ಉಸ್ತಾದ ಕರೀಂ ಖಾನ್ ಸಂಗೀತ ಲೋಕದ ದಂತ ಕತೆ . ಭೀಮ್ ಸೆನ್ ಜೋಶಿ ಯಂತಹವರು ಅವರಿಂದ ಪ್ರಭಾವಿತರಾಗಿದ್ದರು ಎಂದು ಪ್ರತೀತಿ .
ಖಾನ್ ಸಾಹೇಬರು ಒಂದು ನಾಯಿ ಮರಿ ಸಾಕಿದ್ದರು .ಅದರ ಹೆಸರು ಟೀಪೂ ಮಿಯಾ . ಖಾನ್ ಸಾಹೇಬರು ಸಂಗೀತ ಅಭ್ಯಾಸ ಮಾಡುವಾಗಲೆಲ್ಲಾ ಅದು ಓಡಿ ಬಂದು ಪಕ್ಕದಲ್ಲಿ ಕುಳಿತು ಕೊಳ್ಳುತ್ತಿತ್ತು . ಅದಕ್ಕೂ ಸಾಕಷ್ಟು ಅಭ್ಯಾಸ ಆಗಿರ ಬೇಕು . ಒಂದು ಬಾರಿ ಸತಾರಾ ದಲ್ಲಿ ಮತ್ತೊಮ್ಮೆ ಮುಂಬೈ ಯಲ್ಲಿ ಕಚೇರಿ ಯಲ್ಲಿ ತಾನೂ ಪಾಲ್ಕೊಂಡು ಸ್ವರ ಸೇರಿ ಸಿ ಶೋತೃಗಳನ್ನು ರೋಮಾಂಚನ ಗೊಳಿಸಿತ್ತು ಎಂಬ ಪ್ರತೀತಿ .
ಗ್ರಾಮೋಫೋನ್ ರೆಕಾರ್ಡ್ ನಲ್ಲಿ ತನ್ನ ಧನಿಯ ದನಿ ಗುರುತಿಸಿ ಅಲ್ಲೇ ಬಂದು ಕುಳಿತು ಕೊಳ್ಳುತ್ತಿತ್ತು . ಅದರ ಭಾವ ಚಿತ್ರವನ್ನೇ ಭಾರತದ ಎಚ್ ಎಂ ವಿ ಕಂಪನಿ ತನ್ನ ಲೋಗೋ ವಾಗಿ ಮಾಡಿತ್ತು ಎಂಬ ಅಂಬೋಣ
ಉಸ್ತಾದ್ ಕರೀಂ ಖಾನ್ ಕರ್ನಾಟಕ ಸಂಗೀತ ದಲ್ಲಿಯೂ ಸಾಕಷ್ಟು ಸಾಧನೆ ಮಾಡಿದ್ದರು . ಅವರು ಹಾಡಿದ ತ್ಯಾಗರಾಜರ ಪ್ರಸಿದ್ಧ ಕೃತಿ ರಾಮಾ ನೀ ಸಮಾನ ನೆವರೋ ಲಿಂಕ್ https://youtu.be/FuUyLQpE22g
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ