ರಾಮಕೃಷ್ಣ ಮಿಷನ್ ನ ಮುಖ್ಯಸ್ಥರಾಗಿದ್ದ ಸ್ವಾಮಿ ರಂಗನಾಥಾನಂದ ಅವರ ಮೈ ಲೈಫ್ ಮೈ ವರ್ಕ್ ಓದುತ್ತಿದ್ದೇನೆ .ಸರಳ ಪ್ರಶ್ನೋತ್ತರ ಮಾದರಿಯಲ್ಲಿ ಅಮೂಲ್ಯ ಛಾಯಾ ಚಿತ್ರಗಳನ್ನು ಒಳ ಗೊಂಡಿದೆ .
ಅದರಿಂದ ಕೆಲವು ವಾಕ್ಯಗಳು .
ಧನ ಸಂಪಾದನೆಗೆ ಶಕ್ತಿ ಬೇಕು ,ಅದನ್ನು ತ್ಯಾಗ ಮಾಡಲು ಇನ್ನೂ ಹೆಚ್ಚಿನ ಶಕ್ತಿ ಬೇಕು .
ದಾನ ಮತ್ತು ಮಾನ ದ ದೇವರ ಆರಾಧನೆ ಮಾಡಬೇಕು . ರೋಗಿಗೆ ಚಿಕಿತ್ಸೆ ಮಾಡು ,ಹಸಿದವನಿಗೆ ಆಹಾರ ಅಥವಾ ಉದ್ಯೋಗ . ಇಲ್ಲಿ ಸೇವೆ ಕೊಳ್ಳುವನನ್ನು ಕೀಳಾಗಿ ನೋಡದೆ ಗೌರವದಿಂದ ಕಾಣುವುದು .
ನಾವು ಬಂಡ ತನವನ್ನು ಬಲಿಷ್ಟ ಮನಸ್ಸು ಎಂದು ತಪ್ಪು ತಿಳಿಯುತ್ತೇವೆ .
ನಾವು ಎಲ್ಲಾ ಮತದವರನ್ನೂ ಗೌರವಿಸುತ್ತೇವೆ .ಅಂತೆಯೇ ನಾಸ್ತಿಕರನ್ನೂ . ಅವರನ್ನು ಗೌರವಿಸುವಾಗ ಅವರ ಸನ್ನಡತೆಯ ವ್ಯಕ್ತಿತ್ವ ವನ್ನು ನೋಡುತ್ತೇವೆಯೇ ಹೊರತು ಅವರ ಮತ ನಂಬಿಕೆಯನ್ನು ಅಲ್ಲ .
ನಮ್ಮ ದೇಶವನ್ನು ಧರ್ಮ ನಿರಪೇಕ್ಷ ಎಂದು ಕರೆಯುವ ಬದಲು ಮತ ನಿರಪೇಕ್ಷ ಎಂದು ಕರೆಯ ಬೇಕಿತ್ತು ,
ನಮ್ಮ ರಾಜಕಾರಿಣಿಗಳು ಪಶ್ಚಿಮ ದೇಶಗಳ ಫುಟ್ ಬಾಲ್ ಆಟಗಾರರಂತೆ ಚೆಂಡನ್ನು ತುಳಿಯುವ ಬದಲು ಆಟಗಾರ ರ ನ್ನೇ ಆಕ್ರಮಣ ಮಾಡುವ ಹಾಗೆ ನಿಜ ಸಮಸ್ಯೆಗಳ ಮೇಲೆ ಯುದ್ಧ ಮಾಡದೇ ತಮ್ಮ ರಾಜಕೀಯ ಎದುರಾಳಿಗಳನ್ನು ಹಣಿಸಲು ನೋಡುತ್ತಿರುವುದು ವಿಷಾಧನೀಯ .
ಕರ್ಮಯೋಗ ಎಂದರೆ ಯಾವನಾದರೂ ಕಷ್ಟದಲ್ಲಿ ಇದ್ದರೆ ಅದು ಅವನ ಕರ್ಮ ಎಂದು ಕೈತೊಳೆದು ಕೊಳ್ಳುವುದು ಅಲ್ಲ .ಅವನಿಗೆ ಸಹಾಯ ಮಾಡುವುದೂ ಸೇರಿದೆ .
(ಮುಂದು ವರಿಯುವುದು )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ