ನಿರ್ಮಿತವಾಯಿತು .ಕಾವೇರಿ ನದಿಯಲ್ಲಿ ಪ್ರವಾಹ ಬಂದು ಯೆಡ ತೊರೆ ನಗರದಲ್ಲಿ ಭಾರೀ ನಾಶ ನಷ್ಟಗಳು ಉಂಟಾದುದನ್ನು ಕಂಡು ಮೈಸೂರು ಅರಸರು ಮೂರು ಮೈಲು ದೂರದಲ್ಲಿ  ಯೋಜನಾ ಪ್ರಕಾರ  ನಿರ್ಮಾಣ ಮಾಡಿದರು  

 .          ಡೊಬ್ಬ್ಸ್ ಪೇಟೆ  ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ನೆಲಮಂಗಲ ಸಮೀಪ ಇದೆ .ಇದರ ಹಳೇ  ಹೆಸರು ಸೋಮಾಪುರ ..ತುಮಕೂರಿನ ಜಿಲ್ಲಾಧಿಕಾರಿ ಆಗಿ ಜನಾನುರಾಗಿ ದ್ದ  ಮೇಜರ್ ರಿಚಾರ್ಡ್ ಸ್ಟೀವರ್ಟ್  ಡೊಬ್ಬ್ಸ್  ಅವರ ಹೆಸರು ಇಡಲಾಯಿತು .ಈ ಹೆಸರು ಈಗಲೂ ಇದೆ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ