ರಾಮ ವರ್ಮಾ ಬಾಲಮುರಳಿ ಕೃಷ್ಣ ಅವರ ಶಿಷ್ಯರು .ಅವರ ಛಾಪು ಎದ್ದು ಕಾಣಿಸುವುದು ಸಹಜ .ಹಸನ್ಮುಖ ,ಪ್ರತಿ ಕೃತಿ ಆರಂಭದಲ್ಲಿ ಯೂ ಅದರ ಕಿರು ಪರಿಚಯ . ಮುಖ ಚಹರೆ ಬದಲಿಸದೆ ಸಂಗೀತ ಸ್ವರ ದ ಏರಿಳಿತ ಪ್ರಸ್ತುತಿ ;ತಾರಕಕ್ಕೆ ಕಡಿಮೆ ಮಂದ್ರ ಜಾಸ್ತಿ . ,ಕನ್ನಡವೂ ಸೇರಿ ಎಲ್ಲಾ ಭಾಷೆಯ ಕೃತಿಗಳ ಅರ್ಥ ಅವರಿಗೆ ಕರತಮಾಲಕ . ಶುದ್ಧ ಸಾಹಿತ್ಯ .ಸಾಹಿತ್ಯಕ್ಕೆ ತಕ್ಕಂತೆ ಅಭಿನಯ .ಉದಾ;ಕೊಳಲನೂದುತ ಬಂದ ಎಂದು ಹಾಡುವಾಗ ಮಾಡಿ ತೋರಿಸುವರು . ನಿನ್ನೆಯ ಕಚೇರಿಯಲ್ಲಿ ದಾಸ ಸಾಹಿತ್ಯಕ್ಕೆ ಪ್ರಾಧಾನ್ಯತೆ .
ಕಚೇರಿ ಯಶಸ್ವಿ ಆಗಲು ಸಂಗೀತ ಗಾರರ ತಂಡ ಮತ್ತು ಆಸಕ್ತ ಪ್ರೇಕ್ಷಕ ಗಣ ಎರಡೂ ಮುಖ್ಯ .ನಿನ್ನೆ ವಯಲಿನ್ ನಲ್ಲಿ ಶ್ರೀ ಎಸ ಅರ ವೇಣು ; ಮುಖದಲ್ಲಿ ಮಾಸದ ತುಂಟ ನಗು .ನನಗೆ ಎಚ್ ಏನ್ ಭಾಸ್ಕರ್ ಅವರ ನಗು ನೆನಪಿಸುತ್ತದೆ . ರಾಮ ವರ್ಮ ಅವರ ಜತೆಗೆ ಪಳಗಿದ ಇವರಿಗೆ ಅವರ ಮನೋಧರ್ಮ ಸುಪರಿಚಿತ . ಅವರ ಪಕ್ಕ ವಾದ್ಯ ಕಚೇರಿಯ ಕಳೆ ಏರಿಸಿದ್ದ್ದು ಸತ್ಯ . ಮೃದಂಗ ದಲ್ಲಿ ಶ್ರೀ ಹರಿಕುಮಾರ್ ಮತ್ತು ಘಟಂ ನಲ್ಲಿ ಡಾ ಕಾರ್ತಿಕ್ ಇವರು ಹೇಳಿಕೇಳಿ ಘಟಾನುಘಟಿಗಳು . ಕಚೇರಿ ಉತ್ಸಾಹ ತಾರಕಕ್ಕೆ ಹೋಗಲು ಇವರೇ ಕಾರಣ .ಹೊಡಿ ನಗಾರಿ ಮೇಲೆ ಕೈಯ್ಯಾ ಎಂಬ ದಾಸರ ಕೀರ್ತನೆ ಆರಂಭದಲ್ಲಿ ಕಾರ್ತಿಕ್ ಘಟ ಘಟಿಸಿದ್ದು ನಗು ಉಕ್ಕಿಸಿತು .
ರಾಮ ವರ್ಮಾ ಪಕ್ಕ ವಾದ್ಯದವರು ಮತ್ತು ಪ್ರೇಕ್ಷಕರ ನಡುವೆ ಸದಾ ಸಂಹವನ ನಿರತರು . ಇದರಿಂದ ನಿರೀಕ್ಷಿತ ಉತ್ತೇಜನ . ರಾಜಕುಮಾರ ರಾಮ ವರ್ಮಾ ಅವರ ಸುಮಧುರ ಸಂಗೀತ ವರ್ಷ ಧಾರೆಯಲ್ಲಿ ಗುಡುಗು ಮಿಂಚುಗಳು ಇಲ್ಲ ,ಅವನ್ನು ತುಂಬಿದ್ದು ತಾಳ ವಾದ್ಯಗಳು .
ಒಳ್ಳೆಯ ಶ್ರೋತೃಗಳು .ನಿನ್ನೆ ಕೊನೆತನಕ ಎಂದರೆ ರಾತ್ರಿ ಒಂಬತ್ತು ವರೆಗೆ ತುಂಬಿದ ಸಭಾಂಗಣ . ಕೊನೆಗೆ ಎದ್ದು ನಿಂತು ಕರತಾಡನ . ನೀವು ಯಾವತ್ತು ಕರೆದರೂ ನಾನು ಬರುವೆನು ಎಂದು ಕಲಾವಿದರು ಮನ ತುಂಬಿ ಹೇಳಿದರು .
ಧ್ವನಿ ವರ್ಧಕ ವ್ಯವಸ್ಥೆ ಬಲು ಉತ್ತಮ ಮಟ್ಟದಲ್ಲಿ ಇತ್ತು . ಪ್ರಾಯೋಜಕರಾದ ಡಾ ಶ್ರೀ ಪ್ರಕಾಶ್ ಕುಟುಂಬ ಮತ್ತು ಅವರಿಗೆ ಸಹಕರಿಸಿದ ಪುತ್ತೂರು ನಿಕ್ಷಿತ್ ಅವರನ್ನು ಎಷ್ಟು ಕೊಂಡಾಡಿದರೂ ಸಾಲದು .
ನಿನ್ನೆ ಕಚೇರಿ ತಪ್ಪಿದ್ದರೆ ತುಂಬಲಾರದ ನಷ್ಟ ಆಗುತ್ತಿದದ್ದು ಕ್ಲೀಶೆ ಅಲ್ಲ
(ನಾನು ಕುಳಿತಲ್ಲಿಂದ ಪಿಟೀಲು ವಾದಕ ವೇಣು ಅವರ ಮುಖ ಸರಿಯಾಗಿ ಕಾಣಿಸುತ್ತಿರಲಿಲ್ಲ ,ಆದ್ದರಿಂದ ಕಚೇರಿ ಮುಗಿದ ಮೇಲೆ ಪ್ರತ್ಯೇಕ ಫೋಟೋ ತೆಗೆದು ಹಾಕಿದ್ದೇನೆ )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ