ಮುಖದ ಮಾಂಸ ಖಂಡಗಳಿಗೆ ಸಂದೇಶ ವಾಹಕವಾಗಿ ಮೆದುಳಿಂದ ಬರುವ ನರಕ್ಕೆ ಫೇಶಿಯಲ್ ನರ (ಮುಖದ ನರ )ಎನ್ನುವರು . ಮುಖದ ಮಾಂಸ ಖಂಡಗಳಿಗೆ,ಕಣ್ಣೀರ ಗ್ರಂಥಿ ಮತ್ತು ಲಾಲಾ ಗ್ರಂಥಿ ಗಳಿಗೆ ಸಂದೇಶ ವಾಹಕ , ಕಿವಿಯ ಭಾಗದ ಸ್ಪರ್ಶ ಜ್ಞಾನ ಗ್ರಾಹಕ ವಾಗಿ ಕೆಲಸ ಮಾಡುವುದು . ಎಡ ಮತ್ತು ಬಲ ಎಂದು ಫೇಶಿಯಲ್ ನರಗಳು ಇವೆ .
ಕೆಲವೊಮ್ಮೆ ಕಾಯಿಲೆಯಿಂದ ಈ ನರ ದ ಸುತ್ತ ನೀರು ತುಂಬಿ ನರ ಹಾಯ್ದು ಬರುವ ತಲೆ ಬುರುಡೆಯ ಸಪೂರವಾದ ರಂದ್ರ ನಾಳಗಳಲ್ಲಿ ಒತ್ತಿದಂತೆ ಆಗಿ ಕಾರ್ಯದಲ್ಲಿ ಅಸ್ತವ್ಯಸ್ತ ಉಂಟಾಗುವುದು . ಇದರಿಂದ ಒಂದು ಪಾರ್ಶ್ವದ ಮುಖ ಸ್ನಾಯುಗಳು ಸಂಪೂರ್ಣ ಅಥವಾ ಭಾಗಶಃ ಕಾರ್ಯ ವಿಮುಖ ವಾಗಿ ,ಕಣ್ಣು ಪೂರ್ತಿ ಮುಚ್ಚಲು ಅಸಾಧ್ಯ ವಾಗುವುದು ,ಬಾಯಿ ತೆರೆದಾಗ ಆರೋಗ್ಯವಾಗಿ ಇರುವ ಪಾರ್ಶ್ವಕ್ಕೆ ಎಳೆಯಲ್ಪಡುವದು . ರೋಗ ಪೀಡಿತ ಪಾರ್ಶ್ವದ ಕಣ್ಣಿನಲ್ಲಿ ಕಣ್ಣೀರು ಉತ್ಪತ್ತಿ ಕಡಿಮೆ ಆಗುವುದು .ಕಿವಿಯಲ್ಲಿ ನೋವು ಬರ ಬಹದು . ಬಾಯ ರುಚಿ ಗ್ರಹಣ ವ್ಯತ್ಯಯ ಆಗ ಬಹದು .
ಈ ಕಾಯಿಲೆ ಬಹು ಪಾಲು ಸ್ವಯಮ್ ವಾಸಿ ಆಗುವುದಾದರೂ ,ಆರಂಭದಲ್ಲಿ ಸ್ಟೀರಾಯ್ಡ್ ಔಷಧಿಗಳನ್ನು ಕೊಡುವದುದರಿಂದ ಸ್ವಲ್ಪ ಬೇಗನೇ ಆಗುವುದು . ಕಣ್ಣಿನ ರಕ್ಷಣೆಗೆ ಕೃತಕ ಕಣ್ಣೀರ ಹನಿಗಳನ್ನು ಕೊಡುವರು . ಫಿಸಿಯೋ ಥೆರಪಿ ಅಥವಾ ಕೃತಕ ವ್ಯಾಯಾಮ ಕೂಡಾ ಸಹಾಯ ಆಗುವದು .
ಈ ರೋಗದ ಬಗ್ಗೆ ಬಹಳ ಹಿಂದೆಯೇ ಅರಿವು ಇದ್ದರೂ ಸರ್ ಚಾರ್ಲ್ಸ್ ಬೆಲ್ ಎಂಬ ಸ್ಕಾಟಿಷ್ ವಿಜ್ಞಾನಿ ೧೮೨೧ ರಲ್ಲಿ ಇದರ ಬಗ್ಗೆ ರೋಯಲ್ ಸೊಸೈಟಿ ಯಲ್ಲಿ ವಿವರವಾದ ವೈಜ್ಞಾನಿಕ ಪ್ರಬಂಧ ಮಂಡಿಸಿ ಮನ್ನಣೆ ಗಳಿಸಿದುದರಿಂದ ಕಾಯಿಲೆಗೆ ಬೆಲ್ಸ್ ಪಾಲ್ಸಿ (ಬೆಲ್ಲನ ಅರೆ ಮುಖ ವಾತ ) ಎಂದು ಹೆಸರಾಯಿತು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ