ಬೆಂಬಲಿಗರು

ಭಾನುವಾರ, ಜುಲೈ 24, 2022

ಎ ವಿ ನಾರಾಯಣ ದಂಪತಿಗಳು

                                 ಪ್ರೊ  ಎ  ವಿ ನಾರಾಯಣ ಮತ್ತು ಪ್ರೊ ವತ್ಸಲಾ ರಾಜ್ಞಿ ದಂಪತಿಗಳು 

 ಶೈಕ್ಷಣಿಕ ರಂಗದಲ್ಲಿ  ಸುಧೀರ್ಘ ಸೇವೆ ಸಲ್ಲಿಸಿ  ನಿವೃತ್ತಿ ಬಳಿಕ (ಯುವಕರನ್ನೂ ನಾಚಿಸುವಂತೆ )ಕ್ರಿಯಾ ಶೀಲವಾಗಿ  ಸಾಹಿತ್ಯ ಮತ್ತು ಸಾಂಸ್ಕೃತಿಕ ರಂಗಗಳಲ್ಲಿ  ತಮ್ಮನ್ನು ತೊಡಗಿಸಿ ಗೊಂಡ ದಂಪತಿ ಶ್ರೀ ಎ ವಿ ನಾರಾಯಣ ಮತ್ತು ವತ್ಸಲಾ ಮೇಡಂ . 

ಪ್ರೊ ನಾರಾಯಣ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ದಿಂದ ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದು ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕ ರಾಗಿ ಸೇರಿ ,ಪ್ರಿನ್ಸಿಪಾಲ್ ಆಗಿ ನಿವೃತ್ತರಾದವರು. ಒಳ್ಳೆಯ ಶಿಕ್ಷಕ ರೂ  ,ಆಡಳಿತ ಗಾರರೂ ಎಂದು ನಿರೂಪಿಸಿದ ಇವರು ನಂತರವೂ ಕಾಲೇಜು  ಆಡಳಿತ ಮಂಡಳಿಯಲ್ಲಿ ಸಕ್ರಿಯರಾಗಿ ಇದ್ದು  ಸಂಸ್ಥೆಯ ಬೆಳವಣಿಗೆಯ ನಿರ್ಣಾಯಕ ಹಂತದಲ್ಲಿ ತಮ್ಮ ಯೋಗದಾನ ನೀಡಿದವರು . ಜತೆಗೆ ಸಾಹಿತ್ಯ ಪರಿಷತ್ ,ಹಿರಿಯ ನಾಗರಿಕರ ಸಂಘಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡವರು . ತನು ಮನ ಧನ ದ  ಕೊಡುಗೆ ಎಂಬುದು ಇವರ ವಿಚಾರಕ್ಕೆ ಕ್ಲೀಷೆ ಯಲ್ಲ . ಕನ್ನಡ ಕೆಲಸ ಗಳಲ್ಲಿ ಉತ್ಸಾಹ ದಿಂದ ಓಡಾಡುವದು ಕಾಣ ಬಹುದು . 

ವತ್ಸಲಾ ಮೇಡಂ ಗಣಿತ ಶಾಸ್ತ್ರ ಪ್ರಾಧ್ಯಾಪಕೆರಾಗಿ ಅದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು .  ಕಠಿಣ ವೆಂದು ಪರಿಗಣಿತವಾದ ಈ ವಿಷಯವನ್ನು ಸುಲಿದ ಬಾಳೆಯ ಹಣ್ಣಿನಂತೆ ಮಾಡುವ ಇವರ ಪಾಠ ಪ್ರವಚನ ಗಳನ್ನು  ವಿದ್ಯಾರ್ಥಿಗಳು ಈಗಲೂ ನೆನಪಿಸಿ ಕೊಳ್ಳುತ್ತಾರೆ . 

ಇಬ್ಬರೂ ವಿದ್ಯಾರ್ಥಿ ಮತ್ತು ಆಡಳಿತ ಮಂಡಳಿ ಮನ್ನಣೆ ಪಡೆದವರು . ಮೃದು ಮಿತ ಮತ್ತು ಹಿತ ಭಾಷಿಗಳು . ಇಂತಹವರ ಇರುವಿಕೆಯಿಂದ ಸಮಾಜದ ಶ್ರೀಮಂತಿಕೆ ಇದ್ದದ್ದು ಉಳಿಯುತ್ತದೆ ,ಮತ್ತು ಹೆಚ್ಚುತ್ತದೆ . 

 ಇವರು ಹೀಗೇ ಅರೋಗ್ಯ ,ಸಂತೋಷ ಮತ್ತು ಸಡಗರದಿಂದ ಇದ್ದು ನಮಗೆಲ್ಲಾ ಮಾರ್ಗ ದರ್ಶನ ಮಾಡುತ್ತ ಇರಲಿ

ಬುಧವಾರ, ಜುಲೈ 20, 2022

ಜೇನು ಹುಳ ಕಡಿತ

 Catching a Wild Honeybee Swarm - YouTube

 

ನನ್ನ ಸಹಪಾಠಿ ಮಿತ್ರ ಶಿರಂಕಲ್ಲು ಶಿವರಾಮ ಭಟ್ ನಿನ್ನೆ ಕಾಡು ಜೇನು ಹುಳ ಕಡಿತದಿಂದ ಬಾಧಿತ ರಾಗಿ ಬಂದಿದ್ದರು . 

 ಜೇನು ಹುಳಗಳು ಕಡು ಬಣ್ಣ (ಕಪ್ಪು ,ಕೆಂಪು )ದ್ವೇಷಿಗಳು . ಅರಿವಿಲ್ಲದೆ ಅವರ ಸುದ್ದಿಗೆ ಹೋದರೂ ,ತಿಳಿಯದೇ ಮಾಡಿದ ಪಾಪ ಎಂದು ಅವು ಬಿಡವು . ಅಟ್ಟಿಸಿ ಕೊಂಡು ಬಂದು ಕಚ್ಚ್ಚುವವು . ಜೇನ್ ನೊಣಗಳಿಗೆ ಪ್ರತಿ ಧಾಳಿ ಮಾಡಲು ಹೋಗ ಬಾರದು . ಕಾಲಿಗೆ ಬುದ್ದಿ ಹೇಳುವುದು ಜಾಣ ತನ .ಓಡಿ ಹೋಗಿ ಕೋಣೆಯೊಳಗೋ ,ಕಾರಿನ ಒಳಗೋ ರಕ್ಷಣೆ ಪಡೆಯ ಬೇಕು . ಗೋಣಿಯೋ ,ದಪ್ಪ ಬಟ್ಟೆಯೋ ಇದ್ದರೆ ಕಣ್ಣು ಮಾತ್ರ ಬಿಟ್ಟು ಮುಖ ಸಾಧ್ಯ ವಾದಷ್ಟು ದೇಹ ಮುಚ್ಚಿ ಕೊಳ್ಳ ಬೇಕು . ನೀರಿಗೆ ಹಾರಿ ಮುಳುಗುವುದು ಕ್ಷೇಮ ಅಲ್ಲ .ಅವು ನೀರಿನ ಮೇಲೆ ಹಲವೊಮ್ಮೆ ಕಾಯುತ್ತ ಇರುವವು . 

ಜೇನು ನೊಣದ ಮುಳ್ಳುಗಳನ್ನು ಸಾಧ್ಯ ವಾದಷ್ಟು ತೆಗೆದು ಕೊಳ್ಳ ಬೇಕು . (ಪಾಶ್ಚಾತ್ಯ ಮಾಧ್ಯಮಗಳು ಇದಕ್ಕಾಗಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ನ ಬದಿ ಉಪಯೋಗಿಸಿ ಎಂದು ಸಲಹೆ ಮಾಡುವರು .)ನೋವು ಶಮನಕ್ಕೆ  ಬಟ್ಟೆಯೊಗೆ ಐಸ್ ಸುತ್ತಿ ಇಡಬಹುದು . ಅಡಿಗೆ ಸೋಡಾ ಕರಡಿಸಿ ಹಚ್ಚಿದರೆ ಉರಿ ಕಡಿಮೆ ಆಗುವುದು ಎನ್ನುವರು . 

ಇದರಲ್ಲಿ ಪ್ರಾಣಾಪಾಯ ಆಗುವುದು ಜೇನ್ ನೊಣದ ವಿಷಕ್ಕೆ ಅಲ್ಲರ್ಜಿ ರಿಯಾಕ್ಷನ್ ಆಗಿ.ಇವರಲ್ಲಿ ಮೈಯೆಲ್ಲಾ ತುರಿಕೆ ರಾಷ್ ,ದಮ್ಮು ಕಟ್ಟುವುದು ,ರಕ್ತದ ಒತ್ತಡ ಕುಸಿತ ಆಗುವುದು .ಅದಕ್ಕೆ ವೈದ್ಯರು  ಜೀವ ಉಳಿಸುವ ಅಡ್ರೆನಲಿನ್ ಇಂಜೆಕ್ಷನ್ ಕೊಡುವರು .ಸಣ್ಣ ಅಲರ್ಜಿ ಗೆ  ಆಂಟಿ ಹಿಸ್ಟಾಮಿನಿಕ್ಸ್ ,ಸ್ಟ್ರೆರೋಯಿಡ್ ಸಾಕು .ನೋವಿಗೆ ಇಬು ಪ್ರೊಫೆನ್ ,ಡೈಕ್ಲೋ ಫೆನಾಕ್ ನಂತ ವೇದನಾ ಹಾರಕ  ಕೊಡುವರು . 

ಬಾಲಂಗೋಚಿ : ಕನ್ನಡದಲ್ಲಿ ಜೇನು ನೊಣ ,ಚೇಳು ಕಡಿತ ಎನ್ನುವರಾದರೂ ಇಂಗ್ಲಿಷ್ ನಲ್ಲಿ ಅದನ್ನು ಬೈಟ್ ಎನ್ನದೆ ಸ್ಟಿಂಗ್ ಎನ್ನುವರು

ಮಂಗಳವಾರ, ಜುಲೈ 19, 2022

                  ಜಲೋದರ 

 Ascites - WikipediaAscites causes, symptoms, diagnosis, prognosis and ascites treatment

 

ನಮ್ಮ  ಉದರದದೊಳಗೆ ಜಠರ ಕರುಳ ಮಾಲೆ ಇತ್ಯಾದಿ ತೇಲುತ್ತಲಿದ್ದು ಅದಕ್ಕೆ  ಸಾಕಷ್ಟು ಸ್ಥಳಾವಕಾಶ ಇದೆ .ಅಲ್ಲದೆ ಅವುಗಳ ಸುಲಲಿತ ಚಲನೆಗೆ ಸುಮಾರು ೫೦ ಮಿಲ್ಲಿ ಲೀಟರ್ ನಷ್ಟು ದ್ರವ ಇದ್ದು ಘರ್ಷಣೆ ನಿವಾರಕ ಆಗಿ ಕೆಲಸ ಮಾಡುವದು .

ಆದರೆ ಕೆಲವು ಸಂದರ್ಭಗಳಲ್ಲಿ ದ್ರವ ಉತ್ಪತ್ತಿ ಮತ್ತು ಶೇಖರಣೆ ಹೆಚ್ಚು ಆಗಿ ಹೊಟ್ಟೆ ಉಬ್ಬುವುದು . ಎದೆಯ ನೀರಿಗಿಂತ ಇಲ್ಲಿ ಹೊರಗೆ ವಿಕಸಿಸಲು ಅವಕಾಶ ಇದೆ . 

ಮದ್ಯಪಾನ ,ಅಥವಾ ಸೋಂಕು ರೋಗಗಳಿಂದ ಲಿವರ್ ಕಾರ್ಯ ನಾಶ ಆದರೆ ಜಲೋದರ ಬರುವದು ಸಾಮಾನ್ಯ . ಹೊಟ್ಟೆಯ ಪೋರ್ಟಲ್ ರಕ್ತ ನಾಳ ಗಳ ಒಳಗೆ ಹೆಚ್ಚಿದ ಒತ್ತಡ , ಲವಣ ಮತ್ತು ನೀರು ಹಿಡಿದು ಕೊಳ್ಳುವ ಅಲ್ದೊ  ಸ್ಟಿರೋನ್ ಎಂಬ ಹಾರ್ಮೋನ್ ಮಿತಿ ಮೀರಿ ಉತ್ಪಾದನೆ ಮತ್ತು ರಕ್ತದಲ್ಲಿ ಸಸಾರ ಜನಕದ (ಲಿವರ್ ಇದರ ಕಾರ್ಖಾನೆ )ಕೊರತೆ ಇದಕ್ಕೆ ಕಾರಣ . 

ಇನ್ನು ಕ್ಷಯ ರೋಗ ,ಕ್ಯಾನ್ಸರ್,ಅಪೌಷ್ಟಿಕತೆ  ಮತ್ತು ಮೂತ್ರ ಪಿಂಡ ಹೃದಯ  ವೈಫಲ್ಯ ದಲ್ಲಿಯೂ ಹೊಟ್ಟೆಯಲ್ಲಿ ನೀರು ತುಂಬಿ ಕೊಳ್ಳ ಬಹುದು . ಸೂಜಿ ಹಾಕಿ ನೀರು ಪರೀಕ್ಷೆ ಮಾಡಿ ಕಾರಣ ತಿಳಿದು ಕೊಳ್ಳುವರು . ಹೊಟ್ಟೆಯ ಸ್ಕ್ಯಾನ್ ಸಹಾಯ ಕಾರಿ


 

ಭಾನುವಾರ, ಜುಲೈ 17, 2022

 ಎದೆಯಲ್ಲಿ  ನೀರು ತುಂಬುವುದು 

 Pleural effusion | HealthEngine BlogPleural Fluid Drainage Frequency - Dr. Flores Pulmonology                                                                                          

ಎದೆಯಲ್ಲಿ ಮುಖ್ಯವಾದ ಎರಡು ಅಂಗಗಗಳು ಇವೆ . ಎರಡು  ಶ್ವಾಸ ಕೋಶಗಳು ಮತ್ತು ಅವುಗಳ ನಡುವೆ ಹೃದಯ .ಶ್ವಾಸ ಕೋಶಗಳಲ್ಲಿ  ಆಮ್ಲಜನಕ ಹೀರಿ ಶುದ್ದವಾದ  ರಕ್ತ  ಶ್ವಾಸಕೋಶದ  ಅಭಿಧಮನಿ ಮೂಲಕ ಹೃದಯದ ಎಡ ಹೃತ್ಕರ್ಣ ,ಹೃತ್ಕುಕ್ಷಿ  ಸೇರಿ ಮಹಾ ಅಪಧಮನಿ ಮೂಲಕ ಶರೀರದ  ಎಲ್ಲಾ ಅಂಗಗಳಿಗೆ ಸರಬರಾಜು ಆಗುವುದು .

 ಅದೇ ರೀತಿ ಶರೀರದಿಂದ ಬಂದ ಕಡಿಮೆ ಆಮ್ಲಜನಕ  ಇರುವ  ಹೆಚ್ಚು ಕಾರ್ಬನ್ ಡಯಾ ಕ್ಸೈಡ್ ಇರುವ ರಕ್ತ  ಬಲ ಹೃತ್ಕರ್ಣ ,ಹೃತ್ಕುಕ್ಷಿ ,ಶ್ವಾಸ ಕೋಶದ ಅಪಧಮನಿ ಮೂಲಕ ಶ್ವಾಸಕೋಶಗಳಿಗೆ ಹೋಗುವುದು .

ಶ್ವಾಸ ಕೋಶ ಮತ್ತು ಹೃದಯಕ್ಕೆ  ಅನುಕ್ರಮ ವಾಗಿ ಪ್ಲೂರಾ ಮತ್ತು ಪೆರಿ ಕಾರ್ಡೀಯಮ್ ಎಂಬ ಎರಡು ಹೊದಿಕೆಯ ರಕ್ಷಣಾತ್ಮಕ ಪೊರೆಗಳು ಇರುತ್ತವೆ .ಇವುಗಳ ಒಳಗೆ 10 ಮಿಲಿ ಲೀಟರ್ ನಷ್ಟು ಲುಬ್ರಿ ಕೆಂಟ್ ದ್ರವ ಇರುತ್ತದೆ .

ಕೆಲವೊಮ್ಮೆ ಕಾಯಿಲೆಯಲ್ಲಿ  ಪ್ಲೂರಾ ದ  ಎರಡು ಹೊದಿಕೆಗಳ ನಡುವೆ ದ್ರವ ತುಂಬಿ ಅದು ಶ್ವಾಸ ಕೋಶವನ್ನು ಒತ್ತಿ ಸರಿಯಾಗಿ ವಿಕಸನ ಆಗಲು ಬಿಡದು .ಎದೆಯ ಗೂಡನ್ನು ಪಕ್ಕೆಲುಬುಗಳು ಕಾಯುವುದರಿಂದ ಹೊರಗಡೆ ವಿಸ್ತರಿಸಲು ಆಗದು ತಾನೇ . ಇದನ್ನು ಪ್ಲೂರಲ್  ಎಫ್ಯೂಶನ್ ಎನ್ನುತ್ತಾರೆ . ಅದೇ ರೀತಿ ಹೃದಯದ ಎರಡು ಹೊದಿಕೆಗಳ ನಡುವೆ ಆದರೆ ಪೆರಿ ಕಾರ್ಡಿಯಲ್  ಎಫ್ಯೂಶನ್ ಎನ್ನುವರು . ಇದು ದೊಡ್ಡ ಪ್ರಮಾಣದಲ್ಲಿ ಇದ್ದರೆ ಹೃದಯ ಸಂಕುಚನ  ವಿಕಸನದಲ್ಲಿ ,ವಿಕಸನಕ್ಕೆ ಅಡ್ಡಿ ಬಂದು ತೊಂದರೆ ಉಂಟು ಮಾಡುವುದು .

ಎರಡೂ ರೀತಿಯ ದ್ರವ ಸಂಗ್ರಹ ಬೇರೆ ಬೇರೆ ಕಾರಣಕ್ಕೆ  ದಮ್ಮು ಕಟ್ಟುವುದು ಉಂಟು ಮಾಡುವುದು .ಮತ್ತು ಅದನ್ನು ಉಂಟು ಮಾಡುವ ಮೂಲ ಕಾಯಿಲೆ ಯಾ ಲಕ್ಷಣ ಗಳಾದ ಕೆಮ್ಮು ಜ್ವರ ಇತ್ಯಾದಿ

ಪ್ಲೂರಲ್ ಎಫ್ಯೂಶನ್ ಗೆ ನಮ್ಮ ದೇಶದಲ್ಲಿ ಮುಖ್ಯ ಕಾರಣ ಕ್ಷಯ ರೋಗ .ಹೃದಯ ವೈಫಲ್ಯ ,ಕಾನ್ಸರ್ ,ಶ್ವಾಸ ಕೋಶದ ಸೋಂಕು, ಇತ್ಯಾದಿ ಇತರ ಕೆಲ ಸಾಮಾನ್ಯ ಕಾರಣಗಳು . ಡೆಂಗು ಜ್ವರದಲ್ಲಿ ಕೂಡಾ ಸಣ್ಣ  ಪ್ಲೂರಲ್ ದ್ರವ ಸಂಗ್ರಹ ಸಾಮಾನ್ಯ .ವೈದ್ಯರು ಎದೆಯ ಮೇಲೆ ಕುಟ್ಟುವುದು (ಮರ್ಧನ)ಮತ್ತು  ಶ್ರವಣ ದ ಮೂಲಕ ನೀರು ತುಂಬಿರುವುದು ಸಂಶಯಿಸಿ  ಎಕ್ಸ್ ರೇ ಮತ್ತು  ಸ್ಕ್ಯಾನ್ ಮೂಲಕ ದೃಢ ಪಡಿಸಿ ಕೊಳ್ಳುವರು . ನೀರು ಇರುವ ಭಾಗಕ್ಕೆ ಪಕ್ಕೆಲುಬುಗಳ ನಡುವಿಂದ ಸೂಜಿ ಹಾಯಿಸಿ ನೀರು ತೆಗೆದು ಪರೀಕ್ಷೆ ಮಾಡಿ ಕಾರಣ ಕಂಡು ಹಿಡಿದು ಚಿಕಿತ್ಸೆ ಮಾಡುವರು .

 ಹೃದಯದ ಸುತ್ತ ನೀರು ನಿಲ್ಲುವುದಕ್ಕೆ ಕ್ಷಯ , ಇತರ ಸೋಂಕು ರೋಗಗಳು ,ಥೈರೊಯ್ಡ್ ಹಾರ್ಮೋನ್ ಕೊರತೆ ಇತ್ಯಾದಿ ಕಾರಣಗಳು . ಹೃದಯದ ಸ್ಕ್ಯಾನ್ -ಏಕೋ ಕಾರ್ಡಿಯೋಗ್ರಫಿ ಮೂಲಕ ದೃಢ ಪಡಿಸಿ ,ದ್ರವ ಸಂಗ್ರಹಿಸಿ ಕಾರಣ ಕಂಡು ಹಿಡಿದು ಚಿಕಿತ್ಸೆ . 

ಅವಘಡ ,ಮತ್ತು ಇನ್ನಿತರ ಕಾರಣಗಳಿಂದ ಪೆಟ್ಟು ಆದಾಗ ಎದೆಯ ಒಳಗೆ ರಕ್ತ ಸ್ರಾವ ಆಗಿ ಪ್ಲೂರಲ್ ಅಥವಾ ಪೆರಿ ಕಾರ್ಡಿಯಲ್ ಗಳ  ಒಳಗೆ ರಕ್ತ ಸಂಗ್ರಹ ಆಗಿ   ದುಷ್ಪರಿಣಾಮ ಉಂಟು ಮಾಡಬಹುದು . 

ಈ ರೀತಿ ಸಂಗ್ರಹ ಆದ  ದ್ರವದ ಪ್ರಮಾಣ  ಉಸಿರುಕಟ್ಟುವಿಕೆ ಉಂಟು ಮಾಡುತ್ತಿದ್ದರೆ   ಸೂಜಿ ಮತ್ತು ಕೊಳಾಯಿ ಮೂಲಕ ಅದನ್ನು ಹೊರತೆಗೆಯುವರು . ಮತ್ತು ಮೂಲ ಕಾರಣಕ್ಕೆ ಚಿಕಿತ್ಸೆ ಮಾಡುವರು

ಶನಿವಾರ, ಜುಲೈ 16, 2022

ಸಾಫ್ಟ್ ಹ್ಯಾಂಡ್ ನ ಸಾಫ್ಟವೆರ್ ಹುಡುಗ ಹುಡುಗಿಯರಿಗೆ ಉಪ್ಪಿಟ್ಟು ಮಾಡುವ ವಿಧಾನ (ಇಬ್ಬರಿಗೆ)

 Image result for upma

ಸಾಫ್ಟ್ ಹ್ಯಾಂಡ್ ನ ಸಾಫ್ಟವೆರ್ ಹುಡುಗ ಹುಡುಗಿಯರಿಗೆ ಉಪ್ಪಿಟ್ಟು ಮಾಡುವ ವಿಧಾನ (ಇಬ್ಬರಿಗೆ)

 ವಿಧಾನ ೧ 

ಮೂರು ಹಸಿಮೆಣಸು ,ಎರಡು ಈರುಳ್ಳಿ ,ಸಣ್ಣ ತುಂಡು ಶುಂಠಿ ಸಣ್ಣಕೆ ಹಚ್ಚಿಕೊಳ್ಳಿರಿ . ಆಮೇಲೆ  ಚೆನ್ನಾಗಿ ಕೈ ತೊಳೆದು ಕೊಳ್ಳಿರಿ . ಒಂದು ಒಲೆಯ ಮೇಲೆ ಬಾಣಲೆಯಲ್ಲಿ  ಎರಡು ಕಪ್ ರವೆ ಹಾಕಿ ಚಿನ್ನದ ಬಣ್ಣ ಬರುವ ವರೆಗೆ ತಿರುವಿ ಅದನ್ನು ಒಂದು ಬಟ್ಟಲಲ್ಲಿ ಸುರುವಿರಿ . ಇನ್ನೊಂದು ಒಲೆಯಲ್ಲಿ ಎರಡು ಕಪ್ ನೀರು  ಕುಡಿಯಲು ಒಂದು ಪಾತ್ರೆಯಲ್ಲಿ ಇಡಿರಿ . ಬಾಣಲೆಗೆ  ದೊಡ್ಡ ಎರಡು ಚಮಚೆ ಎಣ್ಣೆ (ಉದಾ ತೆಂಗಿನ ಎಣ್ಣೆ ,ನೆಲಗಡಲೆ ಎಣ್ಣೆ )ಹಾಕಿ ,ಅದಕ್ಕೆ ಎರಡು ಸಣ್ಣ ಚಮಚ ಸಾಸಿವೆ ,ಉದ್ದಿನ ಬೇಳೆ ಸೇರಿಸಿ ತಿರುವಿರಿ ,ಸಾಸಿವೆ ಚಟ ಚಟ ಹೇಳುವಾಗ ಹಚ್ಚಿ ಇಟ್ಟ ಈರುಳ್ಳಿ,ಹಸಿಮೆಣಸು ,ಶುಂಠಿ ಮತ್ತು ಕರಿಬೇವಿನ ಸೊಪ್ಪು ಸೇರಿಸಿ . ಚೆನ್ನಾಗಿ ತಿರುವಿರಿ . ಬಟ್ಟಲಲ್ಲಿ ಇಟ್ಟ ರವೆ (ಸಜ್ಜಿಗೆ )ಬಾಣಲೆಗೆ ಹಾಕಿರಿ ,ಒಂದು ಚಮಚ ಪುಡಿ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ತಿರುವಿರಿ . ಅಷ್ಟರಲ್ಲಿ ಇನ್ನೊಂದು ಒಲೆಯ ಮೇಲಿನ ಪಾತ್ರೆಯಲ್ಲಿ ನೀರು ಕುದಿಯಲು ಆರಂಭವಾಗುವದು . ಆ ನೀರನ್ನು ಬಾಣಲೆಗೆ ಹಾಕಿ ತಿರುವಿರಿ .ಆಮೇಲೆ ಒಂದು ಮುಚ್ಚಳ ಮುಚ್ಚಿ ಸ್ವಲ್ಪ ಕಾಯಿರಿ . ನೀರು  ಆರಿದ ಒಡನೆ ಒಲೆಯಿಂದ ಕೆಳಗೆ ತೆಗೆದು ಇಟ್ಟು ,ತುರಿದ ತೆಂಗಿನ ಕಾಯಿ ,ಕೊತ್ತಂಬರಿ ಸೊಪ್ಪು  ಹಾಕಿ ರಿ .ಬಿಸಿ ಬಿಸಿ ಉಪ್ಪಿಟ್ಟು ರೆಡಿ . (ಬಿಸಿ ಪಾತ್ರೆಯನ್ನು ಬರಿ ಕೈಯಲ್ಲಿ ಮುಟ್ಟದಿರಿ .ಬಟ್ಟೆ ಅಥವಾ ಇಕ್ಕುಳ ಉಪಯೋಗಿಸಿ . 

ವಿಧಾನ ೨ 

ನೀವು ಭಯಂಕರ ಬ್ಯುಸಿ ಆಗಿದ್ದು ಸಮಯದ ಅಭಾವ ಇದ್ದರೆ ಎಂ ಟಿ  ಆರ್ ಅಥವಾ ೭೭೭ ಉಪ್ಪಿಟ್ಟು ಮಿಕ್ಸ್ ನ್ನು ಒಂದು ಕಪ್ ಗೆ ಎರಡರಂತೆ ನೀರು ಕುದಿಸಿ ಅದಕ್ಕೆ ಸುರುವಿರಿ .ಉಪ್ಪಿಟ್ಟು ರೆಡಿ ,ತಿನ್ನುವಾಗ ಪೇಪರ್ ಪ್ಲೇಟ್ ನಲ್ಲಿ ತಿಂದರೆ ತೊಳೆಯುವ ಕೆಲಸ ಇಲ್ಲ . 

ಇಷ್ಟೂ ಸಮಯ ಇಲ್ಲದಿದ್ದರೆ  ಸ್ವಿಗ್ಗಿ ಅಥವಾ ಝೋಮ್ಯಾಟೋ ಆಪ್ ಒತ್ತಿ ನಿಮ್ಮ ಇಷ್ಟದ ಹೋಟೆಲ್ ಗೆ ಆರ್ಡರ್ ಮಾಡಿರಿ 


ಶುಕ್ರವಾರ, ಜುಲೈ 15, 2022

ಹೋಟೆಲ್

                                      


ನಮ್ಮ ನೆಹರೂನಗರ ಪರಿಸರದಲ್ಲಿ ಬಂಜಾರ ವನಸ್ ಎಂಬ ಹೋಟೆಲ್ ಆರಂಭಿಸಿದ್ದಾರೆ . ಬಂಜಾರ ವನಸ್ ಎಂದರೆ ಹೊಟ್ಟೆ ತುಂಬಾ ಊಟ ಎಂದು ಅರ್ಥ . ಇದರ ಪ್ರವರ್ತಕರಿಗೆ ಶುಭಾಶಯ ಗಳು . 

ಉಡುಪಿ  ಯಲ್ಲಿ  ಬಹಳ ಹಿಂದೆ ವನಸ್ ಎಂಬ ಹೋಟೆಲ್ ಆರಂಭ ವಾಗಿತ್ತು . ಜತೆಗೆ ಬಾಜಲ್  ಎಂಬ ತಂಪು ಪಾನೀಯ ಬಹಳ ವರ್ಷಗಳ ವರೆಗೆ ಬರುತ್ತಿತ್ತು . ತುಳು ಶಬ್ದಗಳನ್ನು ಜನಪ್ರಿಯ ಗೊಳಿಸಿದ ಅವರಿಗೆ ಅಭಿನಂದನೆಗಳು .. ಮಂಗಳೂರಿನಲ್ಲಿ ಕೂಡಾ ಹೊಟೇಲ್ ವನಸ್ ,ಇರೆತ್ತ ವನಸ್ ಹೆಸರಿನ ಹೊಟೇಲ್ ಗಳಿವೆ ಎಂದು ಕೇಳಿದ್ದೇನೆ.

ತಮಿಳು ಭಾಷೆಯಲ್ಲಿ ಪಾರ್ತಾಲ್ ಪಶಿ ತೀರುಮ್ (ನೋಡಿದರೇ ಸಾಕು ಹಸಿವು ನೀಗುವುದು )ಎಂಬ ನುಡಿಗಟ್ಟು ಇದೆ .ಇದೇ ಹೆಸರಿನ ಸಿನಿಮಾ ಕೂಡಾ ೧೯೬೨ ರಲ್ಲಿ ಬಂದಿದ್ದು ಕಮಲ ಹಾಸನ್ ಬಾಲ ನಟರಾಗಿ ಅಭಿನಯಿಸಿದ್ದರು . ಎಂ ಟಿ ಆರ್ ಹೋಟೆಲ್ ತಿಂಡಿ ಪಾರ್ತಾಲೆ ಪಶಿ ತೀರುಮ್ ಎಂದು ಟಿ ಎಸ ಆರ್ ಪ್ರಜಾವಾಣಿಯಲ್ಲಿ ಬರೆದದ್ದನ್ನು ಓದಿದ ನೆನಪು . 

ನಾ ಮೊಗಸಾಲೆ ಯವರ ಧರ್ಮ ಯುದ್ಧ ಕಾದಂಬರಿ ಯಲ್ಲಿ ನಮ್ಮ ಹಳ್ಳಿಗಳ ಆಗಿನ ಹೋಟೆಲ್ ಗಳ ಪ್ರೋಟೋ ಟೈಪ್ ಒಂದರ ಚಿತ್ರಣ ಚೆನ್ನಾಗಿ ಚಿತ್ರಿಸಿದ್ದಾರೆ . ನಮ್ಮ ಮನೆ ಸಮೀಪ ಬೈರಿ ಕಟ್ಟೆಯಲ್ಲಿ ಶಂಕರ ನಾರಾಯಣ ರಾವ್ ಎಂಬುವರ ಹೋಟೆಲ್ ಇದೇ ತರಹ ಇದ್ದು ,ಕ್ಯಾಷಿ ಯರ್ ,ಸಪ್ಲೈಯ್ಯರ್ ,ಕುಕ್ ಮತ್ತು ಕ್ಲೀನರ್ ಗಳ ಏಕ ಪಾತ್ರಾಭಿನಯ ಕಾಣ ಬಹುದಾಗಿತ್ತು . ನನ್ನ ತಂದೆಯವರ ಆಪ್ತ  ಮಿತ್ರರು . ಒಂದೂವರೆ ಮೀಟರ್ ಚಾ ವನ್ನು ದೊಡ್ಡ ಕುಪ್ಪಿ  ಗ್ಲಾಸ್ (ಈಗಿನ ಹೋಟೆಲ್ ಗಳಲ್ಲಿ ಇರುವುದರ ಮೂರು ಪಟ್ಟು )ತುಂಬಿಸಿ ಕೊಡುತ್ತಿದ್ದರು .ಅವರ ಬನ್ಸ್ ,ಕಾರದ ಕಡ್ಡಿ ,ಸಜ್ಜಿಗೆ ಬಜಿಲ್ ತುಂಬಾ ಚೆನ್ನಾಗಿತ್ತು . 

Hotel Vanas, Km Marg, Udupi - South Indian, Sea Food, Udupi, Non Veg Thali  Cuisine Restaurant - Justdial

ಬೆಲ್ಚಪ್ಪಾಡರು

 ಬಾಲ್ಯದಲ್ಲಿ  ದೇವಸ್ಥಾನ  ಗಳಲ್ಲಿ ಬೆಲ್ಚ ಪ್ಪಾಡ  ರು  ಕಾಣ ಬರುತ್ತಿದ್ದರು . ಉದ್ದ ಕೂದಲು ಬಿಟ್ಟು ಕೆಂಪು ಬಟ್ಟೆ  ಶಾಲು ಧರಿಸಿ ,ಕೈಯಲ್ಲಿ ಕಡಗ , ಒಂದು ಖಡ್ಗ ಹಿಡಿದು ಬರುತ್ತಿದ್ದ ದೃಶ್ಯ ಕಣ್ಣು ಮುಂದೆ ಇದೆ .ದೇವರು (ದೇವಿ )ಇವರ ಮೈಮೇಲೆ  ಬಂದು ಭಕ್ತರಿಗೆ ಸಾಂತ್ವನ ಹೇಳಿ  ಧೈರ್ಯ ಕೊಡುವರು ಎಂಬ ನಂಬಿಕೆ  .ಇದು ಒಂದು ಕೇರಳೀಯ ಪರಂಪರೆ . ನಮ್ಮ ಗ್ರಾಮದ ಬೆಲ್ಚ ಪ್ಪಾಡರ  ಮಾತೃ ಭಾಷೆ ಕೂಡಾ ಮಲಯಾಳ ಆಗಿದ್ದು ನನ್ನ ಆಪ್ತ ಮಿತ್ರ ರಾಜು ಬೆಲ್ಚಡ   ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಆಗಿದ್ದಾರೆ . 

ಮಲಯಾಳದ ವೆಲುಪ್ಪಚ್ಚಾಡ ಎಂಬ ಮೂಲದಿಂದ ಈ ಶಬ್ದ ಬಂದಿರ ಬೇಕು . ಪದದ ಅರ್ಥ ಬೆಳಕು ತೋರುವವವನು .ತೆಂಕ್ಲಾಗಿ ಗಂಡು   ಮತ್ತು ಸ್ತ್ರೀ  ವೆಲ್ಚಪ್ಪಾಡ್ ಇರುವರು .ಉತ್ಸವ ದಿನ ಪೂಜಾ ಸಮಯ ಚೆಂಡೆ  ಗಂಟೆ  ಘಂಟಾ ಘೋಷಕ್ಕೆ  ಖಡ್ಗ ಝಳಪಿಳಸುತ್ತಾ  ಆವೇಶ ಬಂದು ಕುಣಿಯುವರು ,

ಇತರ ದಿನಗಳಲ್ಲಿ ಕೂಡಾ ಮನೆ ಮನೆಗೆ ಬಂದು ಆಶೀರ್ವಾದ ಮಾಡಿ ಪ್ರೀತಿಯಿಂದ ಕೊಟ್ಟ ಕಾಣಿಕೆ ತೆಗೆದು ಕೊಂಡು ಹೋಗುವರು .ನಮ್ಮ ಊರಿನಲ್ಲಿ ಈಗ ಇವರನ್ನು ಕಾಣ ಸಿಗುವುದಿಲ್ಲ . 

ಪ್ರಸಿದ್ಧ ಕೊಡುಂಗಲ್ಲೂರು ಭಗವತಿ ಕ್ಷೇತ್ರದ  ವೆಳಿಚ್ಚ ಪ್ಪಾಡ್  ತುಳ್ಳಲ್(ಕುಣಿತ ) ನೋಡಲು

 https://www.youtube.com/watch?v=2xl94n81wiE&t=16s