ಇಂದಿನ ಕಾರ್ಯಕ್ರಮಕ್ಕೆ ನನ್ನ ಮೂವರು ಗುರುಗಳು ಬರುವುದು ನನ್ನ ಭಾಗ್ಯ.
ಒಬ್ಬರು ಶ್ರೀ ರಾಮ ರಾವ್ .ಪ್ರಾಥಮಿಕ ಶಾಲೆಯಲ್ಲಿ ನನ್ನ ಪಿ ಟಿ ಟೀಚರ್ . ಕಬಡಿ ,ಕುಟ್ಟಿ ದೊಣ್ಣೆ ,ತಲೆಮು ಮತ್ತು ಕೊಟ್ಟಣಿಕೆ ಕ್ರಿಕೆಟ್ (ಹುಡುಗಿಯರಿಗೆ ಜಿಬಿಲಿ )ಮಾತ್ರ ಸ್ಪೋರ್ಟ್ಸ್ ಅಂಡ್ ಗೇಮ್ಸ್ ಆಗಿದ್ದ ನಮಗೆ ನಿಜವಾದ ಕ್ರಿಕೆಟ್ ,ವಾಲಿ ಬಾಲ್ ,ಖೋಖೋ ,ಶಾಸ್ತ್ರೀಯ ಕಬಡಿ ಇತ್ಯಾದಿ ಪರಿಚಯಿಸಿದವರು ;; ಶಾಲೆಯಲ್ಲಿ ಭಾರತ ಸೇವಾದಳ ಆರಂಭಿಸಿದವರು .ಶಿಸ್ತಿನ ಸಿಪಾಯಿ .ಈಗಲೂ ಅವರ ಸ್ವರ ಕೇಳಿದೊಡನೆ ಅಟೆನ್ಷನ್ ಆಗುವೆನು .
ಎರಡನೆಯವರು ಶ್ರೀ ಶ್ರೀಪತಿ ರಾವ್ ಅವರು.ಇವರು ಮಾಧ್ಯಮಿಕ ಶಾಲೆಯಲ್ಲಿ ಗುರುಗಳು . ಮಾದರಿ ವಿಜ್ಞಾನ ಶಿಕ್ಷಕ ಹೇಗೆ ಇರಬೇಕು ಎಂದು ತೋರಿಸಿ ಕೊಟ್ಟವರು . ಜೋಪಾನವಾಗಿ ಕೂಡಿಟ್ಟ ಪ್ರಯೋಗಾಲಯದ ಉಪಕರಣಗಳನ್ನು ಹೊರ ತೆಗೆದು ಪ್ರಾತ್ಯಕ್ಷಿಕೆ ನಡೆಸಿ ತೋರಿಸಿ ವಿಜ್ಞಾನ ದ ಹೊಸ ಲೋಕ ತೆರೆದು ತೋರಿಸಿದವರು .ತರಗತಿ ಆರಂಭಕ್ಕೆ ಮುನ್ನ ಬಂದು ಕರಿಹಲಗೆಯಲ್ಲಿ ಅಂದವಾದ ಡಯಾಗ್ರಾಮ್ ಮಾಡುವರು ,ಅಷ್ಟು ಸಮಯ ಉಳಿಯಲಿ ಎಂದು .ಶಾಲೆಯಲ್ಲಿ ವಿಜ್ಞಾನ ಸಂಘ ಆರಂಭಿಸದವರು . ಮುಂದೆ ಇವರು ಕಲಾ ವಿಷಯದಲ್ಲಿ ಎಂ ಎ ಮಾಡಿ ಜೂನಿಯರ್ ಕಾಲೇಜು ಗೆ ಹೋದದ್ದು ವಿಜ್ಞಾನ ಶಿಕ್ಷಣಕ್ಕೆ ಆದ ನಷ್ಟ ಎಂದು ದೃಢವಾಗಿ ನಂಬಿದ್ದೇನೆ . ಇವರ ತಂದೆ ಶ್ರೀನಿವಾಸ ರಾವ್ ಪ್ರಾಥಮಿಕ ಶಾಲೆಯಲ್ಲಿ ನಮಗೆ ಮಾಸ್ಟ್ರು .ಆ ಕಾಲದಲ್ಲಿಯೇ 'ನಲಿ ಕಲಿ 'ಆಚರಣೆಗೆ ತಂದವರು .ಶಿಸ್ತಿನ ಸಿಪಾಯಿ
ಮೂರನೆಯವರು ಶ್ರೀ ಕಮ್ಮಜೆ ಸುಬ್ಬಣ್ಣ ಭಟ್ ಅವರು . ಆಗಷ್ಟೇ ಆರಂಭವಾಗಿದ್ದ ಪಿ ಯು ಸಿ ಗೆ ಅರ್ಥ ಶಾಸ್ತ್ರದ ಅಧ್ಯಾಪಕರಾಗಿ ಬಂದವರು .ನಗು ಮುಖ . ಸ್ಪುರದ್ರೂಪ . ಇವರಿಗೆ ಹೈ ಸ್ಕೂಲ್ ತರಗತಿಗಳಿಗೆ ಕೂಡಾ ಕೆಲವು ಕ್ಲಾಸ್ ಕೊಡುತ್ತಿದ್ದು ,ನಮಗೆ ಇಂಗ್ಲಿಷ್ ಹೇಳಿ ಕೊಡಲು ಬರುತ್ತಿದ್ದರು . ಮಕ್ಕಳಲ್ಲಿ ಭಾಷೆಯ ಮತ್ತು ಸಾಹಿತ್ಯದ ಅಭಿರುಚಿ ಹೆಚ್ಚಿಸಲು ಪ್ರಯತ್ನ ಮಾಡುವರು .ಜೊನಾಥನ್ ಸ್ವಿಫ್ಟ್ ,ಜಾನ್ಸನ್ ಮತ್ತು ಬಾಸ್ವೇಲ್ ,ಅಲೆಕ್ಸಾಂಡರ್ ಪೋಪ್ ಇತ್ಯಾದಿ ಬಹರಹಗಾರ ಪಾಠ ಮನ ತಟ್ಟುವಂತೆ ಮಾಡುತ್ತಿದ್ದ ನೆನಪು .ನನ್ನ ಇಂಗ್ಲಿಷ್ ಸಾಹಿತ್ಯ ಓದಿಗೆ ಇವರ ಪ್ರವಚನಗಳೇ ಸ್ಫೂರ್ತಿ .ಇನ್ನು ಇವರ ಎಕನಾಮಿಕ್ಸ್ ತರಗತಿಗಳೂ ವಿದ್ಯಾರ್ಥಿ ಪ್ರಿಯ ಆಗಿದ್ದವು .ಅವರ ನೋಟ್ಸ್ ಗಟ್ಟಿಯಾಗಿ ನನ್ನ ಅಕ್ಕ ಊರು ಹೊಡೆಯುತ್ತಿದ್ದಾಗ ಕೇಳಿದ ."India is a rich county inhabited by poor people".Todays luxury is tomorrows need "ಇತ್ಯಾದಿ ನುಡಿಗಟ್ಟುಗಳು ನನಗೂ ಕೇಳಿ ಬಾಯಿಪಾಠ ಆಗಿದ್ದವು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ