ಸಮೂಹ ವೈದ್ಯ ಶಾಸ್ತ್ರದಲ್ಲಿ ರೋಗಕಾರಕ ತ್ರಿಕೋನ ಎಂದು ಇದೆ .ಇದನ್ನು ಎಪಿಡೆಮಿಯೋಜಿಕಲ್ ಟ್ರಯಾಂಗಲ್ ಎನ್ನುವರು. ಒಂದು ರೋಗ ಬಂದು ಊರಲು ಒಬ್ಬ ಆತಿಥೇಯ , ಒಂದು ರೋಗಕಾರಕ ವಸ್ತು (ಏಜೆಂಟ್ )ಮತ್ತು ಪೂರಕ ವಾತಾವರಣ ಬೇಕು .ಉದಾಹರಣೆ ಗೆ ಮಲೇರಿಯ ರೋಗ ಉಂಟಾಗಲು ಈ ರೋಗದ ಕ್ರಿಮಿ ಇದ್ದರೆ ಸಾಲದು . ಅದನ್ನು ಅನುಭವಿಸಲು ಒಬ್ಬ ಬಲಿ ಪಶು (ಮನುಷ್ಯ ) ವಾಹಕ ಸೊಳ್ಳೆ ಮತ್ತು ಅದು ಬೆಳೆಯಲು ಬೇಕಾದ ವಾತಾವರಣ ಇರ ಬೇಕು . ಇಲ್ಲದಿದ್ದರೆ ರೋಗ ಇಲ್ಲ .
ನಮ್ಮ ಸಮಾಜದಲ್ಲಿ ಈಗ ಕಂಡು ಬರುವ ಅಶಾಂತಿ ಅಸಹನೆ ಎಲ್ಲಾ ಯಾವುದೊ ಒಂದು ಹೆಸರಿಡದ ಕಾಯಿಲೆ . ಇದರಿಂದ ಬಳಲುವವರು ಜನ ಸಾಮಾನ್ಯರು . ರೋಗಾಣು ನಿಮ್ಮ ಊಹೆಗೆ ಬಿಟ್ಟದ್ದು . ಪೂರಕ ವಾತಾವರಣದ ಒಂದು ಅಂಶ ಸಮೀಪದಲ್ಲಿ ಬರುತ್ತಿರುವ ಸಾರ್ವತ್ರಿಕ ಚುನಾವಣೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ